AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’: 3 ಸಾಮ್ರಾಜ್ಯ, 4,500 ಆಭರಣ, 18 ತಿಂಗಳು

ಕಳೆದ ಹತ್ತು ವರ್ಷಗಳಿಂದಲೂ ‘ರಾಮಾಯಣ’ ಕತೆಯ ಮೇಲೆ ಕೆಲಸ ಮಾಡಿದ್ದಾರೆ. ಪ್ರತಿ ಪಾತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲದೆ ಅವರ ಉಡುಗೆ, ತೊಡಗೆ, ಮಾತಿನ ಶೈಲಿ, ಆಭರಣಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಸಿನಿಮಾನಲ್ಲಿ ಬಳಲಾಗಿರುವ ಆಭರಣಗಳನ್ನು ತಯಾರಿಸಲು ಹಲವಾರು ಕಲಾವಿದರು ಕೆಲಸ ಮಾಡಿದ್ದಾರೆ.

‘ರಾಮಾಯಣ’: 3 ಸಾಮ್ರಾಜ್ಯ, 4,500 ಆಭರಣ, 18 ತಿಂಗಳು
Ramayana Movie
ಮಂಜುನಾಥ ಸಿ.
|

Updated on: Oct 25, 2026 | 3:33 PM

Share

‘ರಾಮಾಯಣ’ ಸಿನಿಮಾ ಭಾರಿ ಅದ್ಧೂರಿಯಾಗಿ ನಿರ್ಮಾಣಗೊಂಡಿದೆ. ಸಿನಿಮಾದ ಟ್ರೈಲರ್, ಟೀಸರ್ ಕೆಲ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾದ ಅದ್ಧೂರಿತನ ಎದ್ದು ಕಾಣುತ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಾಯಿ ಪಲ್ಲವಿ ಹೇಳಿದಂತೆ ನಿರ್ದೇಶಕ ನಿತೀಶ್ ತಿವಾರಿ ಅವರು ಈ ಸಿನಿಮಾಕ್ಕಾಗಿ ಹತ್ತು ವರ್ಷ ಕಷ್ಟಪಟ್ಟಿದ್ದಾರಂತೆ. ಕಳೆದ ಹತ್ತು ವರ್ಷಗಳಿಂದಲೂ ಅವರು ಈ ಕತೆಯ ಮೇಲೆ ಕೆಲಸ ಮಾಡಿದ್ದಾರೆ. ಪ್ರತಿ ಪಾತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲದೆ ಅವರ ಉಡುಗೆ, ತೊಡಗೆ, ಮಾತಿನ ಶೈಲಿ, ಆಭರಣಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಸಿನಿಮಾನಲ್ಲಿ ಬಳಲಾಗಿರುವ ಆಭರಣಗಳನ್ನು ತಯಾರಿಸಲು ಹಲವಾರು ಕಲಾವಿದರು ಕೆಲಸ ಮಾಡಿದ್ದಾರೆ.

ಜನಪ್ರಿಯ ಆಭರಣ ವಿನ್ಯಾಸ ಮತ್ತು ಮಾರಾಟ ಬ್ರ್ಯಾಂಡ್ ಆಗಿರುವ ‘ಟ್ರೈಬ್ ಅಮ್ರಾಪಾಲಿ’ಯು ‘ರಾಮಾಯಣ’ ಸಿನಿಮಾದ ಆಭರಣಗಳನ್ನು ವಿನ್ಯಾಸ ಮಾಡಿದೆ. ರಾಜಮನೆತನಗಳು, ಯೋಧರು, ದರ್ಬಾರಿಗಳು, ಪರಿವಾರದವರು, ಪೋಷಕ ಪಾತ್ರಗಳು ಒಟ್ಟಾರೆಯಾಗಿ ಸಿನಿಮಾನಲ್ಲಿ ಬರುವ ಪ್ರತಿ ಪಾತ್ರಗಳಿಗೂ ವಿನ್ಯಾಸವನ್ನು ಇದೇ ಸಂಸ್ಥೆ ಮಾಡಿದೆ.

ವಿನ್ಯಾಸಕ ತರಾಂಗ್ ಅರೋರಾ ಅವರ ನೇತೃತ್ವದಲ್ಲಿ ಬ್ರ್ಯಾಂಡ್‌ನ ವಿನ್ಯಾಸ ತಂಡವು ಚಲನಚಿತ್ರದ ನಿರ್ದೇಶಕರ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು, ಸುಮಾರು ಒಂದೂವರೆ ವರ್ಷಗಳ ಕಾಲ ಸಮಯ ತೆಗೆದುಕೊಂಡು ಆಭರಣಗಳನ್ನು ವಿನ್ಯಾಸ ಮಾಡಿದೆ. ಪುರಾಣಗಳು, ಪ್ರಾಚೀನ ಭಾರತೀಯ ಆಭರಣಗಳು, ದೇವಾಲಯದ ಕಲೆ, ಶಿಲ್ಪಕಲೆಗಳು ಮತ್ತು ಸಾಂಪ್ರದಾಯಿಕ ಆಭರಣ ಪ್ರಕಾರಗಳ ಕುರಿತು ವ್ಯಾಪಕವಾದ ಸಂಶೋಧನೆ ನಡೆಸಿ ಈ ಆಭರಣಗಳನ್ನು ವಿನ್ಯಾಸ ಮಾಡಲಾಗಿದೆ.

ಇದನ್ನೂ ಓದಿ:ಸೈಲೆಂಟ್ ಆಗಿ ಮುಂದಕ್ಕೆ ಹೋಯ್ತು ‘ರಾಮಾಯಣ 2’ ರಿಲೀಸ್ ದಿನಾಂಕ?

ಅಯೋಧ್ಯೆ, ಮಿಥಿಲೆ ಹಾಗೂ ಲಂಕೆ ಮೂರು ಸಾಮ್ರ್ಯಾಜ್ಯಗಳಿಗೆ ಮೂರು ವಿಭಿನ್ನ ಪ್ರಕಾರದ ಆಭರಣಗಳನ್ನು ವಿನ್ಯಾಸ ಮಾಡಲಾಗಿದೆ. ಆಯಾ ಸಾಮ್ರಾಜ್ಯಗಳ ಬಗ್ಗೆ ವಿವರವಾದ ಮಾಹಿತಿ, ಅಧ್ಯಯನ ನಡೆಸಿ ಪ್ರತಿಯೊಂದು ಆಭರಣವನ್ನೂ ಒಂದಕ್ಕಿಂತ ಒಂದು ಭಿನ್ನವಾಗಿರುವಂತೆ ವಿನ್ಯಾಸ ಮಾಡಲಾಗಿದೆ. ಅಯೋಧ್ಯೆಗಾಗಿ ಮಾಡಿದ ಆಭರಣಗಳಲ್ಲಿ ಸೂರ್ಯನ ಸಂಕೇತ, ಮಿಥಿಲಾದ ಆಭರಣಗಳಲ್ಲಿ ಪುಷ್ಪಕಲೆ, ಲಂಕೆಯ ಆಭರಣಗಳಲ್ಲಿ ಶಕ್ತಿಯ ಪ್ರತೀಕವಾದ ಚಿಹ್ನೆಗಳನ್ನು ಸೇರಿಸಲಾಗಿದೆಯಂತೆ. ಒಟ್ಟು ಸುಮಾರು 4500 ಕ್ಕೂ ಹೆಚ್ಚು ಆಭರಣಗಳನ್ನು ಈ ಒಂದು ಸಿನಿಮಾಕ್ಕಾಗಿ ವಿನ್ಯಾಸ ಮಾಡಲಾಗಿದೆ.

‘ರಾಮಾಯಣ’ ಸಿನಿಮಾವು ನವೆಂಬರ್ 5ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದು, ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇನ್ನೂ ಹಲವಾರು ಪ್ರಮುಖ ಕಲಾವಿದರು ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ