‘ಮಂಡಿಯೂರಿ ಪ್ರಪೋಸ್ ಮಾಡೋಣ ಅಂದುಕೊಂಡಿದ್ದೆ’; ಬರಲೇ ಇಲ್ಲ ಸೋನು ಗೌಡ ಬಾಯ್ಫ್ರೆಂಡ್
ಸೋನು ಶ್ರೀನಿವಾಸ್ ಗೌಡ ಅವರು ಸದಾ ಸುದ್ದಿಯಲ್ಲಿ ಇರಲು ಬಯಸುತ್ತಾರೆ. ಅವರು ಈಗ ತಮ್ಮ ಬಾಯ್ಫ್ರೆಂಡ್ನ ಪರಿಚಯ ಮಾಡೋದಾಗಿ ಹೇಳಿದ್ದರು. ಆದರೆ, ಇದೊಂದು ಪಕ್ಕಾ ಪ್ರ್ಯಾಂಕ್ ವಿಡಿಯೋ. ಈ ವಿಡಿಯೋನ ಅವರು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರಿಗೆ ವೀವ್ಸ್ ಸಿಕ್ಕಿದೆ.
ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರ ಮೂಲಕ ಫೇಮಸ್ ಆದರು. ಇದರಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಮೇಲೆ ಮೊದಲು ಇದ್ದ ಭಾವನೆ ಈಗ ಬದಲಾಗಿದೆ. ಈಗ ಅವರು ತಮ್ಮದೇ ಯ್ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ. ಇದರ ಮೂಲಕ ವಿವಿಧ ವಿಡಿಯೋಗಳನ್ನು ಸೋನು ಪೋಸ್ಟ್ ಮಾಡುತ್ತಾರೆ . ಇತ್ತೀಚೆಗೆ ಅವರು ತಮ್ಮ ಬಾಯ್ಫ್ರೆಂಡ್ ಯಾರು ಎಂಬುದನ್ನು ರಿವೀಲ್ ಮಾಡೋದಾಗಿ ಹೇಳಿದ್ದರು. ಆ ಬಳಿಕ ಅವರು ಬೇರೆ ರೀತಿಯಲ್ಲಿ ಹೇಳಿಕೆ ನೀಡಿದ್ದರು.
ಸೋನು ಗೌಡ ಅವರು ಇತ್ತೀಚೆಗೆ ನಂದಿ ಬೆಟ್ಟಕ್ಕೆ ಹೋಗಿದ್ದಾರೆ. ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ಅವರು ಕೈಯಲ್ಲಿ ಹೂವಿನ ಬೊಕ್ಕೆ ಇಟ್ಟುಕೊಂಡಿದ್ದರು. ‘ಇದನ್ನು ನಾನು ನನ್ನ ಬಾಯ್ಫ್ರೆಂಡ್ಗೆ ನೀಡುತ್ತೇನೆ. ಬಾಯ್ಫ್ರೆಂಡ್ ಯಾರು ಎಂಬುದನ್ನು ನಿಮಗೆ ಹೇಳುತ್ತೇನೆ’ ಎಂದು ನೋಸು ಗೌಡ ಹೇಳಿದ್ದಾರೆ. ಆ ಬಳಿಕ ಅವರು ನೇರವಾಗಿ ತೆರಳಿದ್ದು ನಂದಿ ಬೆಟ್ಟಕ್ಕೆ.
ನಂದಿ ಬೆಟ್ಟಕ್ಕೆ ತೆರಳಿದ ಬಳಿಕ ಅವರು ಬಾಯ್ಫ್ರೆಂಡ್ ವಿಚಾರ ಮಾತನಾಡಿದ್ದಾರೆ. ‘ನನಗೆ ಹಸಿವಾಗ್ತಿದೆ. ಕೊನೆಗೂ ನಮ್ಮ ಹುಡುಗ ಬಂದಿಲ್ಲ. ಬಕ್ರಾ ನನ್ ಮಗ ಅನಿಸುತ್ತದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಇದು ಪ್ರ್ಯಾಂಕ್ ಎಂಬುದು ಗೊತ್ತಾಗಿದೆ.
‘ಹುಡುಗನ ಮುಂದೆ ಮಂಡಿಯೂರಿ ಪ್ರಪೋಸ್ ಮಾಡಬೇಕು ಎಂದುಕೊಂಡಿದ್ದೀನಿ. ನಾನು ನನ್ನ ಚಂದಾದಾರರಿಗೆ ಪ್ರಪೋಸ್ ಮಾಡುತ್ತೇನೆ’ ಎಂದು ಅವರು ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಅನೇಕ ನೆಗೆಟಿವ್ ಕಾಮೆಂಟ್ಗಳು ಬಂದಿವೆ.
ಇದನ್ನೂ ಓದಿ: ನಂದಿ ಬೆಟ್ಟದಲ್ಲಿ ಹೂವು ಹಿಡಿದುಕೊಂಡು ನಲಿದಾಡಿದ ಸೋನು ಗೌಡ
ಇತ್ತೀಚೆಗೆ ಸೋನು ಗೌಡ ಸಖತ್ ಸುದ್ದಿ ಆಗಿದ್ದರು. ಅವರು ಮಗುವನ್ನು ದತ್ತು ತೆಗೆದುಕೊಂಡಿದ್ದರು. ಆದರೆ, ಇದಕ್ಕೆ ಕಾನೂನು ಕ್ರಮ ಪಾಲಿಸಿರಲಿಲ್ಲ. ಈ ಕಾರಣಕ್ಕೆ ಅವರು ಅರೆಸ್ಟ್ ಕೂಡ ಆಗಿದ್ದರು. ಆ ಬಳಿಕ ಅವರು ಜೈಲಿನಿಂದ ಹೊರ ಬಂದರು. ಅಷ್ಟೇ ಅಲ್ಲ, ಜೈಲಿನ ಅನುಭವ ಹಂಚಿಕೊಂಡಿದ್ದರರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.