AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: 400ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶ, ಕರೆಂಟ್ ಇಲ್ಲದೆ ಜನ ಪರದಾಟ

ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯಾದ್ಯಂತ 400ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಎಲ್ಲೆಲ್ಲೂ ಕರೆಂಟ್ ಇಲ್ಲದೆ ಜನ ಪರದಾಡುವಂತಾಗಿದೆ. ದುರಸ್ತಿ ಕಾರ್ಯಕ್ಕೂ ಮಳೆ ಅಡ್ಡಿಯಾಗಿದ್ದು, ಸಿಬ್ಬಂದಿ ಕೊರತೆಯೂ ದೊಡ್ಡ ಸಮಸ್ಯೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: 400ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶ, ಕರೆಂಟ್ ಇಲ್ಲದೆ ಜನ ಪರದಾಟ
ಗಾಳಿ ಮಳೆಗೆ ಧರೆಗೆ ಉರುಳಿರುವ ವಿದ್ಯುತ್ ಕಂಬಗಳು
Gopal AS
| Updated By: Ganapathi Sharma|

Updated on: May 27, 2025 | 2:51 PM

Share

ಮಡಿಕೇರಿ, ಮೇ 27: ಕೊಡಗು (Kodagu) ಜಿಲ್ಲೆಯಲ್ಲಿ ಮಂಗಳವಾರ ಕೂಡ ವರುಣಾರ್ಭಟ (Monsoon Rain) ಮುಂದುವರಿದಿದೆ. ಪರಿಣಾಮವಾಗಿ ಸಾಕಷ್ಟು ಅವಾಂತರಗಳೂ ಸಂಭವಿಸಿವೆ. ವಿರಾಜಪೇಟೆಯಲ್ಲಿ ಈಗಾಗಲೇ ಕಾಳಜಿ ಕೇಂದ್ರ ಸ್ಥಾಪಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರುದಿನಗಳಿಂದ ಅಬ್ಬರಿಸುತ್ತಾ ಇರುವ ಮಳೆಯ ಕಾರಣ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ನೂರಾರು ಮರಗಳು ಧರೆಗುರುಳಿದಗ್ದು, 400 ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶವಾಗಿವೆ. ಹಾಗಾಗಿ ಜಿಲ್ಲೆಯ ವಿದ್ಯುತ್ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ . ಚೆಸ್ಕಾಂ ಇಲಾಖೆ ವಿದ್ಯುತ್ ವ್ಯವಸ್ಥೆ ಮರುಸ್ಥಾಪನೆಗೆ ಇನ್ನಿಲ್ಲ ಕಸರತ್ತು ನಡೆಸಿದೆ. ಸಂಕಷ್ಟದ ಸಂದರ್ಭದಲ್ಲಿ ಲೈನ್​​ಮನ್​ಗಳಿಲ್ಲದೆ ಇಲಾಖೆ ಅಕ್ಷರಶಃತತ್ತರಿಸಿಹೋಗಿದೆ.

ಚೆಸ್ಕಾಂ ಕಷ್ಟಕ್ಕೆ ಸ್ಪಂದಿಸಿರುವ ಶಾಸಕ ಪೊನ್ನಣ್ಣ ಹಾಸನ, ಚಾಮರಾಜನಗರ ಮೈಸೂರು ಮಂಡ್ಯದಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕೊಡಗಿಗೆ ನಿಯೋಜಿಸವಂತೆ ಚೆಸ್ಕಾಂ ನಿಗಮಕ್ಕೆ ಸೂಚಿಸಿದ್ದಾರೆ. ಅದರಂತೆ 74 ಮಂದಿ ಲೈನ್​​ಮನ್​ಗಳು ಈಗಾಗಲೇ ಕೊಡಗಿನತ್ತ ಆಗಮಿಸಿದ್ದಾರೆ. ಈ ಮಧ್ಯೆ, ಮಳೆ ಅನಾಹುತ ಮುಂದುವರಿದಿದ್ದು ವಿರಾಜಪೇಟೆ ನಗರದ ನೆಹರು ನಗರದಲ್ಲಿ ಬೃಹತ್ ಮರವೊಮದು ಮಾಜಿ ಸೈನಿಕ ಗಣೇಶ್ ಎಂಬುವರ ಮನೆ ಮೇಲೆ ಉರುಳಿದೆ. ಪರಿಣಾಮ ಮನೆ ಬಾಗಶಃ ಹಾನಿಯಾಗಿದೆ.

Ndrf Team In Kodagu

ಮಡಿಕೇರಿಗೆ ಆಗಮಿಸಿದ ಎನ್​​ಡಿಆರ್​ಎಫ್ ತಂಡ

ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟ, ಮಲೆತಿರಿಕೆ ಬೆಟ್ಟ ನೆಹರು ನಗರದಲ್ಲಿ ಅಪಾಯ ಹೆಚ್ಚಿರುವ ಕಾರಣ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ನಗರದ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ವಿರಾಜಪೇಟೆ ಪುರಸಭೆ ವತಿಯಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಜನರಿಗೆ ಅಗತ್ಯವಾಗಿ ಬೇಕಾಗಿರುವ ದಿನಬಳಕೆ ವಸ್ತುಗಳನ್ನ ಕೂಡ ಸಂಗ್ರಹಿಸಿಡಲಾಗಿದೆ. ಬೆಟ್ಟ ಪ್ರದೇಶಗಳಲ್ಲಿ ನೆಲೆಸಿರುವವರು ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ
Image
ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬೇಡಿ: ಪೊಲೀಸರಿಗೆ ಪರಮೇಶ್ವರ್ ಎಚ್ಚರಿಕೆ
Image
ಇಂದು ಕರ್ನಾಟಕದ ಕರಾವಳಿ, ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಭಾರಿ ಮಳೆ
Image
ಭೂಕುಸಿತ ಭೀತಿ: ಉತ್ತರ ಕನ್ನಡದಲ್ಲಿ ಹೆದ್ದಾರಿಯ 19 ಕಡೆ ವಾಹನ ನಿಲುಗಡೆ ಬಂದ್
Image
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ

ಇದನ್ನೂ ಓದಿ: ಕೊಡಗು, ಉತ್ತರ ಕನ್ನಡದಲ್ಲಿ ಭೋರ್ಗರೆತಿರುವ ಫಾಲ್ಸ್, ಬೀಚ್: ಪ್ರವಾಸಿಗರಿಗೆ ನಿರ್ಬಂಧ

ಕರಿಕೆ-ಭಾಗಮಂಡಲ ಮುಖ್ಯರಸ್ತೆಯ ಮೇಲೆ ಲಘು ದಿಣ್ಣೆ ಕುಸಿತವಾಗಿದೆ. ಇದೇ ವೇಳೆ ಎನ್​​ಡಿಆರ್​ಎಫ್ ಕೂಡ ಮಡಿಕೇರಿಗೆ ಆಗಮಿಸಿದೆ. ಬೆಂಗಳೂರಿನ 10ನೇ ಬೆಟಾಲಿಯನ್ನಿನ 30 ಸಿಬ್ಬಂದಿ ಅಗತ್ಯ ಸಲಕರಣೆಗಳೊಂದಿಗೆ ನಗರದ ಮೈತ್ರಿ ಹಾಲ್​​​ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ