ಬರೋಬ್ಬರಿ 68 ಲಕ್ಷ ರೂಪಾಯಿಗೆ ಮಾರಾಟವಾಯ್ತು ಮೈಕಲ್ ಜಾಕ್ಸನ್ ಧರಿಸುತ್ತಿದ್ದ ಟೋಪಿ
Michael Jackson Hat: ಮಂಗಳವಾರ (ಸೆಪ್ಟೆಂಬರ್ 26) ಪ್ಯಾರಿಸ್ನಲ್ಲಿ ಮೈಕಲ್ ಜಾಕ್ಸನ್ ಟೋಪಿಯನ್ನು ಹರಾಜಿಗೆ ಇಡಲಾಗಿತ್ತು. ಈ ಟೋಪಿ ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಮೊತ್ತ ಕೇಳಿ ಅನೇಕರಿಗೆ ಶಾಕ್ ಆಗಿದೆ.
ಸೆಲೆಬ್ರಿಟಿಗಳು ಬಳಕೆ ಮಾಡುತ್ತಿದ್ದ ವಸ್ತುಗಳಿಗೆ ಭರ್ಜರಿ ಬೆಲೆ ಇರುತ್ತದೆ. ಅದನ್ನು ಹರಾಜಿಗೆ ಇಟ್ಟರಂತೂ ಅಭಿಮಾನಿಗಳು ಎಷ್ಟು ದೊಡ್ಡ ಮೊತ್ತಕ್ಕಾದರೂ ಅದನ್ನು ಖರೀದಿಸಲು ಮುಂದೆ ಬರುತ್ತಾರೆ. ಈಗ ವಿಶ್ವ ಕಂಡ ಅದ್ಭುತ ಡ್ಯಾನ್ಸರ್ ಮೈಕಲ್ ಜಾಕ್ಸನ್ (Michael Jackson) ಅವರು ಧರಿಸುತ್ತಿದ್ದ ಟೋಪಿ ಭರ್ಜರಿ ಮೊತ್ತಕ್ಕೆ ಮಾರಾಟ ಆಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಹುಟ್ಟುಹಾಕಿದೆ. ಇದು ಖರೀದಿ ಆದ ಬೆಲೆ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
ಮೈಕಲ್ ಜಾಕ್ಸನ್ ಅವರು ಒಳ್ಳೆಯ ಮೂನ್ ವಾಕ್ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವರು ಬಳಕೆ ಮಾಡುತ್ತಿದ್ದ ಟೋಪಿ ಕೂಡ ಗಮನ ಸೆಳೆದಿತ್ತು. ಮಂಗಳವಾರ (ಸೆಪ್ಟೆಂಬರ್ 26) ಪ್ಯಾರಿಸ್ನಲ್ಲಿ ಮೈಕಲ್ ಜಾಕ್ಸನ್ ಟೋಪಿಯನ್ನು ಹರಾಜಿಗೆ ಇಡಲಾಗಿತ್ತು. ಈ ಟೋಪಿ ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಮೊತ್ತ ಕೇಳಿ ಅನೇಕರಿಗೆ ಶಾಕ್ ಆಗಿದೆ.
ಮೂನ್ ವಾಕ್ ಮಾಡುವಾಗ, ಡ್ಯಾನ್ಸ್ ಮಾಡುವಾಗ ಮೈಕಲ್ ಜಾಕ್ಸನ್ ಅವರು ಮುಖಕ್ಕೆ ಹ್ಯಾಟ್ನ ಅಡ್ಡಲಾಗಿ ಇಟ್ಟುಕೊಳ್ಳುತ್ತಿದ್ದರು. ಈ ಕಾರಣದಿಂದ ಆ ಟೋಪಿ ಸಾಕಷ್ಟು ಸುದ್ದಿ ಆಗಿತ್ತು. ಈಗ ಇದು ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಕಳೆದ ವರ್ಷ ಮೈಕಲ್ ಜಾಕ್ಸನ್ ಅವರ ಗಿಟಾರ್ನ ಹರಾಜಿಗೆ ಇಡಲಾಗಿತ್ತು. ಮೂರು ಕೋಟಿ ರೂಪಾಯಿಗೆ ಈ ಗಿಟಾರ್ ಮಾರಾಟ ಆಗಿತ್ತು.
ಇದನ್ನೂ ಓದಿ: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ
ಮೈಕಲ್ ಜಾಕ್ಸನ್ ಅವರು 1958, ಆಗಸ್ಟ್ 29ರಂದು ಅಮೆರಿಕದಲ್ಲಿ ಜನಿಸಿದರು. 50ನೇ ವಯಸ್ಸಿಗೆ ಅವರು ಮೃತಪಟ್ಟರು. ಅವರು ಸಾಕಷ್ಟು ವಿವಾದ ಕೂಡ ಮಾಡಿಕೊಂಡಿದ್ದಾರೆ. ಅವರು ಹಲವು ಬಾರಿ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಕೂಡ ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Wed, 27 September 23