AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Mobile Bonanza sale: ಫ್ಲಿಪ್‌ಕಾರ್ಟ್​ನಲ್ಲಿ ಶುರುವಾಗಿದೆ ಮೊಬೈಲ್ ಬೊನಾಂಜಾ ಸೇಲ್: ಸ್ಮಾರ್ಟ್​ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್

Flipkart Mobile Bonanza sale 2023: ಪ್ರಸಿದ್ಧ ಇ ಕಾಮರ್ಸ್ ತಾಣದ ಫ್ಲಿಪ್‌ಕಾರ್ಟ್​ನಲ್ಲಿ ಮೊಬೈಲ್ ಬೊನಾಂಜಾ ಸೇಲ್ ಲೈವ್ ಆಗಿದೆ. ಇದು ಡಿಸೆಂಬರ್ 6 ರವರೆಗೆ ನಡೆಯಲಿದೆ. ಈ ಸೇಲ್​ನಲ್ಲಿ ಪೋಕೋ X5 ಪ್ರೊ, ಭಾರಿ ಬೆಲೆ ಇಳಿಕೆಯನ್ನು ಪಡೆದುಕೊಂಡಿದೆ. ಇದು ರೂ. 18,999 ಕ್ಕೆ ಸೇಲ್ ಆಗುತ್ತಿದೆ. ರೂ. 4,000 ರಿಯಾಯಿತಿಯನ್ನು ನೀಡುತ್ತಿದೆ.

Flipkart Mobile Bonanza sale: ಫ್ಲಿಪ್‌ಕಾರ್ಟ್​ನಲ್ಲಿ ಶುರುವಾಗಿದೆ ಮೊಬೈಲ್ ಬೊನಾಂಜಾ ಸೇಲ್: ಸ್ಮಾರ್ಟ್​ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್
Flipkart Mobile Bonanza sale 2023
Vinay Bhat
|

Updated on: Dec 02, 2023 | 6:55 AM

Share

ಕಳೆದ ತಿಂಗಳು ಅತಿ ದೊಡ್ಡ ದೀಪಾವಳಿ ಸೇಲ್ ಅನ್ನು ಆಯೋಜಿಸಿ ಯಶಸ್ವಿಯಾಗಿದ್ದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಕೆಲವು ವಾರಗಳ ನಂತರ ಇದೀಗ ಮತ್ತೊಂದು ಮಾರಾಟ ಶುರುಮಾಡಿದೆ. ಫ್ಲಿಪ್‌ಕಾರ್ಟ್​ನಲ್ಲಿ ಇದೀಗ ಮೊಬೈಲ್ ಬೊನಾಂಜಾ ಸೇಲ್ ಲೈವ್ (Flipkart Mobile Bonanza sale) ಆಗಿದೆ ಮತ್ತು ಡಿಸೆಂಬರ್ 6 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್‌ನ 2023 ದೀಪಾವಳಿ ಮಾರಾಟದ ಸಮಯದಲ್ಲಿ ನೋಡಿದಂತೆ ಈ ಸೇಲ್​ನಲ್ಲೂ ಫೋನ್‌ಗಳಿಗೆ ಆಕರ್ಷಕವಾದ ರಿಯಾಯಿತಿಗಳನ್ನು ನೀಡಲಾಗಿದೆ. ನಥಿಂಗ್ ಫೋನ್ (2), ಸ್ಯಾಮ್​ಸಂಗ್ ಗ್ಯಾಲಕ್ಸಿ M14, ಪೋಕೋ X5 ಪ್ರೊ ಸೇರಿದಂತೆ ಅನೇಕ ಫೋನುಗಳ ಮೇಲೆ ಡಿಸ್ಕೌಂಟ್ ಇದೆ.

ಭಾರತದಲ್ಲಿ ಮೂಲತಃ 22,999 ರೂ. ಬೆಲೆಗೆ ಬಿಡುಗಡೆಯಾದ ಪೋಕೋ X5 ಪ್ರೊ, ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಮಾರಾಟದ ಸಮಯದಲ್ಲಿ ಭಾರಿ ಬೆಲೆ ಇಳಿಕೆಯನ್ನು ಪಡೆದುಕೊಂಡಿದೆ. ಇದು ರೂ. 18,999 ಕ್ಕೆ ಸೇಲ್ ಆಗುತ್ತಿದೆ. ಅಂದರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ರೂ. 4,000 ರಿಯಾಯಿತಿಯನ್ನು ನೀಡುತ್ತಿದೆ. ಇದು ಪ್ರಸ್ತುತ ರೂ. 20,000 ಕ್ಕಿಂತ ಕಡಿಮೆ ಇರುವ ಅತ್ಯುತ್ತಮ 5G ಫೋನ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಉನ್ನತ-ಮಟ್ಟದ ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ನೀಡಲಾಗಿದೆ.

ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್: ಬೆಲೆ 3 ಸಾವಿರಕ್ಕಿಂತ ಕಡಿಮೆ

ಇದನ್ನೂ ಓದಿ
Image
ವಿವೋದಿಂದ ಬಜೆಟ್ ಬೆಲೆಗೆ ಮತ್ತೊಂದು ​ಫೋನ್ ಬಿಡುಗಡೆ: ಏನಿದೆ ಫೀಚರ್ಸ್
Image
10 ಲಕ್ಷ ದಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ
Image
22000mAh ಬ್ಯಾಟರಿ: ಈ ರೀತಿಯ ಫೋನ್ ನೀವು ಹಿಂದೆಂದೂ ನೋಡಿರಲ್ಲ
Image
ಮಾರುಕಟ್ಟೆಗೆ ಬಂತು ರೆಡ್ಮಿ K70 ಸರಣಿ: ಧೂಳೆಬ್ಬಿಸುವುದು ಖಚಿತ-ಬೆಲೆ ಎಷ್ಟು?

ನಥಿಂಗ್ ಫೋನ್ (2) ಅನ್ನು ಫ್ಲಿಪ್‌ಕಾರ್ಟ್ ಮೂಲಕ ರೂ. 39,999 ಗೆ ಖರೀದಿಸಬಹುದು. 5G ಫೋನ್ ಈ ವರ್ಷದ ಆರಂಭದಲ್ಲಿ ರೂ. 44,999 ಕ್ಕೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಮೇಲೆ ರೂ. 5,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು. ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯೂ ಇದೆ.

ಅದೇ ರೀತಿ, ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಮಾರಾಟದ ಸಮಯದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ M14 ಕಡಿಮೆ ಬೆಲೆಗೆ ಲಭ್ಯವಿದೆ. ಇದು 4GB RAM + 128GB ಸ್ಟೋರೇಜ್ ಮಾದರಿಗಾಗಿ 13,399 ರೂ. ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿಮಾಡಲಾಗಿದೆ. ಈ ಸ್ಯಾಮ್‌ಸಂಗ್ ಫೋನ್‌ ಮೇಲೆ ಬ್ಯಾಂಕ್ ಆಫರ್ ಸಹ ಲಭ್ಯವಿದೆ. ಅಲ್ಲದೆ, ನಿಮ್ಮ ಬಜೆಟ್ 15,000 ರೂ. ಗಿಂತ ಕಡಿಮೆಯಿದ್ದರೆ ಇದು ಪ್ರಸ್ತುತ ಅತ್ಯುತ್ತಮ ಫೋನ್ ಡೀಲ್‌ಗಳಲ್ಲಿ ಒಂದಾಗಿದೆ.

ಮೊಟೊರೊಲಾ ಎಡ್ಜ್ 40, ಇದು 30,000 ಕ್ಕಿಂತ ಕಡಿಮೆ 5G ಫೋನ್‌ಗಳಲ್ಲಿ ಒಂದಾಗಿದೆ. 29,999 ರೂ. ವಿನ ಈ ಫೋನನ್ನು ಗ್ರಾಹಕರು 26,999 ರೂ. ಗೆ ಖರೀದಿಸಬಹುದು. ಉತ್ತಮ ಕಾರ್ಯಕ್ಷಮತೆಯೊಂದಿಗೆ ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಬಯಸುವ ಜನರು ಈ ಮೊಟೊರೊಲಾ ಫೋನ್ ಅನ್ನು ಖರೀದಿಸಬಹುದು. ಪ್ರೀಮಿಯಂ ಲೆದರ್ ಬ್ಯಾಕ್ ಪ್ಯಾನೆಲ್ ಅನ್ನು ಸಹ ಹೊಂದಿದೆ. ಅಂತೆಯೆ ರೆಡ್ಮಿ 12C 6,799 ಕಡಿಮೆ ಬೆಲೆಯಲ್ಲಿ ಪಟ್ಟಿಮಾಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ