ನಿತ್ಯಾ ಮೆನನ್ ಮದುವೆ ಆಗದೇ ಇರಲು ಇದೆ ದೊಡ್ಡ ಕಾರಣ; ಅವರು ಸಮಾಜಕ್ಕೆ ಹೆದರುವವರಲ್ಲ
ಎಲ್ಲಾ ಸೆಲೆಬ್ರಿಟಿಗಳು ಮದುವೆ ವಿಚಾರದಲ್ಲಿ ಮಾತನಾಡೋಕೆ ಹೋಗಲ್ಲ. ಕೆಲವು ಸಂದರ್ಶನಗಳಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡಿದ್ದು ಇದೆ. ಮದುವೆ ಆಗದೇ ಇರಲು ಒಂದು ದೊಡ್ಡ ಕಾರಣ ಇದೆ. ಇದನ್ನು ಅವರು ವಿವರಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ನಿತ್ಯಾ ಮೆನನ್ (Nithya Menen) ಹೆಚ್ಚು ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಮಂದಿಗೂ ಅವರ ಪರಿಚಯ ಇದೆ. ಮಲಯಾಳಂ, ಕನ್ನಡ ಸೇರಿ ಹಲವು ಭಾಷೆಗಳನ್ನು ಅವರು ಮಾತನಾಡಬಲ್ಲರು. ಅವರಿಗೆ ಭಾಷೆಯ ಮೇಲೆ ಹಿಡಿತ ಇದೆ. ಅವರಿಗೆ ಇಂದು (ಏಪ್ರಿಲ್ 8) ಜನ್ಮದಿನ. ಅವರಿಗೆ ಈಗ 36 ವರ್ಷ ವಯಸ್ಸು. ಆದರೂ ಮದುವೆ ಆಗಿಲ್ಲ. ನಿತ್ಯಾಗೆ ಸದ್ಯಕ್ಕಂತೂ ವಿವಾಹದ ಆಲೋಚನೆ ಇಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಈ ಮೊದಲು ಅವರು ವಿವರಿಸಿದ್ದರು.
ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇರುತ್ತದೆ. ಅವರು ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆಯಂತೂ ಸದಾ ಕೇಳಿಬರುತ್ತಲೇ ಇರುತ್ತದೆ. ಎಲ್ಲಾ ಸೆಲೆಬ್ರಿಟಿಗಳು ಇದಕ್ಕೆ ಉತ್ತರಿಸೋಕೆ ಹೋಗಲ್ಲ. ಕೆಲವು ಸಂದರ್ಶನಗಳಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡಿದ್ದು ಇದೆ. ನಿತ್ಯಾ ಮೆನನ್ ಮದುವೆ ಆಗದೇ ಇರಲು ಒಂದು ದೊಡ್ಡ ಕಾರಣ ಇದೆ. ಇದನ್ನು ಅವರು ವಿವರಿಸಿದ್ದಾರೆ.
‘ಎಲ್ಲವನ್ನೂ ಮೀರಿ ನಾನು ಬೆಳೆದಿದ್ದೇನೆ. ನಾನು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಮತ್ತೊಬ್ಬರು ಹೇಳಬೇಕಿಲ್ಲ. ಈ ವಿಚಾರದಲ್ಲಿ ನನ್ನ ಪಾಲಕರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ನನಗೆ ಸ್ವಾತಂತ್ರ್ಯ ನೀಡಿದ್ದಾರೆ. ಸ್ವಾತಂತ್ರ್ಯ ಇಲ್ಲದೆ ನನಗೆ ಬದುಕೋಕೆ ಆಗಲ್ಲ. ಅವರಿಗೂ ಅದು ಗೊತ್ತು’ ಎಂದಿದ್ದಾರೆ ನಿತ್ಯಾ ಮೆನನ್.
‘ಎಲ್ಲರಿಗೂ ಕೆಲವು ಮೂಲಭೂತ ನಿರೀಕ್ಷೆಗಳು ಇದ್ದೇ ಇರುತ್ತದೆ. ನಾನು ಯಾರ ಜೊತೆ ಇದ್ದರೂ ಅವರಿಗೆ ನನ್ನಿಂದ ಖುಷಿ ಸಿಗಬಹುದು. ಆದರೆ, ಅವರು ಆ ರೀತಿ ಅಲ್ಲದಿದ್ದರೆ ಎನ್ನುವ ವಿಚಾರ ನನ್ನನ್ನು ಕಾಡುತ್ತದೆ. ನಾನು ಮದುವೆ ಸ್ಟೇಜ್ನ ದಾಟಿದ್ದೇನೆ’ ಎಂದಿದ್ದಾರೆ ನಿತ್ಯಾ.
ನಿತ್ಯಾ ಅವರ ಅಜ್ಜಿ ಮದುವೆ ಆಗುವಂತೆ ಒತ್ತಡ ಹೇರುತ್ತಿದ್ದರು. ಆದರೆ, ಅವರು ತೀರಿಕೊಂಡ ನಂತರದಲ್ಲಿ ಆ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ‘ಅಜ್ಜಿ ಬದುಕಿದ್ದಾಗ ಮದುವೆಯಾಗಬೇಕು ಎಂದು ಒತ್ತಡ ಬರುತ್ತಿತ್ತು. ನಾನು ಜನಪ್ರಿಯೆ ನಟಿ ಎಂಬುದು ಅವರಿಗೆ ಬೇಕಾಗೇ ಇರಲಿಲ್ಲ. ನಾನು ಏನೂ ಮಾಡುತ್ತಿಲ್ಲ ಎಂಬುದೇ ಅವರ ಭಾವನೆ ಆಗಿತ್ತು. ಮದುವೆ ಆಗುವಂತೆ ಅವರು ಒತ್ತಡ ಹೇರುತ್ತಿದ್ದರು. ಅವರು ಈಗ ನಮ್ಮೊಂದಿಗೆ ಇಲ್ಲ. ಅವರ ಬಿಟ್ಟು ಈ ವಿಚಾರದಲ್ಲಿ ಇನ್ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ’ ಎಂಬುದು ನಿತ್ಯಾ ಮಾತು.
ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಟ್ಟಾದ ನಟಿ ನಿತ್ಯಾ ಮೆನನ್
‘30 ವರ್ಷ ದಾಟಿದಾಗ ಮದುವೆ ಬಗ್ಗೆ ಒತ್ತಡ ಬರುತ್ತದೆ. ಆಗ ಹಲವು ಬಾಕ್ಸ್ಗಳನ್ನು ನೀವು ಟಿಕ್ ಮಾಡಬೇಕು. ಸಮಾಜ ಅಂದುಕೊಂಡ ವಿಚಾರವನ್ನು ಪಾಲಿಸಿದರೆ ನಾವು ಒಳ್ಳೆಯವರು ಎನಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಕೆಟ್ಟವರು ಎನ್ನುವ ಭಾವನೆ ಬರುತ್ತದೆ. ಸಮಾಜದಲ್ಲಿ ಹಲವು ನಿಯಮಗಳು ಇವೆ. ಅವು ಯಾಕಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಅದನ್ನು ಪಾಲಿಸದೇ ಇದ್ದರೆ ನಾವು ಕೆಟ್ಟವರು ಎನ್ನುವ ಭಾವನೆ ಬರುತ್ತದೆ. ಒಂದೊಮ್ಮೆ ಅದನ್ನು ನಿಯಮ ಪಾಲಿಸದೇ ಇದ್ದರೆ ಸಾಕಷ್ಟು ಟೀಕೆಗಳು ಬರುತ್ತವೆ’ ಎಂದಿದ್ದಾರೆ ನಿತ್ಯಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ