ಕೇರಳದ ದುರಂತಕ್ಕೆ ಮಿಡಿದ ಪ್ರಭಾಸ್; 2 ಕೋಟಿ ರೂಪಾಯಿ ದೇಣಿಗೆ
ವಯನಾಡಿನಲ್ಲಿ ನಡೆದ ದುರಂತ ನಿಜಕ್ಕೂ ಶಾಕಿಂಗ್. ಈ ಘಟನೆಯಲ್ಲಿ ಸುಮಾರು 400 ಜನರು ಮೃತಪಟ್ಟಿದ್ದಾರೆ. 150ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪರಿಹಾರಕ್ಕೆ ನೆರವಾಗಲು ಹಣ ನೀಡುತ್ತಿದ್ದಾರೆ. ಕೇರಳದ ನೆರೆಯ ರಾಜ್ಯದವರೂ ಸಹಾಯಕ್ಕೆ ನಿಂತಿದ್ದಾರೆ.
ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಸಾಕಷ್ಟು ಪ್ರವಾಹದಿಂದ ಕೇರಳ ತತ್ತರಿಸಿ ಹೋಗಿದೆ. ಈಗ ಅಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಮೋಹನ್ಲಾಲ್ ಸೇರಿ ಅನೇಕ ಸೆಲೆಬ್ರಿಟಿಗಳು ಹಣ ನೀಡಿದ್ದಾರೆ. ಈಗ ಟಾಲಿವುಡ್ ನಟ ಪ್ರಭಾಸ್ ಕೂಡ ಕೇರಳ ಮುಖ್ಯಮಂತ್ರಿ ಪರಿಹಾರನಿಧಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೂಲಕ ವಯನಾಡು ಜನರ ಸಹಾಯಕ್ಕೆ ನಿಂತಿದ್ದಾರೆ.
ವಯನಾಡಿನಲ್ಲಿ ನಡೆದ ದುರಂತದಲ್ಲಿ ಸುಮಾರು 400 ಜನರು ಮೃತಪಟ್ಟಿದ್ದಾರೆ. 150ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದು, ಅವರನ್ನು ಹಡುಕುವ ಕೆಲಸ ಆಗುತ್ತದೆ. ಅವರು ಬದುಕಿರುವ ಯಾವುದೇ ಸೂಚನೆ ಇಲ್ಲ. ಈ ಘಟನೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಪರಿಹಾರಕ್ಕೆ ನೆರವಾಗಲು ಹಣ ನೀಡುತ್ತಿದ್ದಾರೆ. ಕೇರಳದ ನೆರೆಯ ರಾಜ್ಯದವರೂ ಸಹಾಯಕ್ಕೆ ನಿಂತಿದ್ದಾರೆ.
ಅಲ್ಲು ಅರ್ಜುನ್ ಅವರು 50 ಲಕ್ಷ ರೂಪಾಯಿ, ಚಿರಂಜೀವಿ, ರಾಮ್ ಚರಣ್ ತಲಾ 1 ಕೋಟಿ ರೂಪಾಯಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಇದನ್ನು ಸರ್ಕಾರ ಪರಿಹಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸೆಲೆಬ್ರಿಟಿಗಳು ನೀಡಿರುವ ಹಣದಿಂದ ಆಹಾರ, ಬಟ್ಟೆ ಖರೀದಿಗೆ ಸಹಾಯ ಆಗಲಿದೆ. ಇದರ ಜೊತೆಗೆ ಸ್ಥಳೀಯರು ಆಹಾರ, ಬಟ್ಟೆ ಹಾಗೂ ಮೆಡಿಕಲ್ ಕಿಟ್ಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಅನ್ನೋದು ವಿಶೇಷ. ಇದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು. ಇದರಲ್ಲಿ ಒಂದಷ್ಟು ಮೊತ್ತವನ್ನು ಅವರು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ಜೋಡಿ ಆಗ್ತಾರಾ ತ್ರಿಶಾ-ಪ್ರಭಾಸ್?
ಪ್ರಭಾಸ್ ಅವರು ‘ರಾಜಾ ಸಾಬ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮಾರುತಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೆ, ‘ಸ್ಪಿರಿಟ್ ಚಿತ್ರದ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹನು ರಾಘವಪುಡಿ ಚಿತ್ರದಲ್ಲೂ ನಟಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.