ಆನೇಕಲ್: ಹಾಡಹಗಲೇ ಖತರ್ನಾಕ್ ಕಳ್ಳರ ಕೈಚಳಕ: ಗಮನ ಬೇರೆಡೆಗೆ ಸೆಳೆದು 10 ಲಕ್ಷ ರೂ. ಕಳ್ಳತನ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು ಹಾಡಹಗಲೇ ಬ್ಯಾಗ್​ನಲ್ಲಿ 10 ಲಕ್ಷ ರೂ. ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ನಾಲ್ವರು ಖದೀಮರಿಂದ ಕೃತ್ಯವೆಸಗಲಾಗಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆನೇಕಲ್: ಹಾಡಹಗಲೇ ಖತರ್ನಾಕ್ ಕಳ್ಳರ ಕೈಚಳಕ: ಗಮನ ಬೇರೆಡೆಗೆ ಸೆಳೆದು 10 ಲಕ್ಷ ರೂ. ಕಳ್ಳತನ
ಮೆಡಿಕಲ್ ಶಾಪ್​
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2023 | 3:48 PM

ಆನೇಕಲ್​​, ಡಿಸೆಂಬರ್​​ 15: ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು ಹಾಡಹಗಲೇ ಬ್ಯಾಗ್​ನಲ್ಲಿ 10 ಲಕ್ಷ ರೂ. ಕಳ್ಳತನ (theft) ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ. ಎರಡು ಬೈಕ್​ಗಳಲ್ಲಿ ಬಂದಿದ್ದ ನಾಲ್ವರು ಖದೀಮರಿಂದ ಕೃತ್ಯವೆಸಗಲಾಗಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಚಂದಾಪುರದ ಸಾಯಿ ಮೆಡಿಕಲ್ ಮಾಲೀಕ ಮಾದವ ರೆಡ್ಡಿ ಎನ್ನುವವರು ಬ್ಯಾಂಕಿನಿಂದ 10 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಬ್ಯಾಗ್​​ನಲ್ಲಿದ್ದ ಹಣವನ್ನ ಸಹೋದರನಿಗೆ ನೀಡುವಂತೆ ಮಾದವ ರೆಡ್ಡಿ ಚಾಲಕ ಮಂಜುನಾಥ್​ಗೆ ಹೇಳಿ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಜೆ ತೆಗೆದುಕೊಂಡಿದ್ದಕ್ಕೆ ಕಿರುಕುಳ, KDDL ಕಂಪನಿ ಮ್ಯಾನೇಜರ್ ವಿರುದ್ಧ ಡೆತ್​ನೋಟ್ ಬರೆದಿಟ್ಟು ಕಾರ್ಮಿಕ ಆತ್ಮಹತ್ಯೆ

ಮೆಡಿಕಲ್ ಅಂಗಡಿ ಮುಂದೆ ಚಾಲಕ ಹಣದ ಬ್ಯಾಗ್ ಹಿಡಿದು ನಿಂತಿದ್ದಾರೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಖದೀಮರು, ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಶರ್ಟ್ ಗಲೀಜಾಗಿದೆ ಎಂದು ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಹಣವಿದ್ದ ಬ್ಯಾಗ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಕೆಕೆಆರ್‌ಟಿಸಿ ಬಸ್ ಡಿಕ್ಕಿ: ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಕಲಬುರಗಿ: ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಜಿಲ್ಲಾ ಕಾರಾಗೃಹದ ಬಳಿ ಸಂಭವಿಸಿದೆ. ತಿಪ್ಪಣ್ಣ ಇಜೇರಿ(30), ರಾಜೇದ್ರ ಇಜೇರಿ(20) ಮೃತ ದುರ್ದೈವಿಗಳು. ರಾಣಪ್ಪ ಕಟ್ಟಿಮನಿ ಖಣದಾಳ ಸೇರಿದಂತೆ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸಾವು

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮ್ಮನ ಕೆರೆಯಂಗಳದಲ್ಲಿ ನಡೆದಿದೆ. ಬೆಂಗಳೂರು-ಕೋಲಾರ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಘಟನೆ ಸಂಭವಿಸಿದೆ. ಕುರಿಗಾಯಿ ಕೂದಲಮ್ಮಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.