ಕೇವಲ 7,990 ರೂ. ಗೆ ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 HD ಫೋನ್ ಬಿಡುಗಡೆ: ಫೀಚರ್ಸ್ ಏನಿದೆ?
Infinix Smart 8 HD Launched in India: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಇನ್ಫಿನಿಕ್ಸ್ ಸ್ಮಾರ್ಟ್ 8 HD ಸ್ಮಾರ್ಟ್‌ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ ಏಕೈಕ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,990 ರೂ. ನಿಗದಿ ಮಾಡಲಾಗಿದೆ.
ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದರಲ್ಲಿ ಇನ್ಫಿನಿಕ್ಸ್ ಕಂಪನಿ ಎತ್ತಿದ ಕೈ. ಅದರಂತೆ ಇದೀಗ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ತನ್ನ ಸ್ಮಾರ್ಟ್ ಸರಣಿ ಅಡಿಯಲ್ಲಿ ಹೊಸ ಇನ್ಫಿನಿಕ್ಸ್ ಸ್ಮಾರ್ಟ್ 8 HD (Infinix Smart 8 HD) ಫೋನನ್ನು ಅನಾವರಣ ಮಾಡಿದೆ. ಈ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಬೆಲೆಗೆ ತಕ್ಕಂತಹ ಪ್ರೊಸೆಸರ್, 5000mAh ಬ್ಯಾಟರಿ ನೀಡಲಾಗಿದ್ದು, AI- ಬೆಂಬಲಿತ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಕೂಡ ಹೊಂದಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 HD ಬೆಲೆ:
ಇನ್ಫಿನಿಕ್ಸ್ ಸ್ಮಾರ್ಟ್ 8 HD ಸ್ಮಾರ್ಟ್‌ಫೋನ್ ಸದ್ಯಕ್ಕೆ ದೇಶದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ ಏಕೈಕ 3GB RAM + 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 7,990 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಮೇಲೆ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ 10 ಪ್ರತಿಶತ ತ್ವರಿತ ರಿಯಾಯಿತಿ ಪಡೆಯಬಹುದು. ಇದು ಕ್ರಿಸ್ಟಲ್ ಗ್ರೀನ್, ಶೈನಿ ಗೋಲ್ಡ್ ಮತ್ತು ಟಿಂಬರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಹ್ಯಾಂಡ್‌ಸೆಟ್ ಪ್ರಸ್ತುತ ಅಮೆಜಾನ್ ಮೂಲಕ ಖರೀದಿಸಬಹುದು.
84 ದಿನಗಳ ವ್ಯಾಲಿಡಿಟಿ, ಅನ್ಲಿಮಿಟೆಡ್ 5G ಡೇಟಾ: ಜಿಯೋದಿಂದ ಹೊಚ್ಚಹೊಸ ಯೋಜನೆ ಬಿಡುಗಡೆ
ಇನ್ಫಿನಿಕ್ಸ್ ಸ್ಮಾರ್ಟ್ 8 HD ಫೀಚರ್ಸ್:
ಡ್ಯುಯಲ್-ಸಿಮ್ (ನ್ಯಾನೋ) ಇನ್ಫಿನಿಕ್ಸ್ ಸ್ಮಾರ್ಟ್ 8 HD ಆಂಡ್ರಾಯ್ಡ್ 13 (Go ಆವೃತ್ತಿ) ಆಧಾರಿತ XOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ HD+ (720×1,612 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದೆ. ಈ ಹೊಸ ಹ್ಯಾಂಡ್‌ಸೆಟ್‌ನಲ್ಲಿ ಮ್ಯಾಜಿಕ್ ರಿಂಗ್ ಎಂಬ ಸಾಫ್ಟ್‌ವೇರ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದು ಚಾರ್ಜ್ ಮಾಡುವಾಗ ಅನಿಮೇಷನ್‌ಗಳನ್ನು ತೋರಿಸುತ್ತದೆ, ಅಲ್ಲದೆ ಕಡಿಮೆ-ಬ್ಯಾಟರಿ ರಿಮೈಂಡರ್‌ಗಳು ಮತ್ತು ಇತರ ಅಧಿಸೂಚನೆಗಳನ್ನು ಪ್ರದರ್ಶಿಸುತ್ತದೆ.
ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಯುನಿಸಾಕ್ T606 SoC ಯಿಂದ ಚಾಲಿತವಾಗಿದೆ, ಜೊತೆಗೆ 3GB RAM ಮತ್ತು 64GB ಸಂಗ್ರಹಣೆಯನ್ನು ಹೊಂದಿದೆ. ಮೆಮೊರಿಯನ್ನು 6GB ವರೆಗೆ ವಿಸ್ತರಿಸಬಹುದು. ಹಾಗೆಯೆ ಮೈಕ್ರೊ SD ಕಾರ್ಡ್ ಮೂಲಕ (2TB ವರೆಗೆ) ಆನ್‌ಬೋರ್ಡ್ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 8 HD 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ರಿಂಗ್ ಫ್ಲ್ಯಾಷ್ ಜೊತೆಗೆ AI ಲೆನ್ಸ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಾಗಿ, ಫ್ಲ್ಯಾಷ್‌ನೊಂದಿಗೆ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.
ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಬ್ಯಾಟರಿಯು 39 ಗಂಟೆಗಳವರೆಗೆ ಕರೆ ಮಾಡುವ ಸಮಯ, 50 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ ಮತ್ತು 36 ದಿನಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಸಮಯವನ್ನು ಒಂದೇ ಚಾರ್ಜ್‌ನಲ್ಲಿ ನೀಡುತ್ತದೆ ಎಂದು ಕಂಪನಿ ಹೇಳಿದೆ. ಸಂಪರ್ಕ ಆಯ್ಕೆಗಳಲ್ಲಿ USB ಟೈಪ್-C ಪೋರ್ಟ್, ಬ್ಲೂಟೂತ್ ಮತ್ತು Wi-Fi ಅನ್ನು ಒಳಗೊಂಡಿವೆ. ಈ ಹ್ಯಾಂಡ್‌ಸೆಟ್ ಬಯೋಮೆಟ್ರಿಕ್ ಅನ್‌ಲಾಕಿಂಗ್‌ಗಾಗಿ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಬರುತ್ತದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ