ರೆಡ್ ಅಲರ್ಟ್: ಕೊಡಗು ಜಿಲ್ಲೆಯಾದ್ಯಂತ 2 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಭಾರೀ ಮಳೆ ಹಿನ್ನೆಲೆ ನಾಳೆಯೂ ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ನಾಳೆ ಮತ್ತು ನಾಡಿದ್ದು ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ 2 ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟರಾಜು ಆದೇಶ ಹೊರಡಿಸಿದ್ದಾರೆ. ಪ್ರವಾಹದ ಆತಂಕ ಇನ್ನೂ ಮುಂದುವರಿದಿದೆ. ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ.

ಕೊಡಗು, ಮೇ 28: ಜಿಲ್ಲೆಯಲ್ಲಿ ಮಳೆ (rain) ಅಬ್ಬರ ಕೊಂಚ ಕಡಿಮೆ ಆದರೂ ಅಲ್ಲಲ್ಲಿ ಅವಾಂತರಗಳು ಮುಂದುವರೆದಿವೆ. ಬಹಳಷ್ಟು ಗ್ರಾಮಗಳಲ್ಲಿ ಇನ್ನೂ ನದಿಗಳು ಅಪಾಯ ಮಟ್ಟದಲ್ಲೇ ಹರಿಯುತ್ತಿವೆ. ಹಾಗಾಗಿ ಪ್ರವಾಹದ ಆತಂಕದಿಂದ ಇನ್ನೂ ಜನರು ದೂರವಾಗಿಲ್ಲ. ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ನಾಳೆ, ನಾಡಿದ್ದು ಅಂದರೆ ಗುರುವಾರ, ಶುಕ್ರವಾರ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ 2 ದಿನ ರಜೆ (holiday) ನೀಡಿ ಡಿಸಿ ವೆಂಕಟರಾಜಾ ಆದೇಶಿಸಿದ್ದಾರೆ.
ಭಾರಿ ಮಳೆ ಸಾಧ್ಯತೆ ಹಿನ್ನೆಲೆ ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ಎರಡಿ ದಿನ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಜಿಲ್ಲೆಗೆ ಆಗಮಿಸಿರುವ ಎನ್‌ಡಿಆರ್‌ಎಫ್ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿರೋದಾಗಿ ಹೇಳಿದೆ.
ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ಭಾರಿ ಮಳೆಯಿಂದ ಕರ್ನಾಟಕದ ಈ ಎರಡು ಕಡೆ ಅರಣ್ಯ ಸಫಾರಿ ರದ್ದು
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಳಿಂದ ವರುಣಾರ್ಭಟದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವಧಿಗೆ ಮೊದಲೇ ರಾಷ್ಟ್ರೀಯ ವಿಪತ್ತು ದಳವನ್ನ ಜಿಲ್ಲೆಗೆ ಕರೆಸಿಕೊಂಡಿದೆ. ಬೆಂಗಳುರಿನ 10ನೇ ಬೆಟಾಲಿಯನ್ನ 30 ಯೋಧರು ಈಗಾಗಲೇ ಮಡಿಕೇರಿಗೆ ಬಂದು ಇಲ್ಲಿನ ಪೊಲೀಸ್ ಮೈತ್ರಿ ಹಾಲ್ನಲ್ಲಿ ತಂಗಿದ್ದಾರೆ. ಈಗಾಗಲೇ ಜಿಲ್ಲಾಡಳಿತದ ಜೊತೆ ಸಭೆ ನಡೆಸಿ ಸಂಭಾವ್ಯ ಅಪಾಯಕಾರಿ ಸ್ಥಳಗಳ ಮ್ಯಾಪಿಂಗ್ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಎಲ್ಲಾ ಸ್ಥಳಗಳಿಗೆ ಖುದ್ದು ತೆರಳಿ ಅವಲೋಕನ ನಡೆಸಲು ಸಜ್ಜಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಬೇಕಾದ ಅಗತ್ಯ ರಕ್ಷಣಾ ಪರಿಕರಗಳನ್ನೂ ತಂದಿದ್ದಾರೆ. ಇನ್ಸ್ಪೆಕ್ಟರ್ ಹರೀಶ್ ಪಾಂಡೆ ನೇತೃತ್ವದ ತಂಡ ಏನೇ ಆದರೂ ನಾವಿದ್ದೇವೆ ಎಂದು ಅಭಯ ನೀಡಿದೆ.
ಜಲ ದಿಗ್ಬಂಧನದ ಭಯ
ಇನ್ನು ಮಡಿಕೇರಿ ತಾಲ್ಲೂಕಿನ ಬೇಂಗೂರು ಗ್ರಾಮದಲ್ಲಿ ಕಾವೇರಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಪರಿಣಾಮ ದೋಣಿ ಕಡವು ಎಂಬಲ್ಲಿ ಮುಖ್ಯ ಸಂಪರ್ಕ ರಸ್ತೆ ಮೇಲೆ ಪ್ರವಾಹ ಬರಲಾರಂಭಿಸಿದೆ. ಮಳೆ ಜಾಸ್ತಿಯಾದರೆ ಯಾವುದೇ ಕ್ಷಣದಲ್ಲಿ ಗ್ರಾಮಗಳ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ. ಅತ್ತ ಕೂಡಕಂಡಿ ಪೈಸಾರಿ ಪ್ರದೇಶದಲ್ಲಿ 70ಕ್ಕೂ ಅಧಿಕ ಕುಟುಂಬಗಳ 300ಕ್ಕೂ ಅಧಿಕ ಮಂದಿ ವಾಸ ಮಾಡುತ್ತಿದ್ದು, ಎಲ್ಲರಿಗೂ ಜಲ ದಿಗ್ಬಂಧನದ ಭಯ ಶುರುವಾಗಿದೆ.
ಸದ್ಯ ಜಿಲ್ಲಾಡಳಿತ ಒಂದು ದೋಣಿಯನ್ನ ನೀಡಿದ್ದು ಹೊಳೆ ದಾಟಲು ಅದನ್ನೇ ಬಳಸ್ತಾ ಇದ್ದಾರೆ. ಆದ್ರೆ ಪ್ರವಾಹ ಉಕ್ಕೇರಿದಾಗ ಆ ಧೋನಿಉ ಯಾವುದೇ ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಇಲ್ಲಿಗೆ ಶಾಶ್ವತವಾಗಿ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: 400ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶ, ಕರೆಂಟ್ ಇಲ್ಲದೆ ಜನ ಪರದಾಟ
ಇನ್ನು ಗ್ರಾಮೀಣ ಕೊಡಗು ಸಂಪೂರ್ಣ ಕತ್ತಲಲ್ಲಿದೆ. ವಿದ್ಯುತ್ ವ್ಯವಸ್ಥೆ ಮರು ಸ್ಥಾಪಿಸಲು ಚೆಸ್ಕಾಂ ಇನ್ನಿಲ್ಲದ ಹರಸಾಸಹ ನಡೆಸಿದೆ. ಜನಜೀವನ ಸಹಜಸ್ಥಿತಿಗೆ ಬರಲು ಇನ್ನೂ ಮೂರ್ನಾಲ್ಕು ದಿನಗಳು ಬೇಕಾಗುವ ನಿರೀಕ್ಷೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:54 pm, Wed, 28 May 25