- Kannada News Photo gallery How to Schedule Messages in WhatsApp Messaging Application Here is the Tech Tips
Tech Tips: ವಾಟ್ಸ್ಆ್ಯಪ್ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?: ಇಲ್ಲಿದೆ ಟ್ರಿಕ್
WhatsApp schedule message: ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ.
Updated on: Dec 04, 2023 | 6:55 AM

ನಾವು ಸಾಮಾನ್ಯವಾಗಿ ಯಾವುದೋ ಕೆಲಸದಲ್ಲಿ ಬ್ಯುಸಿ ಇದ್ದ ಸಂದರ್ಭ ವಾಟ್ಸ್ಆ್ಯಪ್ನಲ್ಲಿ ಸರಿಯಾದ ಸಮಯಕ್ಕೆ ಅಗತ್ಯ ಮೆಸೇಜ್ ಅಥವಾ ಫೋಟೋ ಕಳುಹಿಸಲು ಮರೆತುಹೋಗಿರುವ ಉದಾಹರಣೆ ಇದ್ದೇ ಇದೆ. ಆದರೆ, ಈ ಟೆನ್ಶನ್ಗೆ ಇಲ್ಲೊಂದು ಪರಹಾರವಿದೆ. ಅದುವೆ ಶೆಡ್ಯೂಲ್ ಮಾಡಿ ಇಡುವುದು. ವಾಟ್ಸ್ಆ್ಯಪ್ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು.

ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ. ಹೀಗೆ ಮಾಡುವುದರಿಂದ ನೀವು ಯಾವುದೇ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸಬಹುದು.

ಇದಕ್ಕಾಗಿ ನೀವು ಸ್ಕೆಡ್ ಇಟ್(SKEDit) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಬೇಕು. ಈ ಆ್ಯಪ್ ಯಾವುದೇ ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಶೆಡ್ಯೂಲ್ ಮಾಡಲು ನೆರವಾಗುತ್ತದೆ. ಆ್ಯಪ್ ಡೌನ್ಲೋಡ್ ಮಾಡಿ ಅಲ್ಲಿ ಕಳುಹಿಸಬೇಕಾದ ಮೆಸೇಜ್ ಅನ್ನು ಟೈಪ್ ಮಾಡಿ ಶೆಡ್ಯೂಲ್ ಮಾಡಿದರಾಯಿತು. ಅದು ಸರಿಯಾದ ಸಮಯಕ್ಕೆ ಅಟೋಮ್ಯಾಟಿಕ್ ಆಗಿ ರವಾನೆಯಾಗುತ್ತದೆ.

ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ SKEDit ಆ್ಯಪ್ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ ಸೈನ್ ಇನ್ ಪ್ರಕ್ರಿಯೆ ಮುಗಿಸಿ. ನಂತರ ಪ್ರಕಟಗೊಳ್ಳುವ ಲಿಸ್ಟ್ ನಿಂದ ವಾಟ್ಸ್ಆ್ಯಪ್ ಆಯ್ಕೆ ಮಾಡಬೇಕು. ಈಗ ವಾಟ್ಸ್ಆ್ಯಪ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಫೋನ್ ಸೇವೆ ಪ್ರವೇಶಕ್ಕೆ ಅನುಮತಿ ನೀಡಬೇಕು.

ಇದಾದ ಬಳಿಕ ಮತ್ತೆ ಅಪ್ಲಿಕೇಶನ್ಗೆ ಬಂದು ರೆಸಿಪಿಯಂಟ್ಗಳ ಹೆಸರನ್ನು ಸೇರಿಸಬೇಕು. ಈಗ ನೀವು ಶೆಡ್ಯೂಲ್ ಮಾಡಬಯಸುವ ಸಂದೇಶಕ್ಕೆ ಡೇಟ್ ಹಾಗೂ ಟೈಮ್ ನಿಗದಿಪಡಿಸಿ. ಹೀಗೆ ಮಾಡುವಾಗ ಇದರಲ್ಲಿ ನಿಮಗೆ ‘ಆಸ್ಕ್ ಮಿ ಬಿಫೋರ್ ಸೆಂಡಿಂಗ್’ ಹೆಸರಿನ ಟಾಗಲ್ ಆಯ್ಕೆ ಕೂಡ ಸಿಗಲಿದೆ.

ಒಂದು ವೇಳೆ ನೀವು ಈ ವೈಶಿಷ್ಟ್ಯವನ್ನು ಬಳಸಿದರೆ, ಸಂದೇಶ ಕಳುಹಿಸುವ ಮುನ್ನ ಇದು ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ನೀವು ಟಾಗಲ್ ಆಫ್ ಮಾಡಿಟ್ಟರೆ, ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ನಿಗದಿತ ಸಮಯಕ್ಕೆ ಸೆಂಡ್ ಆಗುತ್ತದೆ.



















