OLA Cab: ಬೆಂಗಳೂರಿಗರೇ ಗಮನಿಸಿ: ಓಲಾ ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್, ಪೇಮೆಂಟ್ ಮಾಡುವ ಅವಕಾಶ

Ola UPI Payment: ಪ್ರಸಿದ್ಧ ಕ್ಯಾಬ್ ಬುಕಿಂಗ್ ಸೇವಾ ಕಂಪನಿ ಓಲಾ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ, ಓಲಾ ಬಳಕೆದಾರರಿಗೆ ತಮ್ಮ ಅಪ್ಲಿಕೇಶನ್‌ನಲ್ಲಿ ನೇರವಾಗಿ ಡಿಜಿಟಲ್ ಪಾವತಿ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಈ ಬಗ್ಗೆ ಸಹ-ಸಂಸ್ಥಾಪಕ ಸಿಇಒ ಭವೇಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

OLA Cab: ಬೆಂಗಳೂರಿಗರೇ ಗಮನಿಸಿ: ಓಲಾ ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್, ಪೇಮೆಂಟ್ ಮಾಡುವ ಅವಕಾಶ
Ola UPI
Follow us
Vinay Bhat
|

Updated on:Dec 04, 2023 | 3:20 PM

ಪ್ರಸ್ತುತ, ಏಕೀಕೃತ ಪಾವತಿ ಇಂಟರ್ಫೇಸ್ ಅಂದರೆ UPI ಸೇವೆಗಳು ವೇಗವಾಗಿ ವಿಸ್ತರಿಸುತ್ತಿವೆ. ಗೂಡಂಗಡಿಗಳಿಂದ ಹಿಡಿದು ದೊಡ್ಡ ಶೋರೂಮ್‌ಗಳವರೆಗೆ, ಯುಪಿಐ ಪಾವತಿಗಳನ್ನು ಸ್ವೀಕರಿಸಲಾಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ರೀತಿಯ ಯುಪಿಐ ಪಾವತಿ ಸೇವೆಗಳು ಲಭ್ಯವಾಗಿವೆ. ಫೋನ್​ಪೇ, Zipp, ಪೇಟಿಎಮ್​ನಂತಹ ಜನಪ್ರಿಯ ಅಪ್ಲಿಕೇಶನ್‌ಗಳ ಜೊತೆಗೆ, ಎಲ್ಲಾ ರೀತಿಯ ಬ್ಯಾಂಕ್‌ಗಳು ಸಹ ತಮ್ಮದೇ ಆದ ವೇದಿಕೆಯಿಂದ ಯುಪಿಐ ಸೇವೆಗಳನ್ನು ಒದಗಿಸುತ್ತಿವೆ.

ಐಸಿಸಿಐ, ಎಸ್​ಬಿಐ, ಆ್ಯಕ್ಸಿಸ್, ಹೆಚ್​ಡಿಎಫ್​ಸಿ ನಂತಹ ಎಲ್ಲಾ ಬ್ಯಾಂಕ್‌ಗಳು UPI ಸೇವೆಗಳನ್ನು ಒದಗಿಸುತ್ತಿವೆ. ಇದೀಗ ಕ್ಯಾಬ್ ಬುಕಿಂಗ್ ಸೇವೆಗಳ ಕಂಪನಿ ಕೂಡ ಇತ್ತೀಚೆಗೆ ಹೊಸ ವೈಶಿಷ್ಟ್ಯವನ್ನು ತಂದಿದೆ. ಇನ್ನು ಮುಂದೆ, ಓಲಾ ಬಳಕೆದಾರರಿಗೆ ತಮ್ಮ ಅಪ್ಲಿಕೇಶನ್‌ನಲ್ಲಿ ನೇರವಾಗಿ ಡಿಜಿಟಲ್ ಪಾವತಿ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಸಹ-ಸಂಸ್ಥಾಪಕ ಸಿಇಒ ಭವೇಶ್ ಅಗರ್ವಾಲ್ ಎಕ್ಸ್​ನಲ್ಲಿ ಇದನ್ನು ಘೋಷಿಸಿದ್ದಾರೆ. ಓಲಾ ಬಳಕೆದಾರರು ಈಗ ತಮ್ಮ ಅಪ್ಲಿಕೇಶನ್‌ನಿಂದ ನೇರವಾಗಿ ಪಾವತಿಗಳನ್ನು ಮಾಡಬಹುದು ಎಂದು ಹೇಳಿದ್ದಾರೆ.

ಬೆಲೆ ಘೋಷಿಸದೆ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಟೆಕ್ನೋ: ಯಾವುದು ನೋಡಿ

ಇದನ್ನೂ ಓದಿ
Image
ಡಿಸೆಂಬರ್​ನಲ್ಲಿ ಮಾರುಕಟ್ಟೆಗೆ ಎಷ್ಟು ಸ್ಮಾರ್ಟ್​ಫೋನ್​ಗಳು ಬರಲಿವೆ?
Image
12GB RAM ಹೊಂದಿರುವ ಈ 5G ಸ್ಮಾರ್ಟ್​ಫೋನ್ ಬೆಲೆ ಕೇವಲ 9,999 ರೂ.
Image
ವಾಟ್ಸ್​ಆ್ಯಪ್ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ?
Image
ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?

ಸಾಮಾನ್ಯವಾಗಿ ಓಲಾದಿಂದ ಕ್ಯಾಬ್ ಬುಕ್ ಮಾಡಿಕೊಂಡರೆ, ಪೇಮೆಂಟ್ ಮೋಡ್​ಗೆ ಹೋಗಿ ಮನಿ ವ್ಯಾಲೆಟ್ ಅಥವಾ ಕ್ಯಾಶ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಡಿಜಿಟಲ್ ಪಾವತಿಯಾದರೆ, ಅದನ್ನು ಇತರ ಯುಪಿಐ ಸೇವೆಗಳ ಮೂಲಕ ಮಾಡಬೇಕಾಗಿತ್ತು. ಆದರೆ ಈಗ ಥರ್ಡ್ ಪಾರ್ಟಿ UPI ಅಪ್ಲಿಕೇಶನ್ ಅಗತ್ಯವಿಲ್ಲದೇ ಓಲಾ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು. ಇದರೊಂದಿಗೆ ಇಲ್ಲಿಯವರೆಗೆ ಕೇವಲ ಬುಕಿಂಗ್‌ಗೆ ಸೀಮಿತವಾಗಿದ್ದ ಓಲಾ ಆ್ಯಪ್​ನಲ್ಲಿ ಪಾವತಿ ಕೂಡ ಮಾಡಬಹುದು.

ಬಳಕೆದಾರರು ನೇರವಾಗಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಅಥವಾ ಅಪ್ಲಿಕೇಶನ್ ಮೂಲಕ ಪಾವತಿಸಬಹುದು ಎಂದು ಕಂಪನಿ ಹೇಳುತ್ತದೆ. ಓಲಾ ಮೊದಲು ಈ ವೈಶಿಷ್ಟ್ಯವನ್ನು ಬೆಂಗಳೂರಿನ ನಿವಾಸಿಗಳಿಗೆ ಲಭ್ಯವಾಗುವಂತೆ ಮಾಡುತ್ತಿದೆ. ನಂತರ, ದೇಶಾದ್ಯಂತ ಎಲ್ಲಾ ಬಳಕೆದಾರರಿಗೆ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Mon, 4 December 23