AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ ನಾಲ್ವರ ಬಂಧನ

ಬೆಳಗಾವಿಯಲ್ಲಿ ಮಲತಂದೆಯಿಂದ ಮೂರು ವರ್ಷದ ಬಾಲಕನ ಬರ್ಬರ ಹತ್ಯೆ ನಡೆದಿದೆ. ಮಲತಂದೆ ಸೇರಿ ಕೃತ್ಯಕ್ಕೆ ಸಹಕರಿಸಿದ ಬಿಹಾರ ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮಗುವಿನ ತಾಯಿ ದೂರು ನೀಡಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಹೇಳಿದ್ದಿಷ್ಟು.

ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ ನಾಲ್ವರ ಬಂಧನ
ಬಂಧಿತರು
Sahadev Mane
| Edited By: |

Updated on:May 25, 2025 | 12:02 PM

Share

ಬೆಳಗಾವಿ, ಮೇ 25: ಮಲತಂದೆಯಿಂದಲೇ 3 ವರ್ಷದ ಬಾಲಕನನ್ನು ಹತ್ಯೆ (kill) ಮಾಡಿರುವಂತಹ ಘಟನೆ  ಬೈಲಹೊಂಗಲ ತಾಲೂಕಿನ ಹಾರಗೊಪ್ಪ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ ಮುಕೇಶ್ ಮಾಂಜಿ(3) ಮೃತ ಬಾಲಕ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ (Arrested). ಮಗುವಿನ ತಾಯಿ ರಂಗೀಲಾ ದೂರು ನೀಡಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು? 

ಎರಡನೇ ಮದುವೆಯಾಗಿ ಬಿಹಾರ್​ದಿಂದ ಕೆಲಸಕ್ಕೆಂದು ಓರ್ವ ಮಹಿಳೆ ಬಂದಿದ್ದು, ತನ್ನೊಟ್ಟಿಗೆ ಮೂರು ವರ್ಷದ ಮಗ ಕಾರ್ತಿಕ್​​ನನ್ನು ಕರೆದುಕೊಂಡು ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಬಳಿಯ ಹತ್ತಿ ಫ್ಯಾಕ್ಟರಿಯಲ್ಲಿ ಮಹಿಳೆ ಮತ್ತು ಎರಡನೇ ಗಂಡ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಮಕ್ಕಳಾಗಲಿಲ್ಲವೆಂದು ಸೊಸೆಯನ್ನ ಕೊಂದ ಅತ್ತೆ-ಮಾವ: ಕೊಲೆಗೆ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದ ಗಂಡ

ಇದನ್ನೂ ಓದಿ
Image
ಬೆಂಗಳೂರು: ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದ ರೌಡಿಶೀಟರ್​ ಅರೆಸ್ಟ್​
Image
ಬೆಳಗಾವಿ: ಮಕ್ಕಳಾಗಲಿಲ್ಲವೆಂದು ಸೊಸೆಯನ್ನ ಕೊಂದ ಅತ್ತೆ-ಮಾವ
Image
ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್​​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
Image
ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದವ ಅರೆಸ್ಟ್

ಮದ್ಯಸೇವಿಸಿ ಬಂದ ಗಂಡ ಮಹೇಶ್ವರ್ ಮಾಂಜಿ ನಿನ್ನ ಮಗನನ್ನು ಯಾಕೆ ಕರೆದುಕೊಂಡು ಬಂದಿದ್ಯಾ ಅಂತಾ ಹೆಂಡತಿ ಜೊತೆ ಜಗಳ ಮಾಡಿದ್ದಾರೆ. ಗಂಡನೊಟ್ಟಿಗೆ ಮೂರು ಜನ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮೂರು ವರ್ಷದ ಮಗನನ್ನು ಬಿಟ್ಟು ತಾಯಿ ಓಡಿಹೋಗಿದ್ದಾರೆ. ಅಲ್ಲೇ ಇದ್ದ ಮಗು ಕಾರ್ತಿಕ್ ಮೇಲೆ ರಾಕ್ಷಸಿ ವರ್ತನೆ ತೋರಿದ್ದಾರೆ. ಕಟ್ಟಿಗೆಯಿಂದ ಹೊಡೆದು ಎಲ್ಲೆಂದರಲ್ಲಿ ಸುಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ. ತಾಯಿ ವಾಪಸ್ ಮನೆಗೆ ಬಂದಾಗ ಮಗ ಕಾರ್ತಿಕ್ ಹತ್ಯೆ ಬೆಳಕಿಗೆ‌ ಬಂದಿದೆ.

ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಹೇಳಿದ್ದಿಷ್ಟು 

ಈ ಬಗ್ಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ಬೈಲಹೊಂಗಲ ತಾಲೂಕಿನ ಹಾರಗೊಪ್ಪ ಗ್ರಾಮದಲ್ಲಿ ಮಲತಂದೆ ಸೇರಿ ಸಂಗಡಿಗರು ಸೇರಿ 3 ವರ್ಷದ ಮಗುವನ್ನು ಕೊಂದಿದ್ದಾರೆ. ಮಗುವಿನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ. ಮಹೇಶ್ವರ ಮಾಂಜಿ ಎಂಬಾತನನ್ನು ರಂಗೀಲಾ 2ನೇ ಮದುವೆ ಆಗಿದ್ದರು ಎಂದು ಹೇಳಿದ್ದಾರೆ.

ಬಿಹಾರ ಮೂಲದ ದಂಪತಿ ಕೆಲಸಕ್ಕೆಂದು ಹಾರಗೊಪ್ಪಗೆ ಬಂದಿದ್ದಾರೆ. ಮಗುವನ್ನ ಕರೆದುಕೊಂಡು ಯಾಕೆ ಬಂದೇ ಅಂತಾ ಜಗಳ ತೆಗೆದಿದ್ದಾನೆ. ಈ ವೇಳೆ ಮಹೇಶ್ವರ್​​ಗೆ ಸ್ನೇಹಿತರು ಕೂಡ ಜಗಳಕ್ಕೆ ಸಾಥ್ ಕೊಟ್ಟಿದ್ದಾರೆ. ನಾಲ್ವರು ಸೇರಿಕೊಂಡು ರಂಗೀಲಾ ಮೇಲೆ ಹಲ್ಲೆಗೆ ಮುಂದಾಗಿದ್ದು, ತನ್ನನ್ನು ಕೊಲೆ ಮಾಡ್ತಾರೆ ಅಂತಾ ಹೆದರಿ ರಂಗೀಲಾ ಓಡಿ ಹೋಗಿದ್ದಾರೆ. ಈ ವೇಳೆ 3 ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಆಗ ನಾಲ್ವರು ಸೇರಿ ಕಟ್ಟಿಗೆಯಿಂದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬೆಂಕಿಯಿಂದ ಎಲ್ಲೆಂದರಲ್ಲಿ ಸುಟ್ಟಿದ್ದಾರೆ. ರಂಗೀಲಾ ಮನೆಗೆ ವಾಪಸ್ ಬಂದಾಗ ಮಗು ಸತ್ತಿರೋದು ಗೊತ್ತಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್​​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ತಕ್ಷಣ ಅಕ್ಕಪಕ್ಕದ ಜನರನ್ನು ಮಗುವಿನ ತಾಯಿ ಸೇರಿಸಿದ್ದಾಳೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್ವರ್ ಮಾಂಜಿ, ರಾಕೇಶ್ ಮಾಂಜಿ, ಶ್ರೀನಾಥ್ ಮಾಂಜಿ, ಮಹೇಶ್​ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:00 pm, Sun, 25 May 25