ಉದಿತ್ಗೆ ಕಾನೂನು ಸಂಕಷ್ಟ; ಗಾಯಕನ ವಿರುದ್ಧ ಕೇಸ್ ಹಾಕಿದ ಮೊದಲ ಪತ್ನಿ
ಉದಿತ್ ನಾರಾಯಣ್ ಅವರ ಮಾಜಿ ಪತ್ನಿ ರಂಜನಾ ಝಾ ಅವರು ಜೀವನಾಂಶ ಮತ್ತು ಆಸ್ತಿ ವಿವಾದಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಂಜನಾ ಅವರು ಉದಿತ್ ಅವರು ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಉದಿತ್ ಅವರು ಕೋರ್ಟ್‌ನಲ್ಲಿ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದಾರೆ ಮತ್ತು ಯಾವುದೇ ರಾಜಿ ಮಾಡಿಕೊಳ್ಳಲು ಇಚ್ಛಿಸುತ್ತಿಲ್ಲ ಎಂದು ಹೇಳಿದ್ದಾರೆ.

ಉದಿತ್ ನಾರಾಯಣ್ ಅವರು ಕಿಸ್ ಮೂಲಕ ಸುದ್ದಿ ಆಗಿದ್ದಾರೆ. ಅವರು ಕಾನ್ಸರ್ಟ್ ವೇಳೆ ಅಭಿಮಾನಿಗಳ ತುಟಿಗೆ ಮುತ್ತಿಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಟೀಕೆಗಳು ಎದುರಾಗುತ್ತಿರುವಾಗಲೇ ಅವರ ವಿರುದ್ಧ ಕೇಸ್ ಒಂದು ದಾಖಲಾಗಿದೆ. ಈ ರೀತಿ ಪ್ರಕರಣ ದಾಖಲು ಮಾಡಿದ್ದು ಬೇರಾರೂ ಅಲ್ಲ ಅವರ ಮೊದಲ ಪತ್ನಿ ರಂಜನಾ ಝಾ. ಅವರು ಉದಿತ್ ವಿರುದ್ಧ ಜೀವನಾಂಶ ಪ್ರಕರಣವನ್ನು ದಾಖಲಿಸಿದ್ದಾರೆ.
ಉದಿತ್ ನಾರಾಯಣ್ ತಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅವರ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ರಂಜನಾ ಆರೋಪಿಸಿದ್ದಾರೆ. ಶುಕ್ರವಾರ (ಫೆಬ್ರವರಿ 21) ಉದಿತ್ ನಾರಾಯಣ್ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರು ತಮ್ಮ ನಿರ್ಧಾರದಲ್ಲಿ ದೃಢವಾಗಿ ನಿಂತಿದ್ದು, ಯಾವುದೇ ಇತ್ಯರ್ಥಕ್ಕೆ ಸಿದ್ಧರಿಲ್ಲ ಎಂದಿದ್ದಾರೆ.
‘ರಂಜನಾ ಅವರು ನನ್ನಿಂದ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ’ ಎಂದು ಉದಿತ್ ನಾರಾಯಣ್ ಅವರು ಕೋರ್ಟ್‌ನಲ್ಲಿ ಹೇಳಿದ್ದಾರೆ. ಈ ಮೊದಲು ಬಿಹಾರದ ಮಹಿಳಾ ಕಮಿಷನ್ನಲ್ಲಿ ಕೇಸ್ ದಾಖಲಾಗಿತ್ತು. ಆ ಸಂದರ್ಭದಲ್ಲಿ ಪ್ರಕರಣ ಇತ್ಯರ್ಥ ಆಗಿತ್ತು.
ಈ ಮೊದಲು ರಂಜನಾ ಅವರಿಗೆ ಉದಿತ್ ತಿಂಗಳಿಗೆ 15 ಸಾವಿರ ರೂಪಾಯಿ ನೀಡುತ್ತಿದ್ದರು. 2021ರಲ್ಲಿ ಅದನ್ನು 25 ಸಾವಿರ ರೂಪಾಯಿಗೆ ಏರಿಕೆ ಮಾಡಲಾಯಿತು. ಇಷ್ಟೇ ಅಲ್ಲದೆ, 1 ಕೋಟಿ ರೂಪಾಯಿ ಮೌಲ್ಯದ ಭೂಮಿ ಹಾಗೂ ಮನೆಯನ್ನು ಉದಿತ್ ರಂಜನಾಗೆ ನೀಡಿದ್ದರು. 25 ಲಕ್ಷ ಬೆಲೆಯ ಜ್ಯುವೆಲರಿಗಳನ್ನು ಕೂಡ ನೀಡಲಾಗಿತ್ತು. ಇದನ್ನು ರಂಜನಾ ಮಾರಿಕೊಂಡಿದ್ದರು ಎನ್ನಲಾಗಿದೆ.
‘ನನಗೆ ವಯಸ್ಸಾಗುತ್ತಾ ಬಂದಂತೆ ಆರೋಗ್ಯ ಹದಗೆಡುತ್ತಾ ಹೋಗಿದೆ. ಹೀಗಾಗಿ, ಉದಿತ್ ಜೊತೆ ಇರಬೇಕೆನ್ನುವುದು ನಿಜವಾದ ಆಸೆ ಹುಟ್ಟಿಕೊಂಡಿದೆ. ನನಗೆ ಅವರ ಜೊತೆ ಕಳೆಯಬೇಕು ಎನ್ನುವ ಆಸೆ ಹುಟ್ಟಿಕೊಂಡಿದೆ’ ಎಂದು ರಂಜನಾ ಅವರು ವಕೀಲರ ಮೂಲಕ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಿಲ್ಲುತ್ತಿಲ್ಲ ಉದಿತ್ ನಾರಾಯಣ್ ಹಾವಳಿ; ಕಾನ್ಸರ್ಟ್ ವೇಳೆ ಮತ್ತೋರ್ವ ಅಭಿಮಾನಿಯ ತುಟಿಗೆ ಚುಂಬನ
‘ಉದಿತ್ ಅವರು ನನ್ನನ್ನು ನಿರ್ಲಕ್ಷಿಸಿದ್ದಾರೆ. ಜಮೀನು ಮಾರಾಟದಿಂದ ಬಂದ ಹಣದಲ್ಲಿ 18 ಲಕ್ಷ ರೂಪಾಯಿಗಳನ್ನು ಇಟ್ಟುಕೊಂಡಿದ್ದಾರೆ. ನಾನು ಮುಂಬೈಗೆ ಬಂದಾಗಲೆಲ್ಲಾ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ’ ಎಂದು ಅವರು ಆರೋಪಿಸಿದ್ದಾರೆ.
ಉದಿತ್ ಹಾಗೂ ರಂಜನಾ ಅವರು 11984ರಲ್ಲಿ ವಿವಾಹ ಆದರು. ಉದಿತ್ ಅವರ ವೃತ್ತಿ ಜೀವನ ಉತ್ತಮವಾಗುತ್ತಾ ಬಂದಂತೆ ಇವರ ಸಂಬಂಧದಲ್ಲಿ ಬಿರುಕು ಮೂಡಿತು. ಅದೇ ವರ್ಷ ಇವರು ಬೇರೆ ಆದರು. ನನ್ನನ್ನು ಉದಿತ್ ಒಂಟಿ ಮಾಡಿದ್ದಾರೆ ಎಂದು ರಂಜನಾ ಆರೋಪಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.