AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dunki Movie

Dunki Movie

Dunki Movie

Dunki Collection: 7 ದಿನಕ್ಕೆ 150 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ಡಂಕಿ’ ಸಿನಿಮಾ

‘ಡಂಕಿ’ ಸಿನಿಮಾದಲ್ಲಿ ಶಾರುಖ್​​ ಖಾನ್​, ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ, ವಿಕ್ರಂ ಕೊಚ್ಚರ್​, ಅನಿಲ್​ ಗ್ರೋವರ್​ ಮುಂತಾದವರು ನಟಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.

‘ಡಂಕಿ’ ಸಿನಿಮಾದ ಬಜೆಟ್​ ಎಷ್ಟು ಅಂತ ಕೇಳಿದವರಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

Dunki Movie Budget: ‘ಡಂಕಿ ಸಿನಿಮಾದ ಬಜೆಟ್​ ಬಗ್ಗೆ ಅನೇಕ ಗಾಸಿಪ್​ ಇದೆ ಸರ್. ಕೆಲವರು 85 ಕೋಟಿ ರೂಪಾಯಿ ಅಂತಾರೆ. ಕೆಲವರು 120 ಕೋಟಿ ರೂಪಾಯಿ ಅಂತಾರೆ. ಇನ್ನೂ ಕೆಲವರು 350 ಕೋಟಿ ರೂಪಾಯಿ ಅಂತ ಹೇಳುತ್ತಿದ್ದಾರೆ. ಹಾಗಾಗಿ ಸಿನಿಮಾ ಮಾಡಿದವರನ್ನೇ ನೇರವಾಗಿ ಕೇಳೋಣ ಅಂದುಕೊಂಡೆ’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ವೈಲೆನ್ಸ್​ ಬೇಡ, ಒಳ್ಳೆಯ ಸಿನಿಮಾ ಬೇಕಾದರೆ ಡಂಕಿ ನೋಡಿ’: ಫಸ್ಟ್​ ಶೋ ವೀಕ್ಷಿಸಿದ ಫ್ಯಾನ್ಸ್​ ಪ್ರತಿಕ್ರಿಯೆ

ಕ್ರೌರ್ಯ ಇಲ್ಲದ, ಕ್ಲಾಸ್​ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರ ವರ್ಗ ದೊಡ್ಡದಿದೆ. ಅಂಥವರಿಗಾಗಿ ‘ಡಂಕಿ’ ಸಿನಿಮಾ ಹೇಳಿ ಮಾಡಿಸಿದಂತಿದೆ. ಆ ಕಾರಣಕ್ಕಾಗಿ ಅನೇಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಇಂದು (ಡಿಸೆಂಬರ್​ 21) ‘ಡಂಕಿ’ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಮೊದಲ ಶೋ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

Dunki Twitter Review: ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ‘ಡಂಕಿ’ ಸಿನಿಮಾ; ನೆಟ್ಟಿಗರ ವಿಮರ್ಶೆ ಹೇಗಿದೆ?

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳಲು ವೀಸಾ ಪಡೆಯಬೇಕು. ಬಡವರಿಗೆ ಸುಲಭವಾಗಿ ವೀಸಾ ಸಿಗುವುದಿಲ್ಲ. ವಿದೇಶಕ್ಕೆ ಹೋಗಿ ಒಳ್ಳೆಯ ಉದ್ಯೋಗ ಮಾಡಬೇಕು ಎಂದು ಕನಸು ಕಂಡ ಬಡವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಫಸ್ಟ್​ ಶೋ ನೋಡಿದ ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

Shah Rukh Khan: ಈ ವರ್ಷ ಶಾರುಖ್​ ಖಾನ್​ ಅವರು ‘ಜವಾನ್​’, ‘ಪಠಾಣ್’ ಸಿನಿಮಾ ಮೂಲಕ ಮಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಹಾಗಂತ ಒಂದೇ ಮಾದರಿಯ ಸಿನಿಮಾಗೆ ಅವರು ಗಂಟು ಬಿದ್ದಿಲ್ಲ. ಈಗ ತೆರೆಕಂಡಿರುವ ‘ಡಂಕಿ’ ಚಿತ್ರ ಸಖತ್​ ಕ್ಲಾಸ್​ ಆಗಿದೆ. ಇದರ ಕಥಾನಾಯಕ ಒಬ್ಬ ಸೂಪರ್​ ಹೀರೋ ಅಲ್ಲ. ಜನಸಾಮಾನ್ಯರ ನಡುವಿನ ವ್ಯಕ್ತಿಯ ರೀತಿ ಆ ಪಾತ್ರ ಇದೆ.