ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಅಪಘಾತಗಳು ಹೆಚ್ಚಾಗಿರುವ ಬಗ್ಗೆ ವರದಿಯಾಗಿದ್ದು, ಸಾವಿನ ಸಂಖ್ಯೆಯೂ ದ್ವಿಗುಣವಾಗಿದೆ. ಹಾಗಾಗಿ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿಗೆ ಸಂಚಾರಿ ಇಲಾಖೆಯಿಂದ ಚಾಟಿ ಬೀಸಲು ಮುಂದಾಗಿದೆ. 

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ
ಬಿಎಂಟಿಸಿ ಬಸ್ (ಸಂಗ್ರಹ ಚಿತ್ರ)
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Dec 06, 2023 | 2:55 PM

ಬೆಂಗಳೂರು, ಡಿಸೆಂಬರ್​​​ 06: ಬಿಎಂಟಿಸಿ ಬಸ್ (BMTC bus) ಚಾಲಕರ ನಿರ್ಲಕ್ಷ್ಯದಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಅಪಘಾತಗಳು ಹೆಚ್ಚಾಗಿರೋ ಬಗ್ಗೆ ವರದಿಯಾಗಿದ್ದು, ಸಾವಿನ ಸಂಖ್ಯೆಯೂ ದ್ವಿಗುಣವಾಗಿದೆ. ಹಾಗಾಗಿ ಸಂಚಾರಿ ನಿಯಮಗಳನ್ನ ಉಲಂಘಿಸುತ್ತಿರುವ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿಗೆ ಸಂಚಾರಿ ಇಲಾಖೆಯಿಂದ ಚಾಟಿ ಬೀಸಲು ಮುಂದಾಗಿದೆ.

ಒಂದು ವರ್ಷದಲ್ಲಿ ಬಿಎಂಟಿಸಿಯಿಂದ 34 ಜನರು ಸಾನ್ನಪ್ಪಿದ್ದರೆ, 97 ಜನರು ಅಪಘಾತಕ್ಕೊಳಗಾಗಿದ್ದಾರೆ.  ಕೆಎಸ್​ಆರ್​ಟಿಸಿ ಅಪಘಾತದಿಂದ ಹತ್ತು ಮಂದಿ ಸಾವನ್ನಪ್ಪಿದ್ದರೆ, 28 ಜನರು ಅಪಘಾತಕ್ಕೊಳಗಾಗಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್​: ಬೆಂಗಳೂರಿನಲ್ಲಿ ಗುಂಡಿಗಳದ್ದೇ ದರ್ಬಾರ್​: ವಾಹನ ಸವಾರರ ಪರದಾಟ

ಸಂಚಾರಿ ಇಲಾಖೆಯ ತನಿಖೆಯಲ್ಲಿ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆ ಬೆಳಕಿಗೆ ಬಂದಿದೆ. ಎರಡೂ ಸಾರಿಗೆ ಇಲಾಖೆಗೆ ದಂಡ ಕಟ್ಟಲು ಪತ್ರ ಬರೆದಿದ್ದ ಬೆನ್ನಲ್ಲೇ ಕೋಟ್ಯಾಂತರ ದಂಡ ಪಾವತಿ ಸಂಚಾರಿ ನಿಯಮ ಉಲ್ಲಂಘಿಸಿರುವುದರಲ್ಲಿ ಕೆಎಸ್​ಆರ್​ಟಿಸಿಗಿಂತ ಬಿಎಂಟಿಸಿಯೇ ಹೆಚ್ಚು.

ಇದನ್ನೂ ಓದಿ: ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಸಮಸ್ಯೆ: ಸಂಚಾರಿ ಪೊಲೀಸರ ಹೊಸ ಮಾರ್ಗದಿಂದ ಟ್ರಾಫಿಕ್ ನಿವಾರಣೆ

13917 ಸಂಚಾರಿ ನಿಯಮಗಳನ್ನು ಬಿಎಂಟಿಸಿ ಉಲ್ಲಂಘಿಸಿದೆ. ಕೆಎಸ್​ಆರ್​ಟಿಸಿ 3347 ಸಂಚಾರಿ ನಿಯಮ ಉಲ್ಲಂಘಿಸಿದೆ. ಹಾಗಾಗಿ ಒಂದು ಕೋಟಿ ನಾಲ್ಕು ಲಕ್ಷದ ಹತ್ತು ಸಾವಿರ ರೂ. ದಂಡವನ್ನು ಬಿಎಂಟಿಸಿ ಕಟ್ಟಿದೆ. ಕೆಎಸ್​ಆರ್​ಟಿಸಿ 14 ಲಕ್ಷ ರೂ ದಂಡ ಪಾವತಿಸಿದೆ. ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಅಪಘಾತಗಳನ್ನ ಹೆಚ್ಚು ಮಾಡುವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಲಾಗಿದೆ.

              ಮಾರಣಾಂತಿಕ             ಮಾರಣಾಂತಿಕವಲ್ಲದ

  • 2020:          22                             49
  • 2021:          27                              58
  • 2022:         37                               85
  • 2023:         34                               97

ಕಾಂಗ್ರೆಸ್​ ತನ್ನ ಪಂಚ ಯೋಜನೆಗಳ ಪೈಕಿ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಿಎಂಟಿಸಿ ಬಸ್‌ಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ಮಹಿಳೆಯರಿಂದಲೇ ತುಂಬಿ ಹೋಗುತ್ತವೆ. ಆದರೆ ಬಸ್‌ಗಳ ಸಂಖ್ಯೆ ಮಾತ್ರ ಅಷ್ಟೇ ಇದೆ. ಇದಕ್ಕೆ ಪರಿಹಾರ ಎನ್ನುವಂತೆ ಬರೋಬ್ಬರಿ 900 ಬಸ್‌ಗಳು ಬಿಎಂಟಿಸಿ ಬಳಗ ಸೇರುತ್ತಿವೆ.

BMTC ಅಲರ್ಟ್​​: ಹೊಸ ಸಿಸ್ಟಮ್ ಜಾರಿ

ಬಿಎಂಟಿಸಿ ಬಸ್​ನಲ್ಲಿ ಯುವತಿಗೆ ‌ಕಂಡಕ್ಟರ್ ಕಿರುಕುಳ ಕೊಟ್ಟಿದ್ದರ ಬಗ್ಗೆ‌ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಇದರಿಂದ ಬಿಎಂಟಿಸಿ ಎಚ್ಚೆತ್ತಿದೆ. ಮಹಿಳಾ ಪ್ರಯಾಣಿಕರ ಆತಂಕ ಹೋಗಲಾಡಿಸಲು ಬಿಎಂಟಿಸಿ ಬಸ್​​ಗಳಲ್ಲಿ ಪ್ಯಾನಿಕ್​ ಬಟನ್​, ಎಸ್ಓಎಸ್ ಸಿಸ್ಟಮ್ ಜಾರಿಗೆ ತಂದಿದೆ. ಕಿರುಕುಳದ ಸಂದರ್ಭದಲ್ಲಿ ಸೀಟ್​ ಪಕ್ಕದ ಪ್ಯಾನಿಕ್​ ಬಟನ್ ಪ್ರೆಸ್​ ಮಾಡಿದರೆ ಬಸ್ ಕ್ಯಾಮರಾ ಆನ್ ಆಗುತ್ತೆ. ಕಂಟ್ರೋಲ್ ರೂಮ್‍ಗೆ ಮೆಸೇಜ್ ಹೋಗುತ್ತೆ. ಬಸ್ ಮಾಹಿತಿ, ಲೊಕೇಷನ್ ಎಲ್ಲವೂ ಸೆಂಟ್​​ ಆಗುತ್ತೆ. ಕೂಡಲೇ ಮಹಿಳಾ ಪಿಂಕ್​ ಸಾರಥಿ ಪಡೆ ಆಗಮಿಸುತ್ತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:53 pm, Wed, 6 December 23