ಮೈಕಲ್ ಜಾಕ್ಸನ್ ಸಾಯುವಾಗ ಇತ್ತು ಬರೋಬ್ಬರಿ 3,700 ಕೋಟಿ ರೂಪಾಯಿ ಸಾಲ
ಅಮೆರಿಕದ ಡ್ಯಾನ್ಸರ್ ಮೈಕಲ್ ಜಾಕ್ಸನ್ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಅವರು ಮಾಡುತ್ತಿದ್ದ ಡ್ಯಾನ್ಸ್ ಸಾಕಷ್ಟು ಗಮನ ಸೆಳೆಯುತ್ತಿತ್ತು. ಅವರು ಮಾಡಿಕೊಂಡ ಸಾಲ ಬರೋಬ್ಬರಿ 3700 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಪೈಕಿ ಕೆಲವು ಹೆಚ್ಚಿನ ಬಡ್ಡಿ ಮೊತ್ತಕ್ಕೆ ಪಡೆದ ಸಾಲವಾಗಿದೆ.

ಮೈಕಲ್ ಜಾಕ್ಸನ್ ಅವರು ಡ್ಯಾನ್ಸ್ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದವರು. ಅವರು 2009ರಲ್ಲಿ ಮೃತಪಟ್ಟರು. ಅವರು ಸಾಯುವಾಗ ಒಂದಲ್ಲ, ಎರಡಲ್ಲ ಬರೋಬ್ಬರಿ 3700 ಕೋಟಿ ರೂಪಾಯಿ ಸಾಲ ಇತ್ತು ಎಂಬುದು ಈಗ ರಿವೀಲ್ ಆಗಿದೆ. ಈ ವಿಚಾರ ಕೇಳಿ ಅನೇಕರಿಗೆ ಶಾಕ್ ಎನಿಸಿದೆ.
ಮೈಕಲ್ ಜಾಕ್ಸನ್ ಅವರು ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಅವರು ಮಾಡುತ್ತಿದ್ದ ಡ್ಯಾನ್ಸ್ ಸಾಕಷ್ಟು ಗಮನ ಸೆಳೆಯುತ್ತಿತ್ತು. ಅವರು ಮಾಡಿಕೊಂಡ ಸಾಲ ಬರೋಬ್ಬರಿ 500 ಮಿಲಿಯನ್ ಡಾಲರ್. ಅಂದರೆ 3700 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಪೈಕಿ ಕೆಲವು ಹೆಚ್ಚಿನ ಬಡ್ಡಿ ಮೊತ್ತಕ್ಕೆ ಪಡೆದ ಸಾಲವಾಗಿದೆ.
ಮೈಕಲ್ ಜಾಕ್ಸನ್ ಅವರ ಮೂವರು ಮಕ್ಕಳು ಪ್ಯಾರಿಸ್, ಪ್ರಿನ್ಸ್, ಬಿಗಿ ಹಾಗೂ ಪತ್ನಿ ಕ್ಯಾಥರೀನ್ ಅವರಿಗೆ ಈಗ ಮೈಕಲ್ ಜಾಕ್ಸನ್ ಟ್ರಸ್ಟ್ನಿಂದ ಯಾವುದೇ ಹಣ ಸಿಗುತ್ತಿಲ್ಲ. ಈ ಪ್ರಕರಣ ಪರಿಹಾರ ಆಗುವವರೆಗೆ ಹಣ ನೀಡದೇ ಇರಲು ನಿರ್ಧರಿಸಲಾಗಿದೆ. ಆದರೆ, ಮೈಕಲ್ ಜಾಕ್ಸನ್ ಕುಟುಂಬ ಈ ವಿಚಾರವನ್ನು ಅಲ್ಲಗಳೆದಿದೆ. ತಮಗೆ ಇನ್ನೂ ಟ್ರಸ್ಟ್ನಿಂದ ಹಣ ಬರುತ್ತಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಬರೋಬ್ಬರಿ 68 ಲಕ್ಷ ರೂಪಾಯಿಗೆ ಮಾರಾಟವಾಯ್ತು ಮೈಕಲ್ ಜಾಕ್ಸನ್ ಧರಿಸುತ್ತಿದ್ದ ಟೋಪಿ
ಮೈಕಲ್ ಜಾಕ್ಸನ್ ಅವರು ಅಮೆರಿಕದ ಗಾಯಕ, ಹಾಡು ಬರಹಗಾರ, ಡ್ಯಾನ್ಸರ್. ಅವರು ಕಿಂಗ್ ಆಫ್ ಪಾಪ್ ಎಂದೇ ಫೇಮಸ್ ಆಗಿದ್ದರು. ಅವರ ಮೂನ್ವಾಕ್ಗೆ ಎಲ್ಲರೂ ಫಿದಾ ಆಗಿದ್ದರು. 2009ರ ಜೂನ್ 25ರಂದು ಅವರು ನಿಧನ ಹೊಂದಿದರು. ಅವರು ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು ಎಂದು ಕೂಡ ವರದಿ ಆಗಿತ್ತು.
ಟೋಪಿ ಮಾರಾಟ
ಮೈಕಲ್ ಜಾಕ್ಸನ್ ಅವರು ಒಳ್ಳೆಯ ಮೂನ್ ವಾಕ್ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವರು ಬಳಕೆ ಮಾಡುತ್ತಿದ್ದ ಟೋಪಿ ಕೂಡ ಗಮನ ಸೆಳೆದಿತ್ತು. ಕಳೆದ ವರ್ಷ ಪ್ಯಾರಿಸ್ನಲ್ಲಿ ಮೈಕಲ್ ಜಾಕ್ಸನ್ ಟೋಪಿಯನ್ನು ಹರಾಜಿಗೆ ಇಡಲಾಗಿತ್ತು. ಈ ಟೋಪಿ ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಮೊತ್ತ ಕೇಳಿ ಅನೇಕರಿಗೆ ಶಾಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.