AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನ ಮಹಿಳೆಗೆ ಬೆದರಿಸಿ 27 ಲಕ್ಷ ಹಣ ಪೀಕಿದ ಸೈಬರ್ ವಂಚಕರು, 6 ಲಕ್ಷ ಕಳೆದುಕೊಂಡ ನಿವೃತ್ತ ಅಧಿಕಾರಿ

ಹಣ ಡಬ್ಬಲಿಂಗ್‌ ಆಸೆ ಆಯ್ತು, ಕೆಲಸ ಕೊಡಿಸುವ ನೆಪದಲ್ಲಿ ವಂಚನೆ ಆಯ್ತು, ಇದೀಗ ಸೈಬರ್ ವಂಚಕರು ಜನರಿಗೆ ಭಯ ಹುಟ್ಟಿಸಿ ಹಣ ವಸೂಲಿ ಮಾಡುವ ಕುತಂತ್ರವನ್ನು ರೂಪಸಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ಮಹಿಳೆಯನ್ನ ಬೆದರಿಸಿ ಸೈಬರ್ ಅಪರಾಧಿಗಳು 27‌ ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

ತುಮಕೂರಿನ ಮಹಿಳೆಗೆ ಬೆದರಿಸಿ 27 ಲಕ್ಷ ಹಣ ಪೀಕಿದ ಸೈಬರ್ ವಂಚಕರು, 6 ಲಕ್ಷ ಕಳೆದುಕೊಂಡ ನಿವೃತ್ತ ಅಧಿಕಾರಿ
ತುಮಕೂರಿನ ಮಹಿಳೆಗೆ ಬೆದರಿಸಿ 27 ಲಕ್ಷ ಹಣ ಪೀಕಿದ ಸೈಬರ್ ವಂಚಕರು, 6 ಲಕ್ಷ ಕಳೆದುಕೊಂಡ ನಿವೃತ್ತ ಅಧಿಕಾರಿ (ಸಾಂದರ್ಭಿಕ ಚಿತ್ರ)Image Credit source: iStock Photo
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Dec 15, 2023 | 10:46 AM

Share

ತುಮಕೂರು, ಡಿ.15: ಸೈಬರ್ (Cyber crime) ವಂಚಕರು ಜನರಿಗೆ ಭಯ ಹುಟ್ಟಿಸಿ ಹಣ ವಸೂಲಿ ಮಾಡುವ ಕುತಂತ್ರವನ್ನು ರೂಪಸಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ಮಹಿಳೆಯನ್ನ ಬೆದರಿಸಿ 27‌ ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಇನ್ನೊಂದೆಡೆ, ಸೈಬರ್ ವಂಚಕರ ನಗ್ನ ವಿಡಿಯೋ ಕಾಲ್ ಬಲೆಗೆ‌ ಸಿಲುಕಿ ನಿವೃತ್ತ ಸಹಾಯಕ ನಿರ್ದೇಶಕರೊಬ್ಬರು 6.13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ತುಮಕೂರು ನಗರದ‌ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆಯಿಂದ ಸೈಬರ್ ಖದೀಮರು 27 ಲಕ್ಷ ದೋಚಿದ್ದಾರೆ. ಮಹೇಂದ್ರಿ ಎಂಬವರಿಗೆ ದೂರವಾಣಿ ಕರೆ ಮಾಡಿದ ಸೈಬರ್ ಖದೀಮರು, ನಾವು ಮುಂಬೈ ಪೊಲೀಸರು, ನೀವು ಸಾರ್ವಜನಿಕರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದೀರಿ ಎಂದು ದೂರು ದಾಖಲಾಗಿದೆ. ಇದನ್ನು ಮುಚ್ಚಿ ಹಾಕಲು ಹಣ ನೀಡುವಂತೆ ಬೇಡಿಕೆ ಇಟ್ಟು 27 ಲಕ್ಷ ಹಣ ಪೀಕಿದ್ದಾರೆ. ಬಳಿಕ ಸೈಬರ್ ವಂಚಕರ ಮೋಸದ ಬಲೆಗೆ ಬಿದ್ದಿರುವುದು ತಿಳಿದ ಮಹೇಂದ್ರಿ, ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್​ ಹೆಸರಿನಲ್ಲಿ ವಂಚನೆ: 15 ದಿನದಲ್ಲಿ ಮೂರು ಕೋಟಿ ಕಳೆದುಕೊಂಡ ಏಳು ಜನರು, ಏನಿದು ಡಿಜಿಟಲ್ ಅರೆಸ್ಟ್?

ಆರು ಲಕ್ಷ ಕಳೆದುಕೊಂಡು ನಿವೃತ್ತ ಸಹಾಯಕ ನಿರ್ದೇಶಕ

ಸೈಬರ್ ವಂಚಕರ ನಗ್ನ ವಿಡಿಯೋ ಬಲೆಗೆ‌ ಸಿಲುಕಿ ನಿವೃತ್ತ ಸಹಾಯಕ ನಿರ್ದೇಶಕರೊಬ್ಬರು 6.13 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಾಣಿಕ್ಯಾಚಾರ್ ಎಂಬವರಿಗೆ ವಾಟ್ಸ್​ಆ್ಯಪ್ ಮೂಲಕ ವಿಡಿಯೋ ಕರೆ ಬಂದಿದೆ. ವಿಡಿಯೋ ಕಾಲ್ ರಿಸೀವ್ ಮಾಡಿದ ತಕ್ಷಣ ಸೈಬರ್ ಖದೀಮರು ನಗ್ನ ಚಿತ್ರ ಪ್ರದರ್ಶನ ಮಾಡಿ ಸ್ಕ್ರೀನ್ ರೆಕಾರ್ಡಿಂಗ್ ಮಾಡಿ ಬಳಿಕ ಬೆದರಿಕೆ ಹಾಕಲು ಆರಂಭಿಸಿದ್ದಾರೆ.

ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಭೀತಿಗೊಂಡ ಮಾಣಿಕ್ಯಚಾರ್, ಒಟ್ಟಾರೆಯಾಗಿ 6.13 ಲಕ್ಷ ಹಣವನ್ನ ವಂಚಕರಿಗೆ ಕಳಿಸಿದ್ದಾರೆ. ಬಳಿಕ ತುಮಕೂರು ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ