AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ಸಮಾವೇಶ: ಐಸಿಸ್ ಸಂಪರ್ಕ ಇರುವವನ ಜತೆ ವೇದಿಕೆ ಹಂಚಿಕೊಂಡ್ರಾ ಸಿದ್ದರಾಮಯ್ಯ?

Hubballi Muslim convention: ಸಿಎಂ ಸಿದ್ದರಾಮಯ್ಯ ನಿನ್ನೆ ಮುಸ್ಲಿಂ ಸಮಾವೇಶದಲ್ಲಿ ನೀಡಿದ ಹೇಳಿಕೆಗೆ ವಿಪಕ್ಷ ನಾಯಕರು ಟೀಕಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸರ್ಕಾರದ ಕೊಡುಗೆ ಏನು ಎನ್ನುವುದನ್ನು ವಿವರಿಸಿ ಆಡಿದ ಮಾತುಗಳು ವಿಪಕ್ಷಗಳ ಬಾಯಿಗೆ ಆಹಾರವಾಗಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ಅದೇ ಮುಸ್ಲಿಂ ಸಮಾವೇಶದಲ್ಲಿ ಐಸಿಸ್ ಉಗ್ರರ ಜೊತೆ ಸಂಪರ್ಕ ಇರುವವನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮುಸ್ಲಿಂ ಸಮಾವೇಶ: ಐಸಿಸ್ ಸಂಪರ್ಕ ಇರುವವನ ಜತೆ ವೇದಿಕೆ ಹಂಚಿಕೊಂಡ್ರಾ ಸಿದ್ದರಾಮಯ್ಯ?
ಮುಸ್ಲಿಂ ಸಮಾವೇಶದಲ್ಲಿ ಸಿಎಂ ಬಾಗಿ
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ|

Updated on:Dec 06, 2023 | 12:07 PM

Share

ಬೆಳಗಾವಿ, (ಡಿಸೆಂಬರ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Hubballi Muslim convention)ಐಸಿಸ್​ ಉಗ್ರರ ಜೊತೆ ಸಂಪರ್ಕ ಹೊಂದಿರುವವನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಗಂಭೀರ ಆರೋಪ ಮಾಡಿದ್ದಾರೆ. ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಡಿಸೆಂಬರ್ 4ರಂದು ಹುಬ್ಬಳ್ಳಿಯ ಬಾಷಾಪೀರ್ ದರ್ಗಾ ಬಳಿ ನಡೆದಿದ್ದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ಜತೆ ಸಂಪರ್ಕ ಹೊಂದಿದ ವ್ಯಕ್ತಿ ಸಹ ಭಾಗವಹಿಸಿದ್ದ. ಅವತ್ತು ಸಿಎಂ ಸಿದ್ದರಾಮಯ್ಯ ಪಕ್ಕದಲ್ಲೇ ಆತ ಕುಳಿತಿದ್ದ. ವೇದಿಕೆ ಮೇಲೆ ಐಸಿಸ್ ಜತೆ ಸಂಪರ್ಕ ಇರುವವನ ಬಗ್ಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಮುಸ್ಲಿಂ ಸಮಾವೇಶದಲ್ಲಿ ಐಸಿಸ್ ಜತೆ ಸಂಪರ್ಕ ಇರುವವನು ಕೂತಿದ್ದ. ಅವತ್ತು ಸಿಎಂ ಸಿದ್ದರಾಮಯ್ಯ ಪಕ್ಕದಲ್ಲೇ ಆತ ಕುಳಿತಿದ್ದ. ವೇದಿಕೆ ಮೇಲೆ ಐಸಿಸ್ ಜತೆ ಸಂಪರ್ಕ ಇರುವವನ ಬಗ್ಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದ ಯತ್ನಾಳ್, ಎಲ್ಲ‌ ಮಾಹಿತಿ ಪಡೆದುಕೊಂಡು ನಾನು ಗಂಭೀರವಾಗಿ ಹೇಳುತ್ತಿದ್ದೇನೆ. ಭಯೋತ್ಪಾದಕರು ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದು ಖಂಡನೀಯ ಎಂದರು.

ಇದನ್ನೂ ಓದಿ: ಮುಸ್ಲಿಮರನ್ನು ನಾನು ರಕ್ಷಣೆ ಮಾಡುತ್ತೇನೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

ನಾನು ಹುಡುಗಾಟಿಕೆಗೆ ಹೇಳಿಕೆ ನೀಡುತ್ತಿಲ್ಲ, ಬೇಕಾದ್ರೆ ಮಾಹಿತಿ ಪಡೆಯಲಿ. ಪ್ರಧಾನಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿನವರ ಎಲ್ಲರ ಮಾಹಿತಿ ಇರುತ್ತೆ. ಮುಸ್ಲಿಂ ಸಮಾವೇಶದಲ್ಲಿ ಯಾರು ಇರುತ್ತಾರೆಂದು ಮಾಹಿತಿ ಇರಲಿಲ್ವಾ? ಇನ್ನೊಂದು ವಾರದಲ್ಲಿ ಎಲ್ಲ ಮಾಹಿತಿ ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.

ಡಿಸಿಎಂಬರ್ 4ರಂದು  ನಡೆದ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ನಡೆದಿದ್ದ ಅಲ್ಪಸಂಖ್ಯಾತ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇದೇ ಸಮಾವೇಶದಲ್ಲಿ ದಕ್ಷಿಣ ಭಾರತ ಮುಸ್ಲಿಂ ಗುರುಗಳು ಕೂಡ ಭಾಗಹಿಸಿದ್ದರು. ಆದ್ರೆ, ಐಸಿಸ್​ ಜೊತೆ ಸಂಪರ್ಕ ಇರುವ ವ್ಯಕ್ತಿ ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾದ ವ್ಯಕ್ತಿ ಯಾರು? ಏನುವುದು ಮಾತ್ರ ನಿಗೂಢವಾಗಿದೆ.

ಇನ್ನು ಆ ವ್ಯಕ್ತಿ ಯಾರು ಎಂದು  ಯತ್ನಾಳ್ ಬಿಟ್ಟುಕೊಟ್ಟಿಲ್ಲ. ಬದಲಾಗಿ ಇನ್ನೊಂದು ವಾರದಲ್ಲೇ ಎಲ್ಲಾ ಹೇಳುತ್ತೇನೆ ಎಂದು ಕುತೂಹಲ ಹುಟ್ಟುಹಾಕಿದ್ದಾರೆ. ಹಾಗಾದ್ರೆ, ಐಸಿಎಸ್ ಜತೆ ಸಂಪರ್ಕ ಹೊಂದಿರುವ ವ್ಯಕ್ತಿ ಯಾರು? ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿಲ್ವಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದು, ಇದು ಮುಂದೆ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 am, Wed, 6 December 23