ಇದು ಥೈಲ್ಯಾಂಡ್ ಟು ಕೊಪ್ಪಳ ಗಾಂಜಾ ಸ್ಟೋರಿ: ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದವರ ಬಂಧನ
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪೊಲೀಸರು ಭಾರಿ ಪ್ರಮಾಣದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಥೈಲ್ಯಾಂಡ್ನಿಂದ ತಂದು ಮಾರಾಟ ಮಾಡುತ್ತಿದ್ದ 8 ಜನರನ್ನು ಬಂಧಿಸಿದ್ದು, 1806 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ 18 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ.

ಕೊಪ್ಪಳ, ಮೇ 28: ಥೈಲ್ಯಾಂಡ್ನಿಂದ (Thailand) ಅಕ್ರಮವಾಗಿ ಗಾಂಜಾ (ganja) ತಂದು ಮಾರಾಟ ಮಾಡುತ್ತಿದ್ದ 8 ಜನರನ್ನು ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ಪೊಲೀಸರಿಂದ ಸೌಜೇಶ್, ಸಲೀಂ, ಬಿ.ದುರ್ಗಾ, ಬಾದ್ ಷಾ, ಮದನ್, ಸೂರ್ಯ ಪ್ರತಾಪ್ ರೆಡ್ಡಿ, ಅಮೀದ್ ಮತ್ತು ಮಣಿಕಂಠ ಅನ್ನು ಬಂಧಿಸಿದ್ದು, ಇದರಲ್ಲಿ ಮೂವರು ಕೇರಳದವರು. 18 ಲಕ್ಷ ಮೌಲ್ಯದ 1806 ಗ್ರಾಂ ಹೈಡ್ರೋ ಗಾಂಜಾ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಿಷ್ಟು
ಈ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಾರ್ಟಿಗಾಗಿ ಥೈಲ್ಯಾಂಡ್ನಿಂದ ಗಂಗಾವತಿಗೆ ಸಲೀಂ ಎರಡು ಕಾರ್ಗಳಲ್ಲಿ ಅಕ್ರಮವಾಗಿ ಗಾಂಜಾ ತಂದಿದ್ದ. ಗಂಗಾವತಿ ನಗರದ ಸರ್ಕಾರಿ ಐಟಿಐ ಕಾಲೇಜ್ ಬಳಿ ಹೈಡ್ರೋ ಗಾಂಜಾ ಪತ್ತೆ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 3 ಕೋಟಿ ರೂ. ಮೌಲ್ಯದ ಡ್ರಗ್ಸ್, ಗಾಂಜಾ ಜಪ್ತಿ
ಎಂಟು ಜನರ ಪೈಕಿ ಸೌಜೇಶ್, ಸಲೀಂ ಹಾಗೂ ಬಾದ್ ಷಾ ಕೇರಳದ ಮೂಲದವರು. ಮದನ್ ಬಿಇ ಓದಿದ್ದು, ದುರ್ಗಾ ಪ್ರಸಾದ್ ಬಿಕಾಂ ಓದಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣಕ್ಕೂ ಗಾಂಜಾ ಪ್ರಕರಣಕ್ಕೂ ಲಿಂಕ್ ಇಲ್ಲ. ಗಂಗಾವತಿಗೆ ಏಕೆ ಬಂದರೂ, ಇಲ್ಲಿಂದ ಎಲ್ಲಿ ಹೋಗುತ್ತಿದ್ದರು ಎಂಬ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಾರೆ.
ಬೀದರ್ನಲ್ಲಿ 183 ಕೆಜೆ 285 ಗ್ರಾಂನಷ್ಟು ಗಾಂಜಾ ನಾಶ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರು ಗ್ರಾಮದಲ್ಲಿ 183 ಕೆಜಿ 285 ಗ್ರಾಂ ತೂಕದ ಅಕ್ರಮ ಗಾಂಜಾ ಜಪ್ತಿ ಮಾಡಲಾಗಿದೆ. ಸುಮಾರು 53 ಲಕ್ಷ 30 ಸಾವಿರ 329 ರೂಪಾಯಿ ಮೌಲ್ಯದ ಗಾಂಜಾವನ್ನು ನಾಶ ಮಾಡಲಾಗಿದೆ.
ಇದನ್ನೂ ಓದಿ: ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ ನಾಲ್ವರ ಬಂಧನ
ವಿವಿಧ ಪೊಲೀಸ್ ಠಾಣೆಯ ಎನ್ಡಿಪಿಎಸ್ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದ್ದ ಗಾಂಜಾವನ್ನು ಇನ್ವೆರೋ ಬಯೋಟೆಕ್ ಜೈವಿಕ ತ್ಯಾಜ್ಯ ವಿಲೇವಾರಿ ಕುಲುಮೆಗೆ ಹಾಕಿ ಜಿಲ್ಲಾ ಡ್ರಗ್ಸ್ ಡಿಸ್ಫೋಸಲ್ ಕಮಿಟಿ ನಾಶ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.