ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಸಮಸ್ಯೆ: ಸಂಚಾರಿ ಪೊಲೀಸರ ಹೊಸ ಮಾರ್ಗದಿಂದ ಟ್ರಾಫಿಕ್ ನಿವಾರಣೆ

ಬೆಂಗಳೂರು ಸಂಚಾರಿ ಪೊಲೀಸರು ಟ್ರಾಫಿಕ್ ಕಡಿಮೆ ಮಾಡಲು ಕೆಲವು ಮಾರ್ಗಗಳನ್ನು ಅನುಸರಿಸುತ್ತಿದ್ದು ಅವಶ್ಯಕತೆ ಇರುವ ಕಡೆ ಬ್ಯಾರಿಗೇಡ್​ಗಳನ್ನು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಕೆಆರ್ ಪುರಂ ತೂಗು ಸೇತುವೆಯ ಮುಂಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಸಂಚಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ ಮತ್ತು ಸ್ಕೈವಾಕ್‌ನ ಕೆಳಗೆ 100 ಮೀಟರ್ ಹಿಂದಕ್ಕೆ ಬಸ್ ಸ್ಟಾಪನ್ನು ಶಿಫ್ಟ್ ಮಾಡಲಾಗಿದೆ.

ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಸಮಸ್ಯೆ: ಸಂಚಾರಿ ಪೊಲೀಸರ ಹೊಸ ಮಾರ್ಗದಿಂದ ಟ್ರಾಫಿಕ್ ನಿವಾರಣೆ
ಟಿನ್ ಫ್ಯಾಕ್ಟರಿ ಬಳಿ ಟ್ರಾಫಿಕ್ ಸಮಸ್ಯೆ: ಸಂಚಾರಿ ಪೊಲೀಸರ ಹೊಸ ಮಾರ್ಗದಿಂದ ಟ್ರಾಫಿಕ್ ನಿವಾರಣೆ
Follow us
| Updated By: ಆಯೇಷಾ ಬಾನು

Updated on: Dec 05, 2023 | 9:08 AM

ಬೆಂಗಳೂರು, ಡಿ.05: ಪೂರ್ವ ಬೆಂಗಳೂರಿನ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಬಳಿಯಿರುವ ಎಂಎಂ ಟೆಂಪಲ್ (ಟಿನ್ ಫ್ಯಾಕ್ಟರಿ) ಜಂಕ್ಷನ್‌ನಲ್ಲಿ ಒಂದು ಸರಳ ಸೂತ್ರದಿಂದ ಟ್ರಾಫಿಕ್ ದಟ್ಟಣೆ ಕಡಿಮೆಯಾಗಿದೆ. ಹಾಗೂ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಓಡಾಡಲು ರಸ್ತೆ ಸುರಕ್ಷಿತವಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಟ್ರಾಫಿಕ್ ಕಡಿಮೆ ಮಾಡಲು ಕೆಲವು ಮಾರ್ಗಗಳನ್ನು ಅನುಸರಿಸುತ್ತಿದ್ದು ಅವಶ್ಯಕತೆ ಇರುವ ಕಡೆ ಬ್ಯಾರಿಗೇಡ್​ಗಳನ್ನು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

ಕೆಆರ್ ಪುರಂ ತೂಗು ಸೇತುವೆಯ ಮುಂಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಸಂಚಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ ಮತ್ತು ಸ್ಕೈವಾಕ್‌ನ ಕೆಳಗೆ 100 ಮೀಟರ್ ಹಿಂದಕ್ಕೆ ಬಸ್ ಸ್ಟಾಪನ್ನು ಶಿಫ್ಟ್ ಮಾಡಲಾಗಿದೆ. ಈ ಹಿಂದೆ, ಸೇತುವೆಯ ಮೇಲೆ ಹೋಗುವ ಎಲ್ಲಾ ಬಸ್‌ಗಳು ಸೇತುವೆಯ ಪ್ರಾರಂಭದಲ್ಲಿಯೇ ಬಂದು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದವು. ಇದರಿಂದ ಇತರೆ ವಾಹನಗಳು ಸೇತುವೆ ಮೇಲೆ ಹೋಗಲಾಗದೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಕೆಲವೊಮ್ಮೆ ಕಸ್ತೂರಿನಗರ ಡೌನ್‌ ರ್ಯಾಂಪ್‌ವರೆಗೆ ವಾಹನಗಳು ನಿಲ್ಲುತ್ತಿದ್ದವು. ಆದರೆ ಈಗ ಬಸ್ ನಿಲ್ದಾಣವನ್ನು ಶಿಫ್ಟ್ ಮಾಡಿದರಿಂದ ಸಾವಿರಾರು ಪಾದಚಾರಿಗಳು, ಬಸ್ ಮತ್ತು ಮೆಟ್ರೋ ಪ್ರಯಾಣಿಕರು ಸೇತುವೆಯ ಮೇಲಿಂದ ನಡೆದುಕೊಂಡು ಬಂದು ಬಸ್ ಹಿಡಿಯಲು ಸಹಾಯಕವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ದಕ್ಕೆಯಾಗದಂತೆ ಸ್ಕೈವಾಕ್‌ನ ಪಕ್ಕಕ್ಕೆಯೇ ಹೊಸಕೋಟೆ, ಮದನಪಲ್ಲಿ ಮತ್ತು ಇತರ ಸ್ಥಳಗಳಿಗೆ ಹೋಗುವ ಬಸ್‌ಗಳನ್ನು ಹತ್ತಲು ಪ್ರಯಾಣಿಕರಿಗೆ ಅನುವು ಮಾಡಿಕೊಡಲಾಗಿದೆ.

ಮಹದೇವಪುರ, ವೈಟ್‌ಫೀಲ್ಡ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ಬಸ್‌ಗಳು ಮೆಟ್ರೋ ನಿಲ್ದಾಣದ ಎಕ್ಸಿಟ್ ‘ಎ’ ಹೊರಗೆ ಬಸ್ ಬೇ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿದ್ದು, ಮೆಟ್ರೋ ನಿಲ್ದಾಣದಿಂದ ನಿರ್ಗಮಿಸುವಾಗ ಪ್ರಯಾಣಿಕರು ನೇರವಾಗಿ ಬಸ್‌ಗಳನ್ನು ಹತ್ತಲು ಸುಲಭವಾಗುತ್ತದೆ.

ಇದನ್ನೂ ಓದಿ: Bengaluru Traffic: ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನ ಸಂಚಾರಕ ನಿಷೇಧ, ಮಾರ್ಗಸೂಚಿ ಬದಲಾವಣೆ ಹೊರಡಿಸಿದ ಟ್ರಾಫಿಕ್ ಪೊಲೀಸ್

ಜಂಟಿ ಸಂಚಾರಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಈ ಹೊಸ ಯೋಜನೆಗೆ ಸಹಕರಿಸುವಂತೆ ಸಂಚಾರ ಪೊಲೀಸರು, ಸರ್ಕಾರಿ ಮತ್ತು ಖಾಸಗಿ ಬಸ್ ನಿರ್ವಾಹಕರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

“ಬುಧವಾರದಿಂದ, ನಾವು ಬಸ್‌ಗಳನ್ನು ಪ್ರತ್ಯೇಕಿಸಲು ಪ್ರಾರಂಭಿಸಿದ್ದೇವೆ – ಮಹದೇವಪುರ ಮತ್ತು ವೈಟ್‌ಫೀಲ್ಡ್ ಕಡೆಗೆ ಹೋಗುವವರಿಗೆ ಮೆಟ್ರೋ ಪಿಲ್ಲರ್‌ನ ಎಡಕ್ಕೆ ಹೋಗಲು ನಿರ್ದೇಶಿಸಲಾಗಿದೆ, ಆದರೆ ತೂಗು ಸೇತುವೆಯ ಮೇಲೆ ಹೋಗುವ ಇತರ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ನೇರವಾಗಿ ಹೋಗುತ್ತವೆ” ಎಂದು ಅವರು ಹೇಳಿದರು.

ಇದರಿಂದ ಟ್ರಾಫಿಕ್ ದಟ್ಟಣೆ ತೀವ್ರವಾಗಿ ಇಳಿಮುಖವಾಗಿದೆ ಮತ್ತು ಮುಖ್ಯರಸ್ತೆಯಲ್ಲಿ ತಡೆಗೋಡೆ ಇಲ್ಲದ ಕಾರಣ ಬೆನ್ನಿಗಾನಹಳ್ಳಿ ಮತ್ತು ಹೂಡಿ ನಡುವೆ ಸಂಚಾರ ಸುಗಮವಾಗಿದೆ ಎಂದರು.

ಇದೀಗ ಬ್ಯಾರಿಕೇಡ್‌ ಹಾಕಲಾಗಿರುವ ಬಸ್‌ ನಿಲ್ದಾಣವನ್ನು ಮಂಗಳವಾರದ ವೇಳೆಗೆ ಸ್ಕೈವಾಕ್‌ ಕೆಳಗಿರುವ ಹೊಸ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಿಸಲು ಯೋಜಿಸಲಾಗಿದೆ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಳೆಯ ಬಳಕೆಯಾಗದ ಫುಟ್‌ಓವರ್ ಸೇತುವೆಯನ್ನು ತೆಗೆದುಹಾಕಲು ಬಿಬಿಎಂಪಿಗೆ ತಿಳಿಸಲಾಗಿದೆ, ಇದು ಪ್ರಯಾಣಿಕರಿಗೆ ಸ್ವಲ್ಪ ಜಾಗವನ್ನು ಮುಕ್ತಗೊಳಿಸುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ