AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಗೆ ಬರೆಯೋಕೆ, ಓದೋಕೆ ಬರೋ ಏಕೈಕ ಭಾಷೆ ಕನ್ನಡ; ನಿತ್ಯಾ ಮೆನನ್

ಬಹುಭಾಷಾ ನಟಿ ನಿತ್ಯ ಮೆನನ್ ಕನ್ನಡದಲ್ಲಿ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಷ್ಟೋ ಜನರಿಗೆ ನಿತ್ಯಾ ಮೆನನ್ ಕನ್ನಡತಿ ಎಂಬುದು ಸಹ ಗೊತ್ತಿಲ್ಲ. ನಿತ್ಯಾ ಮೆನನ್ ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ನಿತ್ಯಾ ಮೆನನ್​ಗೆ ಬರೆಯಲು ಹಾಗೂ ಓದಲು ಬರುವ ಏಕೈಕ ಭಾಷೆ ಕನ್ನಡ ಮಾತ್ರವಂತೆ.

ನಂಗೆ ಬರೆಯೋಕೆ, ಓದೋಕೆ ಬರೋ ಏಕೈಕ ಭಾಷೆ ಕನ್ನಡ; ನಿತ್ಯಾ ಮೆನನ್
ನಿತ್ಯ ಮೆನನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 07, 2024 | 5:11 PM

Share

ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡ ಮಾತನಾಡಲು ಬರದೆ ಇರುವ ಅನೇಕ ಹೀರೋಯಿನ್​ಗಳು ಇರೋದು ಗೊತ್ತೇ ಇದೆ. ಆ ಬಗ್ಗೆ ಆಗಾಗ ಟೀಕೆಗಳು ಎದುರಾಗುತ್ತವೆ. ಆದರೆ, ನಿತ್ಯಾ ಮೆನನ್ ಇದಕ್ಕೆ ಭಿನ್ನ. ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಇಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ಅವರಿಗೆ ಕನ್ನಡ ಅತ್ಯುತ್ತಮವಾಗಿ ಮಾತನಾಡೋಕೆ ಬರುತ್ತದೆ ಎನ್ನುವ ವಿಚಾರ ಅನೇಕರಿಗೆ ತಿಳಿದಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ನಿತ್ಯಾ ಮೆನನ್ ಅವರು ಕನ್ನಡದ ‘7 ಓ ಕ್ಲಾಕ್’ ಸಿನಿಮಾ ಮೂಲಕ ಹೀರೋಯಿನ್ ಆದರು. ಈ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಆ ಬಳಿಕ ಅವರಿಗೆ ಪರಭಾಷೆಗಳಿಂದ ಆಫರ್ಗಳು ಬಂದವು. ಕನ್ನಡದ ಜೊತೆ ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನು ಮಾಡಿದರು. ಕೆಲ ವರ್ಷ ಅವರು ಪರಭಾಷೆಯಲ್ಲಿ ಬ್ಯುಸಿ ಆದರು. ಹೀಗಾಗಿ, ಅನೇಕರಿಗೆ ಇವರು ಪರಭಾಷಾ ನಟಿ ಎನ್ನುವ ಫೀಲ್ ನೀಡಿತು. ಆದರೆ, ಇದಕ್ಕೆ ನಿತ್ಯಾ ಮೆನನ್ ಅವರು ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದರು.

ನಿತ್ಯಾಗೆ ತೆಲುಗು, ಮಲಯಾಳಂ, ತಮಿಳು ಮಾತನಾಡಲು ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ಕನ್ನಡವನ್ನು ಅವರಿಗೆ ಬರೆಯೋಕೆ ಬರುತ್ತದೆ. ಈ ಬಗ್ಗೆ ಆ್ಯಂಕರ್ ಅನುಶ್ರೀ ಜೊತೆ ಅವರು ಈ ಮೊದಲು ಮಾಹಿತಿ ಹಂಚಿಕೊಂಡಿದ್ದರು. ಎಷ್ಟೇ ಫೇಮ್ ಸಿಕ್ಕರೂ ತಾವು ಬದಲಾಗಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ:ನಿತ್ಯಾ ಮೆನನ್ ಮದುವೆ ಆಗದೇ ಇರಲು ಇದೆ ದೊಡ್ಡ ಕಾರಣ; ಅವರು ಸಮಾಜಕ್ಕೆ ಹೆದರುವವರಲ್ಲ

‘ನಾವು ಹೇಗೆ ಇರ್ತಿವೋ ಹಾಗೇ ಇರ್ತೀವಿ. ಫೇಮ್-ಹಣ ಸಿಕ್ಕರೆ ರಿಯಾಲಿಟಿ ಹೊರಗೆ ಬರುತ್ತದೆ ಅಷ್ಟೇ. ಇಲ್ಲಿ ಯಾರೂ ಬದಲಾಗಲ್ಲ. ನಾನು ಯಾವಾಗಲೂ ಹೇಳುತ್ತಾ ಇರುತ್ತೇನೆ ನಾನು ಓದಿದ್ದು ಕನ್ನಡದಲ್ಲೇ. ನಾನು ಇಂದಿರಾನಗರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಓದಿದ್ದು. ಅದು ಉಡುಪಿ ಮಠದ ಶಾಲೆ. ಹೀಗಾಗಿ, ನನಗೆ ಸರಿಯಾಗೆ ಬರೆಯೋಕೆ ಹಾಗೂ ಓದೋಕೆ ಬರೋ ಭಾಷೆ ಎಂದರೆ ಅದು ಕನ್ನಡ’ ಎಂದಿದ್ದಾರೆ ಅವರು.

ನಿತ್ಯಾ ಕನ್ನಡ ಚಿತ್ರರಂಗಕ್ಕೆ ಬರದೆ 8 ವರ್ಷಗಳು ಕಳೆದಿವೆ. 2016ರಲ್ಲಿ ರಿಲೀಸ್ ಆದ ‘ಕೋಟಿಗೊಬ್ಬ 2’ ಚಿತ್ರದಲ್ಲಿ ನಿತ್ಯಾ ನಟಿಸಿದ್ದರು. ಆ ಬಳಿಕ ಅವರ ನಟನೆಯ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗಿಲ್ಲ. ಸದ್ಯ ಎರಡು ತಮಿಳು ಸಿನಿಮಾಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ