Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS ವಸ್ತು ಸಂಗ್ರಹಾಲಯ ಪ್ರವೇಶಕ್ಕೆ ಗೂಳಿಹಟ್ಟಿ ಶೇಖರ್​ಗೆ ನಿರಾಕರಣೆ: ಮೌನಕ್ಕೆ ಶರಣಾದ ಬಿಜೆಪಿ ನಾಯಕರು

ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ನಾಗಪುರದ ಆರ್​ಎಸ್​ಎಸ್​ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶಕ್ಕೆ ನಿರಾಕರಿಸಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಬಿಜೆಪಿ ಹಾಗೂ ಆರ್​ಎಸ್​ಎಸ್​ ಅನ್ನು ವ್ಯಂಗ್ಯವಾಡಿದೆ. ಆದ್ರೆ, ಬಿಜೆಪಿ ನಾಯಕರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಇದರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

RSS ವಸ್ತು ಸಂಗ್ರಹಾಲಯ ಪ್ರವೇಶಕ್ಕೆ ಗೂಳಿಹಟ್ಟಿ ಶೇಖರ್​ಗೆ ನಿರಾಕರಣೆ: ಮೌನಕ್ಕೆ ಶರಣಾದ ಬಿಜೆಪಿ ನಾಯಕರು
ಗೂಳಿಹಟ್ಟಿ ಶೇಖರ್
Follow us
ರಮೇಶ್ ಬಿ. ಜವಳಗೇರಾ
|

Updated on: Dec 06, 2023 | 3:00 PM

ಬೆಂಗಳೂರು, (ಡಿಸೆಂಬರ್ 06): ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (goolihatti shekhar)ಅವರನ್ನು ನಾಗಪುರದ ಆರ್​ಎಸ್​ಎಸ್​ (RSS) ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟಪಡಿಸುವಿರಾ ಎಂದು ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ ಅವರಿಗೆ ಕೇಳಿದ್ದು, ಇದೀಗ ಆಡಿಯೋ ವೈರಲ್ ಆಗಿದೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಕಾಂಗ್ರೆಸ್ ಬಿಜೆಪಿ ಹಾಗೂ ಆರ್​ಎಸ್​ಎಸ್​ ಮೇಲೆ ಮುಗಿಬಿದ್ದಿದೆ. ಆದ್ರೆ, ಬಿಜೆಪಿ ನಾಯಕರು ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗೆ RSS ವಸ್ತು ಸಂಗ್ರಹಾಲಯದಲ್ಲಿ ಪ್ರವೇಶ ನಿರಾಕರಣೆ ವಿಚಾರದಿಂದ ಬಿಜೆಪಿ ನಾಯಕರು ಅಂತರ ಕಾಪಾಡಿಕೊಂಡಿಕೊಳ್ಳುತ್ತಿದ್ದಾರೆ. ಆರ್​ಎಸ್​ಎಸ್ ಎಲ್ಲಾ ಸಮುದಾಯವನ್ನು ಒಳಗೊಂಡ ಸಂಘಟನೆಯಾಗಿದೆ. ಇಲ್ಲಿ ಜಾತಿ ತಾರತಮ್ಯ ವ್ಯವಸ್ಥೆ ಇಲ್ಲ ಎಂದು ಉದ್ದುದ್ದ ಭಾಷಣ ಬಿಗಿಯುತ್ತಿದ್ದವರು ಇದೀಗ ಗೂಳಿಹಟ್ಟಿ ಶೇಖರ್ ವಿಚಾರದಲ್ಲಿ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.ಈ ಬಗ್ಗೆ  ಯಾವೊಬ್ಬ ಬಿಜೆಪಿ ನಾಯಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ.

ಇದೇ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಬಗ್ಗೆ ತಿಳಿದುಕೊಂಡು ಮಾತಾಡುತ್ತೇನೆ. ನಿಮ್ಮಷ್ಟು ಬುದ್ದಿವಂತ ನಾನಲ್ಲ ಎಂದು ಕೈಮುಗಿದು ಹೊರಟು ಹೋದರು. ಇನ್ನು ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಇದಕ್ಕೂ ತಮಗೂ ಸಂಬಂಧವಿಲ್ಲವಂತೆ ವಿಪಕ್ಷ ನಾಯಕ ಆರ್ ಅಶೋಕ್​ ಮುಂದೆ ಹೋದರು.

ಬಿಜೆಪಿಯ ಗರ್ಭಗುಡಿಗೇ ದಲಿತರಿಗೆ ಪ್ರವೇಶವಿಲ್ಲ ಎಂದ ಕಾಂಗ್ರೆಸ್

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಗೂಳಿಹಟ್ಟಿ ಶೇಖರ್ ಬಿಜೆಪಿಯ ಮಾಜಿ ಸಚಿವ, ಮಾಜಿ ಶಾಸಕ. ಜನಪ್ರತಿನಿಧಿಯಾಗಿದ್ದ ಬಿಜೆಪಿ ಪಕ್ಷದವರೇ ನಾಗಪುರದ RSS ಕಚೇರಿಯಲ್ಲಿ ಅಸ್ಪೃಶ್ಯತೆ ಎದುರಿಸಿದೆ ಎಂದು ಹೇಳಿದ್ದಾರೆ. RSSನ ಮುದ್ದಿನ ಕೂಸು ಬಿಎಲ್​ ಸಂತೋಷ್ ಅವರ ಬಳಿ ತಮಗಾದ ನೋವು, ಅವಮಾನದ ಬಗ್ಗೆ ಅವಲತ್ತುಕೊಂಡರೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಮೌನದ ಅರ್ಥ ಅಸ್ಪೃಶ್ಯತೆ ಆಚರಣೆ ಬಿಜೆಪಿ, RSSನ ಜನ್ಮಸಿದ್ದ ಹಕ್ಕು ಎನ್ನುವುದೇ? ಎಂದು ಪ್ರಶ್ನಿಸಿದೆ.

RSS ಗರ್ಭಗುಡಿ ಇರಲಿ, ಬಿಜೆಪಿಯ ಗರ್ಭಗುಡಿಗೇ ದಲಿತರಿಗೆ ಪ್ರವೇಶವಿಲ್ಲ, ಬಿಜೆಪಿಯಲ್ಲಿರುವ ದಲಿತರು RSSನವರ ಚಡ್ಡಿ ಹೊರುವುದಕ್ಕೆ ಮಾತ್ರ ಸೀಮಿತವೆನ್ನುವ ಸತ್ಯ ಜಗಜ್ಜಾಹೀರಾಗಿದೆ. ದಲಿತ ಎಂಬ ಕಾರಣಕ್ಕಾಗಿಯೇ ಗೋವಿಂದ ಕಾರಜೋಳರಂತಹ ಹಿರಿಯ ನಾಯಕರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿಲ್ಲವೇ? ದಲಿತ ಎಂಬ ಕಾರಣಕ್ಕಾಗಿಯೇ ಶ್ರೀರಾಮುಲು ಅವರು ರಾಜ್ಯಾಧ್ಯಕ್ಷ ಸ್ಥಾನ ಬಯಸಿದರೂ ಸಿಗಲಿಲ್ಲವೇ? ಎಂದು ಕಾಂಗ್ರೆಸ್​ ಎಕ್ಸ್​ನಲ್ಲಿ ವ್ಯಂಗ್ಯವಾಡಿದೆ.

ಬಿಜೆಪಿಯಲ್ಲಿ ದಲಿತರಿಗೆ ಹಿಂದುಳಿದವರಿಗೆ ಗೌರವ ಇಲ್ವಾ?

ಇನ್ನು ಈ ಬಗ್ಗೆ ಸಚಿವ ಪ್ರಿಯಾಂಖ್ ಖರ್ಗೆ ಪ್ರತಿಕ್ರಿಯಿಸಿ, ಗೂಳಿಹಟ್ಟಿ ಶೇಖರ್ ಮಾಜಿ ಸಚಿವರು . ಬಹಳ ಸ್ಪಷ್ಟವಾದ ಪ್ರಶ್ನೆ ಬಿಎಲ್ ಸಂತೋಷ ಅವರಿಗೆ ಕೇಳಿದ್ದಾರೆ. ನಾನು ಬಿಜೆಪಿಯ ಕಾರ್ಯಕರ್ತ, ನಾನು ಹಿಂದೂ ಆರ್ ಎಸ್ ಎಸ್ ಪ್ರಮುಖರ ಮನೆಗೆ ಭೇಟಿ ನೀಡಲು ಹೋದಾಗ, ನಾನು ಎಸ್ಸಿ ಎಂದು ತಿಳಿದು ನನಗೆ ಒಳಗಡೆ ಬಿಡಲಿಲ್ಲ ಎಂದು ಹೇಳಿದ್ದು, ಇದಕ್ಕೆ ಉತ್ತರಿಸಿ ಎಂದು ಸಹ ಸಂತೋಷ್ ಅವರಿಗೆ ಕೇಳಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿರುವ ಪ್ರಮುಖ ದಲಿತ ನಾಯಕರಿಗೂ ಪ್ರವೇಶ ಇಲ್ವಾ ಎಂದು ಪ್ರಶ್ನೆ ಕೇಳಿದ್ದಾರೆ. ಹಾಗಾದ್ರೆ, ಬಿಜೆಪಿಯಲ್ಲಿ ದಲಿತರಿಗೆ ಹಿಂದುಳಿದವರಿಗೆ ಗೌರವ ಇಲ್ವಾ, ಇದು ನನ್ನ ಪ್ರಶ್ನೆ ಅಲ್ಲ, ಅದು ಗೂಳಿಹಟ್ಟಿ ಪ್ರಶ್ನೆ. ಸಾಮಾನ್ಯವಾಗಿ ಆರ್ ಎಸ್ ಎಸ್ ನಲ್ಲಿ ದಲಿತರಿಗೆ ಅವಕಾಶ ಇದ್ಯಾ? ಇದ್ದರೆ ದಲಿತರನ್ನು ಸರಸಂಘ ಚಾಲಕರನ್ನಾಗಿ ಮಾಡಲಿ ಎಂದು ಸವಾಲು ಹಾಕಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ