ಕಲ್ಕಿ 2898 ಎಡಿ: 7 ನಿಮಿಷಕ್ಕೆ 20 ಕೋಟಿ ಹಣ ಪಡೆದ ಕಮಲ್ ಹಾಸನ್

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಮಲ್ ಹಾಸನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸಲು ಅವರಿಗೆ 20 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಆದರೆ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದು ಕೆಲವು ನಿಮಿಷಗಳು ಮಾತ್ರ.

ಕಲ್ಕಿ 2898 ಎಡಿ: 7 ನಿಮಿಷಕ್ಕೆ 20 ಕೋಟಿ ಹಣ ಪಡೆದ ಕಮಲ್ ಹಾಸನ್
Follow us
ಮಂಜುನಾಥ ಸಿ.
|

Updated on: Jun 29, 2024 | 4:38 PM

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದೊಡ್ಡ ಸ್ಟಾರ್​ ನಟರ ದಂಡೇ ಇದೆ. ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಇನ್ನಿತರರು ಇದ್ದಾರೆ. ಪ್ರತಿಯೊಬ್ಬರು ತಮ್ಮ ಅದ್ಭುತ ಅಭಿನಯದಿಂದ ಹೆಸರು ಮಾಡಿದ್ದಾರೆ. ಅಭಿನಯ, ಜನಪ್ರಿಯತೆಗೆ ತಕ್ಕಂದೆ ದುಬಾರಿ ಸಂಭಾವನೆಯನ್ನೂ ಸಹ ಪಡೆಯುತ್ತಾರೆ. ಈ ಸಿನಿಮಾಕ್ಕಾಗಿಯೂ ಸಹ ನಟರು ದೊಡ್ಡ ಸಂಭಾವನೆ ಪಡೆದಿದ್ದಾರೆ. ವಿಶೇಷವೆಂದರೆ ಕಮಲ್ ಹಾಸನ್ ಈ ಸಿನಿಮಾದಲ್ಲಿ ಬಹಳ ಕಡಿಮೆ ಸಮಯಕ್ಕೆ ಕಾಣಿಸಿಕೊಳ್ಳುತ್ತಾರೆ ಆದರೆ ಭಾರಿ ದೊಡ್ಡ ಸಂಭಾವನೆಯನ್ನೇ ಅವರು ಪಡೆದಿದ್ದಾರೆ.

ಅಂದಹಾಗೆ ಕಮಲ್ ಹಾಸನ್​ಗೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 20 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಕಮಲ್ ಹಾಸನ್ ದುಬಾರಿ ನಟರೂ ಹೌದು. ಆದರೆ ‘ಕಲ್ಕಿ’ ಸಿನಿಮಾದಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುವುದು ಕೇವಲ 7 ನಿಮಿಷ 4 ಸೆಕೆಂಡ್ ಮಾತ್ರ. ಹೌದು, ಇಷ್ಟು ಕಡಿಮೆ ಸಮಯದಲ್ಲಿ ಕಮಲ್ ಹಾಸನ್ ಅವರಿಗೆ ಬರೋಬ್ಬರಿ 20 ಕೋಟಿ ರೂಪಾಯಿಗಳನ್ನು ಸಿನಿಮಾದ ನಿರ್ಮಾಪಕ ಅಶ್ವಿನಿ ದತ್ ನೀಡಿದ್ದಾರೆ.

ಸಿನಿಮಾದಲ್ಲಿ ಕಮಲ್ ಹಾಸನ್ ಅವರದ್ದು ವಿಲನ್ ಪಾತ್ರ. ಅವರ ಪಾತ್ರದ ಹೆಸರು ಯಾಸ್ಕಿನ್. ಸಿನಿಮಾದಲ್ಲಿ ಆರಂಭದಲ್ಲಿ ಅವರು ಕಾಣಿಸಿಕೊಂಡಾಗ ಹಣ್ಣು-ಹಣ್ಣು ಮುದುಕುನ ರೀತಿ ಕಾಣಿಸಿಕೊಳ್ಳುತ್ತಾರೆ. ನೋಡಿದವರು ಇದೆಂಥಹಾ ಬುಡ್ಡ ವಿಲನ್ ಎಂದುಕೊಳ್ಳುವಂತಿದ್ದಾರೆ. ಆದರೆ ಸಿನಿಮಾದ ಅಂತ್ಯದಲ್ಲಿ ಅವರ ಪಾತ್ರದ ನಿಜ ರೂಪ ತಿಳಿಯುತ್ತದೆ. ಅದಕ್ಕೆ ಕಾರಣವೂ ಇದೆ. ಅದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇದನ್ನೂ ಓದಿ:‘ಇಂಡಿಯನ್ 2’ ಬಜೆಟ್​ ಮಿತಿಮೀರಲು ಕಾರಣವೇನು? ಕಮಲ್ ಹಾಸನ್ ಕೊಟ್ಟರು ಉತ್ತರ

ಅಂದಹಾಗೆ ಕಮಲ್ ಹಾಸನ್ ಪಾತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಮೂರು ದೃಶ್ಯಗಳಲ್ಲಿ ಮಾತ್ರ. ಅದರಲ್ಲಿಯೂ ಸಿನಿಮಾ ಮುಗಿದ ಬರುವ ಒಂದು ದೃಶ್ಯದಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುತ್ತಾರೆ. ಸಿನಿಮಾದ ಎರಡನೇ ಭಾಗಕ್ಕೆ ಆರಂಭ ಕೊಡುತ್ತಾರೆ. ಟ್ವಿಸ್ಟ್ ನೀಡುತ್ತಾರೆ. ಆದರೆ ಮೊದಲ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಕೆಲಸವಿಲ್ಲ. ಆ ಪಾತ್ರಕ್ಕೆ ಇರುವ ಶಕ್ತಿಯನ್ನು ಕೆಲವು ದೃಶ್ಯಗಳಲ್ಲಿ ನಿರ್ದೇಶಕ ತೋರಿಸಿದ್ದಾರೆ. ಎರಡನೇ ಭಾಗದಲ್ಲಿ ಸಂಪೂರ್ಣ ಕತೆ ವಿಲನ್ ಪಾತ್ರದ ಮೇಲೆಯೇ ಆಧಾರವಾಗಿರಲಿದೆ.

ಕಮಲ್ ಹಾಸನ್ ಅವರನ್ನು ಬಹಳ ತಡವಾಗಿ ‘ಕಲ್ಕಿ’ ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ನಾಗ್ ಅಶ್ವಿನ್ ಹೇಳಿದ್ದಂತೆ ಕತೆ ಮಾಡುವಾಗಲೇ ಯಾಸ್ಕಿನ್ ಪಾತ್ರ ಇತ್ತಂತೆ. ಆದರೆ ಅದನ್ನು ಯಾರು ಮಾಡಬೇಕು ಎಂಬುದು ನಿಶ್ಚಯವಾಗಿರಲಿಲ್ಲವಂತೆ. ಯಾಸ್ಕಿನ್ ಪಾತ್ರದ ಚಿತ್ರೀಕರಣ ಇನ್ನೇನು ಹತ್ತಿರ ಬಂದಿದೆ ಎಂದಾಗ ಅಳುಕಿನಿಂದಲೇ ಕಮಲ್ ಹಾಸನ್ ಅವರನ್ನು ಕೇಳಿದರಂತೆ ನಾಗ್ ಅಶ್ವಿನ್. ಕಮಲ್ ಖುಷಿಯಿಂದಲೇ ಎಸ್ ಅಂದಿದ್ದಾರೆ.

ಕಮಲ್ ಹಾಸನ್ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅವಧಿ ಕಡಿಮೆಯಾದರೂ ಅವರ ಪಾತ್ರದ ಚಿತ್ರೀಕರಣ ಸಾಕಷ್ಟು ದಿನಗಳ ಕಾಲ ಮಾಡಲಾಗಿದೆ. ನಿರ್ಮಾಪಕ ಅಶ್ವಿನಿ ದತ್ ಹೇಳಿರುವಂತೆ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಸುಮಾರು 60% ಈಗಾಗಲೇ ಮುಗಿದಿದೆಯಂತೆ. ಕೇವಲ 40% ಚಿತ್ರೀಕರಣವಷ್ಟೆ ಬಾಕಿ ಇದ್ದು ಅದು ಗ್ರೀನ್ ಮ್ಯಾಟ್ ಅಥವಾ ಔಟ್ ಡೋರ್ ಚಿತ್ರೀಕರಣವಾಗಿದೆ ಹಾಗಾಗಿ, ಕಮಲ್ ಹಾಸನ್​ರ ಪಾತ್ರದ ಚಿತ್ರೀಕರಣವನ್ನು ಸಹ ನಾಗ್ ಅಶ್ವಿನ್ ಬಹುತೇಕ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕಮಲ್ ಅವರಿಗೆ 20 ಕೋಟಿ ಸಂಭಾವನೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ