AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗ್ಗೇಶ್ ಧ್ವನಿಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ; ಇದು ಪಕ್ಕಾ ‘ಪೌಡರ್’ ಕಥೆ

ಜಗ್ಗೇಶ್ ಅವರು ‘ವಿಕ್ಟರಿ’ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಧ್ವನಿ ಆಗಿದ್ದಾರೆ. ಈಗ ‘ಪೌಡರ್’ ಸಿನಿಮಾದಲ್ಲಿ ಅವರು ವಾಯ್ಸ್ ಗೈಡ್‍ ಆಗಿ ಕೆಲಸ ಮಾಡಿದ್ದಾರೆ. ಇಡೀ ಚಿತ್ರವನ್ನು ತಮ್ಮ ಕಾಮೆಂಟರಿಯ ಮೂಲಕ ಮುನ್ನಡೆಸಿದ್ದಾರೆ. ಈ ವಿಚಾರವನ್ನು ‘ಪೌಡರ್’ ತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಧ್ವನಿಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ; ಇದು ಪಕ್ಕಾ ‘ಪೌಡರ್’ ಕಥೆ
ಜಗ್ಗೇಶ್ ಧ್ವನಿಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ; ಇದು ಪಕ್ಕಾ ‘ಪೌಡರ್’ ಕಥೆ
ರಾಜೇಶ್ ದುಗ್ಗುಮನೆ
|

Updated on:Aug 22, 2024 | 8:46 AM

Share

‘ಪೌಡರ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾದಲ್ಲಿ ದಿಗಂತ್, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಸಖತ್ ಫನ್ನಿ ಆಗಿದೆ. ಇದು ಡ್ರಗ್ಸ್​ ವಿಚಾರ ಇಟ್ಟುಕೊಂಡು ಮಾಡಿರೋ ಸಿನಿಮಾ ಅನ್ನೋದು ಟ್ರೇಲರ್​ನಲ್ಲಿ ಗೊತ್ತಾಗುತ್ತದೆ. ಈ ಸಿನಿಮಾದ ವಿಶೇಷತೆ ಎಂದರೆ ಜಗ್ಗೇಶ್ ಅವರ ಧ್ವನಿ ಚಿತ್ರದಲ್ಲಿ ಇರಲಿದೆ. ಇಡೀ ಸಿನಿಮಾದ ಕಥೆ ಅವರ ನಿರೂಪಣೆಯಲ್ಲಿ ಸಾಗಲಿದೆ.

ಜಗ್ಗೇಶ್ ಅವರು ಹೀರೋ ಆಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ‘ವಿಕ್ಟರಿ’ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಧ್ವನಿ ಆಗಿದ್ದಾರೆ. ಈಗ ‘ಪೌಡರ್’ ಸಿನಿಮಾದಲ್ಲಿ ಅವರು ವಾಯ್ಸ್ ಗೈಡ್‍ ಆಗಿ ಕೆಲಸ ಮಾಡಿದ್ದಾರೆ. ಇಡೀ ಚಿತ್ರವನ್ನು ತಮ್ಮ ಕಾಮೆಂಟರಿಯ ಮೂಲಕ ಮುನ್ನಡೆಸಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಚಿತ್ರದ ಕೊನೆಯ 20 ನಿಮಿಷ ಗ್ರಾಫಿಕ್ಸ್ ಇರಲಿದೆ ಅನ್ನೋದು ವಿಶೇಷ.

ಈ ಚಿತ್ರದಲ್ಲಿ ಪಕ್ಕಾ ಕಾಮಿಡಿ ಇದೆ. ಪೌಡರ್​ನ (ಡ್ರಗ್ಸ್​) ಹುಡುಕಿ ಹೋಗುವ ಕಥೆ ಇದೆ ಅನ್ನೋದು ಟ್ರೇಲರ್​ನಲ್ಲಿ ಗೊತ್ತಾಗುತ್ತದೆ. ಕನ್ನಡದ ಪ್ರತಿಭಾವಂತ ಕಲಾವಿದರನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಚಿತ್ರವನ್ನು ಜನಾರ್ಧನ್‍ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಇದು ಪಕ್ಕಾ ಮನರಂಜನಾತ್ಮಕ ಚಿತ್ರ ಎಂದು ತಂಡ ಹೇಳಿಕೊಂಡಿದೆ. ಜನಾರ್ಧನ್ ಚಿಕ್ಕಣ್ಣ ಅವರಿಗೆ KRG ಸ್ಟುಡಿಯೋಸ್‍ನ ಕಾರ್ತಿಕ್‍ ಒಂದು ಸ್ಕ್ರಿಪ್ಟ್ ಕಳುಹಿಸಿದ್ದರು. ಕನ್ನಡಿಗ ದೀಪಕ್‍ ವೆಂಕಟೇಶನ್‍ ಎಂಬುವವರು ಬರೆದ ಕಥೆ ಇದು. ಈ ಕಥೆ ಇಷ್ಟ ಆಗಿ ಜನಾರ್ಧನ್ ಸಿನಿಮಾ ಮಾಡಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಸಿನಿಮಾದಲ್ಲಿ ಲಾಜಿಕ್ ಹುಡುಕಬೇಡಿ ಎಂದು ತಂಡ ಕೇಳಿಕೊಂಡಿದೆ.

ಇದನ್ನೂ ಓದಿ: ‘ಕರ್ಮ ಹಿಂಬಾಲಿಸುತ್ತದೆ, ಪಾಪಕರ್ಮ ಅವನ ಸುಡುತ್ತದೆ’; ದರ್ಶನ್ ಕೇಸ್​ ಬೆನ್ನಲ್ಲೇ ಜಗ್ಗೇಶ್ ಮಾರ್ಮಿಕ ಟ್ವೀಟ್

ಆಗಸ್ಟ್​ 15ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಅಂದು ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಕಾರಣಕ್ಕೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಆಗಸ್ಟ್ 23ಕ್ಕೆ ಮುಂದೂಡಿಕೊಳ್ಳಲಾಗಿದೆ. ಜನಾರ್ಧನ್ ಚಿಕ್ಕಣ್ಣ ಅವರು ಈ ಮೊದಲು ‘ಗುಳ್ಟು’ ಮಾಡಿದ್ದರು. ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಆ್ಯಕ್ಷನ್ ಮೆರೆದಿದ್ದಾರೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ಧನ್ಯಾ ರಾಮ್‍ಕುಮಾರ್‍, ನಾಗಭೂಷಣ್, ಅನಿರುದ್ಧ್ ಆಚಾರ್ಯ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:24 am, Thu, 8 August 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್