ಬೆಂಗಳೂರಿನಲ್ಲಿ ಅಪಘಾತ ಪ್ರಕರಣ ಹೆಚ್ಚಳ: ಮೃತರಾದವರೆಷ್ಟು? ಇಲ್ಲಿದೆ ಅಂಕಿ-ಸಂಖ್ಯೆ

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಆಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯೂ ಅಧಿಕವಾಗಿದೆ. ನವೆಂಬರ್​ ಕೊನೆಯಲ್ಲಿ ನಗರದಲ್ಲಿ ಸಂಭವಿಸಿದ 793 ಮಾರಣಾಂತಿಕ ಅಪಘಾತಗಳಲ್ಲಿ 823 ಜನರು ಮೃತಪಟ್ಟಿದ್ದಾರೆ. 3,705 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಅಪಘಾತ ಪ್ರಕರಣ ಹೆಚ್ಚಳ: ಮೃತರಾದವರೆಷ್ಟು? ಇಲ್ಲಿದೆ ಅಂಕಿ-ಸಂಖ್ಯೆ
ಪ್ರಾತಿನಿಧಿಕ ಚಿತ್ರ
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on:Dec 15, 2023 | 4:27 PM

ಬೆಂಗಳೂರು, ಡಿಸೆಂಬರ್​​​ 15: ನಗರದಲ್ಲಿ ಅಪಘಾತ (accident) ಪ್ರಕರಣಗಳು ಹೆಚ್ಚಳವಾಗಿದ್ದು, ಕಳೆದ ವರ್ಷದಲ್ಲಿ ಸರಾಸರಿ 9 ಅಪಘಾತ ಸಂಭವಿಸಿದ್ದರೆ, ಈ ವರ್ಷ 14ಕ್ಕೆ ಏರಿಕೆ ಆಗಿದೆ. ಆ ಮೂಲಕ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆ ಆಗಿದೆ. ಇನ್ನು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯೂ ಅಧಿಕವಾಗಿದೆ. ನವೆಂಬರ್​ ಕೊನೆಯಲ್ಲಿ ನಗರದಲ್ಲಿ ಸಂಭವಿಸಿದ 793 ಮಾರಣಾಂತಿಕ ಅಪಘಾತಗಳಲ್ಲಿ 823 ಜನರು ಮೃತಪಟ್ಟಿದ್ದಾರೆ.

ಅದೇ ರೀತಿ 3,705 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳು ವರದಿಯಾಗಿದ್ದು, 3,802 ಜನರಿ ಗಾಯಗಳಾಗಿದ್ದು, ಒಟ್ಟು 4,499 ಅಪಘಾತ ಕೇಸ್​ಗಳು ದಾಖಲಾಗಿವೆ. 2022 ರಲ್ಲಿ 751 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 771 ಜನರು ಮೃತಪಟ್ಟಿದ್ದರು. 3,702 ಮಾರಣಾಂತಿವಲ್ಲದ ಅಪಘಾತ ಪ್ರಕರಣಗಳಲ್ಲಿ 3,218 ಮಂದಿ ಗಾಯಗೊಂಡಿದ್ದರು. ಒಟ್ಟು 3,218 ಅಪಘಾತ ಕೇಸ್​ಗಳು ದಾಖಲಾಗಿದ್ದವು.‌

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ

ಕಳೆದ 11 ತಿಂಗಳಲ್ಲಿ ಪ್ರತಿದಿನಕ್ಕೆ‌ ನಗರದಲ್ಲಿ ಸರಾಸರಿ 14 ಅಪಘಾತ ಪ್ರಕರಣ ದಾಖಲಾಗಿದ್ದರೆ, ಕಳೆದ ವರ್ಷ 9 ರ ಅಸುಪಾಸಿನಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಸಂಚಾರ ಪೊಲೀಸರು ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುತ್ತಿದ್ದಾರೆ. ರಸ್ತೆಯಲ್ಲಿ ನಿಂತು ವಾಹನಗಳನ್ನ ಅಡ್ಡಗಟ್ಟಿ ಪ್ರಕರಣ ದಾಖಲಿಸುವ ಬದಲು ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ ಮೆಂಟ್​ಗೆ ಒತ್ತು ನೀಡಲಾಗಿದೆ.

ಆಯಕಟ್ಟಿನ ಜಂಕ್ಷನ್, ತಿರುವುಗಳಲ್ಲಿ ಅತ್ಯಾಧುನಿಕ ಕ್ಯಾಮರಾಗಳ ಮೂಲಕ ಡಿಜಿಟಲ್ ಪ್ರಕರಣಗಳನ್ನ ದಾಖಲಿಸಲಾಗುತ್ತಿದೆ‌. ದಿನಕ್ಕೆ ಬೆಂಗಳೂರಿನಲ್ಲಿ 10 ರಿಂದ 12 ಸಾವಿರ ಸಂಚಾರ ನಿಯಮ ಉಲ್ಲಂಘನೆ ಕೇಸ್ ಗಳನ್ನ ದಾಖಲಿಸಲಾಗುತ್ತಿದೆ. ಈ ಮಧ್ಯೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ವೇಗವಾಗಿ ವಾಹನ ಚಲಾಯಿಸಿ ಹೆಚ್ಚು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.

ಸ್ವಯಂ ಅಪಘಾತ ಹೆಚ್ಚು

ವೇಗವಾಗಿ ವಾಹನ ಚಲಾಯಿಸುವ ಭರದಲ್ಲಿ ಅಜಾಗರೂಕವಾಗಿ ಚಾಲನೆ ಮಾಡಲಾಗುತ್ತಿದ್ದು, ನಿಯಂತ್ರಣ ಕಳೆದುಕೊಂಡು ಎದುರಿಗೆ ಬರುವ ವಾಹನಗಳಿಗೆ ಅಥವಾ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತಗಳು ಹೆಚ್ಚುತ್ತಿವೆ. ಹೆಲ್ಮೆಟ್ ರಹಿತ,‌ ಮದ್ಯ ಸೇವನೆ ಹಾಗೂ ನಿರ್ಲಕ್ಷ್ಯದಿಂದ ಚಾಲಕರು ಅಪಘಾತವೆಸಗುತ್ತಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ಸಮಸ್ಯೆ: ಯಶವಂತಪುರ-ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಸಂಚಾರ ದಟ್ಟಣೆ ಅವಧಿಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಆದ್ಯತೆ ನೀಡುತ್ತಿದ್ದಾರೆ. ಜೊತೆಗೆ ಡಿಜಿಟಲ್ ಮೂಲಕ ಕೇಸ್​ ದಾಖಲಿಸುವ ಪ್ರಮಾಣ ಹೆಚ್ಚಾದಂತೆ ವಾಹನ ಸವಾರರಲ್ಲಿ ನಿರ್ಲಕ್ಷ್ಯ ಹೆಚ್ಚುತ್ತಿದೆ. ಪೊಲೀಸರು ತಮ್ಮನ್ನ‌ ಪ್ರಶ್ನಿಸುತ್ತಿಲ್ಲ‌ ಎಂಬ ಮನೋಭಾವ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಅಗೌರವ ಹೆಚ್ಚಾಗಿದೆ.

ವರ್ಷ    ಮಾರಣಾಂತಿಕ ಅಪಘಾತ ಕೇಸ್​         ಮೃತಪಟ್ಟವರ ಸಂಖ್ಯೆ

2023:                       794                                  823

2022:                       751                                   771

ವರ್ಷ   ಮಾರಣಾಂತಿಕವಲ್ಲದ ಅಪಘಾತ,  ಗಾಯಗೊಂಡವರು,  ಅಪಘಾತ ಸಂಖ್ಯೆ

2023:         3705                             3802                                    4499

2022:           3072                             3218                                    3823

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:22 pm, Fri, 15 December 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ