ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ಕ್ರೈಸ್ಟ್ಚರ್ಚ್ನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.5 ಓವರ್ಗಳಲ್ಲಿ 181 ರನ್ ಗಳಿಸಿ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.
Updated on:Oct 25, 2026 | 11:17 AM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಹೊಚ್ಚ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಯಾವುದೇ ತಂಡಕ್ಕೂ ಸಾಧ್ಯವಾಗದ ಈ ಐತಿಹಾಸಿಕ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದು ಟೀಮ್ ಇಂಡಿಯಾ. ಅದು ಸಹ 200 ಗೆಲುವುಗಳೊಂದಿಗೆ ಎಂಬುದು ವಿಶೇಷ. (PC: BCCI)

ಹೌದು, ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 200 ನೇರ ಗೆಲುವುಗಳನ್ನು ದಾಖಲಿಸಿದ ವಿಶ್ವದ ಮೊದಲ ಹಾಗೂ ಏಕೈಕ ತಂಡ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. (PC: BCCI)

ವಿಶೇಷವೆಂದರೆ, ಭಾರತ ತಂಡವು 200ನೇ ಗೆಲುವು ದಾಖಲಿಸಿದ್ದು 300ನೇ ಪಂದ್ಯದಲ್ಲಿ. ಅಂದರೆ 300 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಈವರೆಗೆ 200 ನೇರ ಗೆಲುವು ಸಾಧಿಸಿದೆ. ಈ ಮೂಲಕ 300 ಪಂದ್ಯಗಳನ್ನಾಡಿದ ಸಾಧನೆಯೊಂದಿಗೆ 200 ಗೆಲುವು ದಾಖಲಿಸಿದ ದಾಖಲೆ ಬರೆದಿದೆ. (PC: BCCI)

ಟೀಮ್ ಇಂಡಿಯಾ ಈವರೆಗೆ 300 ಪಂದ್ಯಗಳಲ್ಲಿ ಒಟ್ಟು 206 ಗೆಲುವು ದಾಖಲಿಸಿದೆ. ಇದರಲ್ಲಿ 6 ಗೆಲುವುಗಳು ಸೂಪರ್ಗಳಿಂದ ಸಿಕ್ಕ ಜಯ. ಕ್ರಿಕೆಟ್ ಅಂಕಿ-ಅಂಶಗಳ ಪ್ರಕಾರ ಸೂಪರ್ ಓವರ್ ಅಥವಾ ಬೌಲ್-ಔಟ್ ಮೂಲಕ ಸಿಕ್ಕ ಗೆಲುವುಗಳನ್ನು 'ನೇರ ಗೆಲುವು' ಎಂದು ಪರಿಗಣಿಸಲಾಗುವುದಿಲ್ಲ. (PC: BCCI)

ಸದ್ಯ 300 ಟಿ20 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಇನ್ನೂ 5 ಟಿ20 ಮ್ಯಾಚ್ಗಳಲ್ಲಿ ಕಣಕ್ಕಿಳಿದರೆ ಮತ್ತೊಂದು ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಳ್ಳಬಹುದು. ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ವಿಶ್ವ ದಾಖಲೆ ಪಾಕಿಸ್ತಾನ್ ತಂಡ ಹೆಸರಿನಲ್ಲಿದೆ. ಪಾಕ್ ತಂಡವು ಈವರೆಗೆ 304 ಟಿ20 ಪಂದ್ಯಗಳನ್ನಾಡಿದ್ದು, ಈ ದಾಖಲೆ ಮುರಿಯಲು ಟೀಮ್ ಇಂಡಿಯಾ ಇನ್ನೂ 5 ಪಂದ್ಯಗಳನ್ನಾಡಬೇಕಿದೆ. (PC: BCCI)
Published On - 11:16 am, Sun, 25 October 26

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



