Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಅನ್ನು ಚಿನ್ನದಂತಹ ಬೆಲೆಗೆ ಇಲ್ಲಿ ಮಾರಾಟ ಮಾಡಿ

Old Phone Sell: ನಿಮ್ಮ ಬಳಿ ಹಳೆಯ ಮೊಬೈಲ್ ಇದ್ದರೆ ಅದು ಯೂಸ್ ಇಲ್ಲವೆಂದು ಮೂಲೆಯಲ್ಲಿ ಇಡಬೇಡಿ. ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಸಹ ಅತ್ಯುತ್ತಮ ಬೆಲೆಯನ್ನು ಪಡೆಯುತ್ತವೆ. ಮೊಬೈಲ್ ಹಳೆಯದೆಂಬ ಕಾರಣಕ್ಕೆ ಅತಿ ಕಡಿಮೆ ಬೆಲೆಗೆ ಕೂಡ ಮಾರಾಟ ಮಾಡಬೇಡಿ. ಈ ಸ್ಮಾರ್ಟ್‌ಫೋನ್‌ಗೆ ನೀವು ಉತ್ತಮ ಬೆಲೆಯನ್ನು ಪಡೆಯಬಹುದು. ಅದು ಹೇಗೆ?, ಇಲ್ಲಿದೆ ಮಾಹಿತಿ.

Tech Tips: ನಿಮ್ಮ ಹಳೆಯ ಸ್ಮಾರ್ಟ್​ಫೋನ್ ಅನ್ನು ಚಿನ್ನದಂತಹ ಬೆಲೆಗೆ ಇಲ್ಲಿ ಮಾರಾಟ ಮಾಡಿ
Smartphones
Follow us
Vinay Bhat
|

Updated on:Dec 08, 2023 | 2:22 PM

ನಿಮ್ಮ ಸ್ಮಾರ್ಟ್​ಫೋನ್ (Smartphone) ಹಳೆಯದಾದ ಕಾರಣ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಹೊರಟಿದ್ದೀರಾ?. ಹಾಗಿದ್ದರೆ ಒಮ್ಮೆ ಇಲ್ಲಿ ಗಮನಿಸಿ. ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಅತ್ತುತ್ತಮ ಬೆಲೆಗೆ ಸೇಲ್ ಮಾಡಬಹುದು. ಇದಕ್ಕಾಗಿ ನೀವು ಈ ಅಂಗಡಿಯಿಂದ ಆ ಅಂಗಡಿಗೆ ಅಲೆಯಬೇಕಿಲ್ಲ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡುವುದು ತುಂಬಾ ಸುಲಭ. ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮಾಹಿತಿಯನ್ನು ಒಮ್ಮೆ ಆ್ಯಡ್ ಮಾಡಿದರೆ, ಅದರ ಬೆಲೆಯನ್ನು ಕೂಡ ಅಂದಾಜು ಮಾಡಬಹುದು. ಸ್ಮಾರ್ಟ್​ಫೋನ್ ಮಾರಾಟ ಮಾಡಲು ಇರುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿವರ ಇಲ್ಲಿದೆ ನೋಡಿ.

OLX : ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಮೊಬೈಲ್ ಅನ್ನು ಮಾರಾಟ ಮಾಡಲು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಿಂದಲೇ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಬಹುದು. ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಅನೇಕ ಜನರ ಮೊದಲ ಆಯ್ಕೆ ಒಎಲ್​ಎಕ್ಸ್ ಆಗಿದೆ. ಇದರಲ್ಲಿ ಜಾಹೀರಾತಿನ ವಿಧಾನವೂ ಸರಳವಾಗಿದೆ.

ಕ್ಯಾಶಿಫೈ: ಇದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದೆ. ಇಲ್ಲಿ ಹಳೆಯ ಮೊಬೈಲ್‌ಗಳನ್ನು ಮಾರಾಟ ಮಾಡಬಹುದು. ಈ ವೇದಿಕೆಯಲ್ಲಿ ಗ್ರಾಹಕರು ತಮ್ಮ ಮೊಬೈಲ್‌ಗೆ ಸರಿಯಾದ ಬೆಲೆಯನ್ನು ತಿಳಿದುಕೊಳ್ಳಬಹುದು. ಇದರಲ್ಲಿ ಕೂಡ ನೀವು ನಿಮ್ಮ ಫೋನ್ ಅನ್ನು ಮನೆಯಿಂದಲೇ ಮಾರಾಟ ಮಾಡಬಹುದು. ಈ ಪ್ಲಾಟ್‌ಫಾರ್ಮ್ ಉಚಿತ ಪಿಕಪ್ ಅನ್ನು ಕೂಡ ನೀಡುತ್ತದೆ.

ಇದನ್ನೂ ಓದಿ
Image
ಸಿಮ್ ಕಾರ್ಡ್‌ ಕುರಿತು ಮಹತ್ವದ ನಿರ್ಧಾರ: ಹೊಸ ವರ್ಷದಿಂದ ಹೊಸ ನಿಯಮ
Image
ಫ್ಲಿಪ್​ಕಾರ್ಟ್​ನಿಂದ ಬಿಗ್ ಇಯರ್ ಎಂಡ್ ಸೇಲ್ ಘೋಷಣೆ: ಫೋನುಗಳಿಗೆ ಊಹಿಸಲಾಗದ
Image
ಭಾರತದಲ್ಲಿ ಇದೀಗ 6,999 ರೂ. ಗೆ ಐಫೋನ್​ನಂತಹ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ
Image
84 ದಿನಗಳ ವ್ಯಾಲಿಡಿಟಿ, ಅನಿಯಮಿತ 5G ಡೇಟ: ಜಿಯೋದಿಂದ ಹೊಸ ಯೋಜನೆ ಬಿಡುಗಡೆ

100W ಫಾಸ್ಟ್ ಚಾರ್ಜರ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ರಿಯಲ್ ಮಿ ಜಿಟಿ 5 ಪ್ರೊ: ಬೆಲೆ ಎಷ್ಟು?

Quikr: ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನೀವು ನಿಮ್ಮ ಸೆಕಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಸುಲಭವಾಗಿ ಜಾಹೀರಾತು ಕೊಡಬಹುದು. ಈ ವೇದಿಕೆಯು ನಿಮಗೆ ಉತ್ತಮ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಸುರಕ್ಷಿತ ಪಾವತಿ ಗೇಟ್‌ವೇ ಕೂಡ ಇಲ್ಲಿ ಲಭ್ಯವಿದೆ. ಆದ್ದರಿಂದ ನೀವು ಸುಲಭವಾಗಿ ಹಣವನ್ನು ಪಡೆಯಬಹುದು.

Budli.in : ಹಳೆಯ ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಲು ಇದು ವಿಶೇಷ ವೆಬ್‌ಸೈಟ್ ಆಗಿದೆ. ಬಳಸಿದ ಮೊಬೈಲ್ ಫೋನ್‌ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ನಿಮ್ಮ ಫೋನ್​ಗೆ ಉಚಿತ ಪಿಕಪ್ ಸೇವೆ ಕೂಡ ಲಭ್ಯವಿದೆ.

Cashkar : ಈ ವೆಬ್‌ಸೈಟ್‌ನ ಮುಖ್ಯ ಉದ್ದೇಶವೆಂದರೆ ವಸ್ತುಗಳನ್ನು ಮರುಬಳಕೆ ಮಾಡುವುದು. ಈ ಪ್ಲಾಟ್‌ಫಾರ್ಮ್‌ನಲ್ಲಿ, ಗ್ರಾಹಕರು ಹಳೆಯ ಸ್ಮಾರ್ಟ್‌ಫೋನ್ ಅಥವಾ ಇತರೆ ಯಾವುದೇ ಸಾಧನವನ್ನು ಸುಲಭವಾಗಿ ಮಾರಾಟ ಮಾಡಬಹುದು. ಇದರಲ್ಲಿ ಉತ್ತಮವಾದ ಬೆಲೆಯನ್ನು ಪಡೆಯುತ್ತೀರಿ.

ಅಮೆಜಾನ್-ಫ್ಲಿಪ್​ಕಾರ್ಟ್: ಇ-ಕಾಮರ್ಸ್ ಪ್ಲಾಟ್‌ಫಾರ್ಮ್​ಗಳಾದ ಫ್ಲಿಪ್​ಕಾರ್ಟ್- ಅಮೆಜಾನ್ ಹಳೆಯ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಸಹ ನೀಡುತ್ತವೆ. ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಮೊಬೈಲ್‌ನ ಬೆಲೆಯನ್ನು ಪರಿಶೀಲಿಸಿದನಂತರ, ಬ್ರಾಂಡ್, ಮಾದರಿ, ಸ್ಥಿತಿ ಮತ್ತು ಆದ್ಯತೆಗಳ ಆಧಾರದ ಮೇಲೆ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ ಎಂಬುದು ನೆನಪಿರಲಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Fri, 8 December 23

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್