ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಸ್ಟೈನಬಿಲಿಟಿ ಪಾರ್ಕ್ ಸ್ಥಾಪನೆ: ಏನಿದು? ಇಲ್ಲಿದೆ ಮಾಹಿತಿ
ಎಲೆಕ್ಟ್ರಾನಿಕ್ಸ್ ಸಿಟಿಯ ಹೃದಯಭಾಗದಲ್ಲಿ ಎಲ್ಸಿಟಾ (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ)ಯು ‘ಸಸ್ಟೈನಬಿಲಿಟಿ ಪಾರ್ಕ್’ ಅನ್ನು (ಪ್ರಕೃತಿ ರಕ್ಷಿಸಲು ಮತ್ತು ಗುಣಮಟ್ಟದ ಜೀವನ ಉತ್ತೇಜನಕ್ಕಾಗಿ ಇರುವುದು) ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆಗಾಗಿ ಸ್ಥಾಪಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 15: ಎಲೆಕ್ಟ್ರಾನಿಕ್ಸ್ ಸಿಟಿಯ (Electronics City) ಹೃದಯಭಾಗದಲ್ಲಿ ಎಲ್ಸಿಟಾ (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ)ಯು ‘ಸಸ್ಟೈನಬಿಲಿಟಿ ಪಾರ್ಕ್’ (Sustainability Park) ಅನ್ನು (ಪ್ರಕೃತಿ ರಕ್ಷಿಸಲು ಮತ್ತು ಗುಣಮಟ್ಟದ ಜೀವನ ಉತ್ತೇಜನಕ್ಕಾಗಿ ಇರುವುದು) ತ್ಯಾಜ್ಯ ಸಂಸ್ಕರಣೆ (Waste Management) ಮತ್ತು ಮರುಬಳಕೆಗಾಗಿ ಸ್ಥಾಪಿಸಲಾಗಿದೆ. ಈ ಸಸ್ಟೈನಬಿಲಿಟಿ ಪಾರ್ಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಶಂಸೆಗೆ ಒಳಗಾಗಿದೆ.
ನಗರದಲ್ಲಿ ತ್ಯಾಜ್ಯ ನಿರ್ವಹಣೆಯೇ ತಲೆನೋವಾಗಿ ಪರಿಣಮಿಸಿದೆ ಇದನ್ನು ಪರಿಹರಿಸಲು ‘ಸಸ್ಟೈನಬಿಲಿಟಿ ಪಾರ್ಕ್’ ಸಹಾಯಕಾರಿಯಾಗಲಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ (BSWML) ನಗರದ ವಿವಿಧಡೆ ಸ್ಥಾಪಿಸಲು ಚಿಂತಿಸಿದೆ. ಇದರಿಂದ ಭೂ ಮಾಲಿನ್ಯ, ಅಂತರ್ಜಲ ಮಾಲಿನ್ಯವನ್ನು ತಪ್ಪಿಸಬಹುದು.
ಹೇಗೆ ಕೆಲಸ ಮಾಡುತ್ತದೆ
ಸಸ್ಟೈನಬಿಲಿಟಿ ಪಾರ್ಕ್ ಅನ್ನು ಎರಡು ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತದೆ. ಕೈಗಾರಿಕೆಗಳು, MNCಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಹೊಂದಿರುವ ನೆರೆಹೊರೆಯಿಂದ ಸಂಗ್ರಹಿಸಲಾದ ತ್ಯಾಜ್ಯವನ್ನು ಇಲ್ಲಿ ಡಂಪ್ ಮಾಡಲಾಗುತ್ತದೆ. ಪ್ರತಿದಿನ ಹಸಿ ಕಸ ಸೇರಿದಂತೆ 10 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.
ಇಲ್ಲಿ ಒಣ ಮತ್ತು ಹಸಿ ಕಸವನ್ನು ವಿಂಗಡಿಸಲಾಗುತ್ತದೆ. ಸಂಗ್ರಹಿಸಲಾದ ಕಸದಲ್ಲಿ ಆಹಾರ ತ್ಯಾಜ್ಯಗಳನ್ನು (ಶೇ40) ರಷ್ಟು ಜೈವಿಕ ಅನಿಲ ಘಟಕಕ್ಕೆ ಕಳುಹಿಸಲಾಗುತ್ತದೆ. ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ಸಂಗ್ರಹಿಸಲಾದ ಎಲೆಗಳು ಮತ್ತು ಕಡ್ಡಿಗಳನ್ನು ಗೊಬ್ಬರ ಅಥವಾ ಮರದ ತುಂಡುಗಳಾಗಿ ಪರಿವರ್ತಿಸಲಾಗುತ್ತದೆ.
ಇದನ್ನೂ ಓದಿ: ಆರ್‌ವಿ ರಸ್ತೆಯಿಂದ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಸದ್ಯಕ್ಕೆ ಆರಂಭವಿಲ್ಲ; ಸಾರ್ವತ್ರಿಕ ಚುನಾವಣೆಯ ನಂತರವೇ ಪ್ರಾರಂಭ
ಒಣ (ಟೆಟ್ರಾ ಪ್ಯಾಕ್‌ಗಳು, ಸಿಲ್ವರ್ ಫಾಯಿಲ್, ಹಾಲಿನ ಕವರ್‌ಗಳು, ಪೇಪರ್ ಕಪ್‌ಗಳು, ಮತ್ತು ಮಲ್ಟಿಲೇಯರ್ ಪ್ಲಾಸ್ಟಿಕ್‌ಗಳಂತಹ 38 ವರ್ಗಗಳ) ತ್ಯಾಜ್ಯವನ್ನು ಟ್ರೊಮೆಲ್ ಯಂತ್ರ ಮತ್ತು ಬ್ಯಾಲಿಸ್ಟಿಕ್ ವಿಭಜಕದ ಮೂಲಕ ಗಾತ್ರದ ಆಧಾರದ ಮೇಲೆ ಬೇರ್ಪಡಿಸಲಾಗುತ್ತದೆ.
ಈ ಒಣ ಕಸವನ್ನು ಟಿಶ್ಯೂ ಪೇಪರ್, ಪ್ಲಾಸ್ಟಿಕ್ ಕವರ್‌ಗಳು, ಪಿಇಟಿ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಆಹಾರ ಕಂಟೈನರ್‌ಗಳನ್ನು ಮರುಬಳಕೆ ಮಾಡಲಾಗುತ್ತದೆ. ಅಲ್ಲದೆ ಬಟ್ಟೆ ಗುಂಡಿಗಳು, ರಸ್ತೆ ಮೇಲ್ಮೈ ಟಾಫಿಂಗ್, ಪಿಇಟಿ ಬಾಟಲಿಗಳು, ಬಕೆಟ್‌ಗಳು, ಶೂಗಳು, ಥರ್ಮಾಕೋಲ್ ಮತ್ತು ಆಭರಣ ಪೆಟ್ಟಿಗೆಗಳಾಗಿ ಮಾರ್ಪಡಿಸಲಾಗುತ್ತದೆ.
ಕೆರೆಗೆ ವರದಾನ
1.2 ಮಿಲಿಯನ್ ಲೀಟರ್ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ, ಅಕ್ಕಪಕ್ಕದ ಹಳ್ಳಿಗಳು ಮತ್ತು ವಸತಿ ಪ್ರದೇಶಗಳ ಕೊಳಚೆ ನೀರನ್ನು ಮೆಂಬರೇನ್ ಬಯೋ ರಿಯಾಕ್ಟರ್‌ನಿಂದ ಸಂಸ್ಕರಿಸಲಾಗುತ್ತದೆ. ಧೂಳು ಮತ್ತು ಕೊಳೆಯನ್ನು ತೆಗೆದುಹಾಕುವ ಪೊರೆಯ ಮೂಲಕ ನೀರು ಹಾದುಹೋಗುತ್ತದೆ. ಸಂಸ್ಕರಿಸಿದ ನಂತರ, ಮರುಬಳಕೆಯ ನೀರನ್ನು ಸಸ್ಯಗಳಿಗೆ ನೀರುಣಿಸಲು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಸ್ಥಾವರವನ್ನು ಸ್ಥಾಪಿಸಿದ ನಂತರ, ಪಕ್ಕದ ಕೆರೆಗೆ ಹರಿಯುವ ಕೊಳಚೆ ನೀರನ್ನು ಇಲ್ಲಿ ಸಂಸ್ಕರಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ