ಕನಸು ಕಾಣುತ್ತಿರುವ ಕುಮಾರಸ್ವಾಮಿಗೆ ಬೇಡ ಅನ್ನೋದು ಸಾಧ್ಯವೇ? ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಇಂಡಿಯ ಮೈತ್ರಿಕೂಟದಿಂದ ಪ್ರಿಯಾಂಕಾ ಗಾಂಧಿ ಇಲ್ಲವೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕಣಕ್ಕಿಳಿಸುವ ಮಾತು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಅದರ ಬಗ್ಗೆ ತನಗೆ ಗೊತ್ತಿಲ್ಲ, ಅದರೆ ಅವರ ವಿರುದ್ಧ ಯಾರನ್ನಾದರೂ ಸ್ಪರ್ಧೆಗೆ ಇಳಿಸಲೇಬೇಕಲ್ಲ ಎಂದು ಹೇಳಿದರು.
ಬೆಂಗಳೂರು: ಇಂದು ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಸಿದ ಬಳಿಕ, ಕುಮಾರಸ್ವಾಮಿಯವರು (HD Kumaraswamy) ಪತ್ರಿಕಾ ಗೋಷ್ಟಿಯಲ್ಲಿ ಆಡಿದ ಮಾತುಗಳಿಗೆ ಕಾಂಗ್ರೆಸ್ ನಾಯಕರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ (dreaming), ಕನಸು ಕಾಣಬೇಡಿ ಅಂತ ಅವರಿಗೆ ಹೇಳಲಾಗುತ್ತಾ? ಎಂದು ಹೇಳಿ ಕನಸು ಯಾವತ್ತೂ ನಿಜವಾಗಲ್ಲ ಎಂದರು. ಕಳೆದ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಪರ ವೋಟು ಮಾಡದ ಕಾರಣ ಪಕ್ಷಕ್ಕೆ ಸೋಲಾಯಿತು, ಅದರೆ ಈ ಸಲ ಜೆಡಿಎಸ್ ಪಾರ್ಟಿಯ ಅಭ್ಯರ್ಥಿಗೆ ಬಿಜೆಪಿಯವರು ವೋಟು ಹಾಕಲ್ಲ, ಹಾಗೆಯೇ ಬಿಜೆಪಿ ಅಭ್ಯರ್ಥಿ ಪರ ಜೆಡಿಎಸ್ ನವರು ವೋಟು ಮಾಡಲ್ಲ, ಹಾಗಾಗಿ ಗೆಲ್ಲೋದು ಕಾಂಗ್ರೆಸ್ ಪಕ್ಷವೇ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ