AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ

ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ

ರಮೇಶ್ ಬಿ. ಜವಳಗೇರಾ
|

Updated on: Sep 10, 2026 | 8:44 PM

Share

ವಿದೇಶದಲ್ಲಿ ಅಕ್ರಮ ಹೂಡಿಕೆ ಸಂಬಂಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಮಾಡಿದ್ದು, ಸತತ 36 ಗಂಟೆಗಳ ಇಡಿ ಅಧಿಕಾರಿಗಳು ನಡೆಸಿದ ಪರಿಶೀಲನೆ ಅಂತ್ಯವಾಗಿದೆ. ಸತೀಶ್ ಜಾರಕಿಹೊಳಿ ಬೆಳಗಾವಿ ಹಾಗೂ ಬೆಂಗಳೂರು ಮನೆ, ಕಚೇರಿ, ಆಪ್ತರ ಮನೆ ಅಂತಾ 18 ಕಡೆ ಇಡಿ ಅಧಿಕಾರಿಗಳು ನಿನ್ನೆ(ಸೆ.09) ಬೆಳಗ್ಗೆ 6 ಗಂಟಗೆ ದಾಳಿ ಮಾಡಿದ್ದು, ಇಂದು (ಸೆ.10) ಸಂಜೆ ವರೆಗೂ ಅಂದರೆ ಬರೋಬ್ಬರಿ 36 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರು/ಬೆಳಗಾವಿ (ಸೆಪ್ಟೆಂಬರ್ 10): ವಿದೇಶದಲ್ಲಿ ಅಕ್ರಮ ಹೂಡಿಕೆ ಸಂಬಂಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಮಾಡಿದ್ದು, ಸತತ 37 ಗಂಟೆಗಳ ಇಡಿ ಅಧಿಕಾರಿಗಳು ನಡೆಸಿದ ಪರಿಶೀಲನೆ ಅಂತ್ಯವಾಗಿದೆ. ಸತೀಶ್ ಜಾರಕಿಹೊಳಿ ಬೆಳಗಾವಿ ಹಾಗೂ ಬೆಂಗಳೂರು ಮನೆ, ಕಚೇರಿ, ಆಪ್ತರ ಮನೆ ಅಂತಾ 18 ಕಡೆ ಇಡಿ ಅಧಿಕಾರಿಗಳು ನಿನ್ನೆ(ಸೆ.09) ಬೆಳಗ್ಗೆ 6 ಗಂಟಗೆ ದಾಳಿ ಮಾಡಿದ್ದು, ಇಂದು (ಸೆ.10) ಸಂಜೆ ವರೆಗೂ ಅಂದರೆ ಬರೋಬ್ಬರಿ 37 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಇನ್ನು ಬೆಳಗಾವಿ ಮನೆಯಲ್ಲಿ ಸಿಕ್ಕ  ಮೂರು ಕೋಟಿ ರೂಪಾಯಿ ನಗದು ಹಣವನ್ನು ಬ್ಯಾಂಕ್​​ಗೆ ರವಾನಿಸಿದ್ದಾರೆ. ಇನ್ನು ಬೆಂಗಳೂರಿನ ಮನೆಯಲ್ಲಿ ಪತ್ತೆಯಾದ ಕೆಲ ಮಹತ್ವದ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದು, ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ ತೆರಳಿದ್ದಾರೆ.

ಇನ್ನು ಬೆಂಗಳೂರಿನ ಸರ್ಕಾರಿ ನಿವಾಸದಿಂದ ಇಡಿ ಅಧಿಕಾರಿಗಳು ಹೋಗುತ್ತಿದ್ದಂತೆಯೇ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮನೆ ಪ್ರವೇಶಿಸಿದ್ದು, ನಿಮ್ಮ ಜೊತೆ ನಾವು ಇದ್ದೇವೆ ಎನ್ನುವ ಧೈರ್ಯ ತುಂಬುತ್ತಿದ್ದಾರೆ. ಇದರ ಜೊತೆ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us