ಕಂಡಕ್ಟರ್ ಆಗಿದ್ದಾಗಲೇ ಸ್ಟೈಲ್ ಕಲಿತಿದ್ದ ರಜನಿಕಾಂತ್; ಯುವತಿಯರನ್ನು ಹೇಗೆ ಇಂಪ್ರೆಸ್ ಮಾಡುತ್ತಿದ್ದರು ಗೊತ್ತಾ?
ರಜನಿಕಾಂತ್ ಅವರ ಸ್ಟೈಲಿಶ್ ವ್ಯಕ್ತಿತ್ವವು ಬೆಂಗಳೂರಿನ ಬಸ್ ಕಂಡಕ್ಟರ್ ಆಗಿದ್ದ ಅವರ ಆರಂಭಿಕ ಜೀವನದಿಂದಲೇ ರೂಪುಗೊಂಡಿದೆ. ಅವರು ತ್ವರಿತವಾಗಿ ಟಿಕೆಟ್ ನೀಡುತ್ತಿದ್ದರು ಮತ್ತು ಮಹಿಳೆಯರಿಗೆ ಗೌರವ ತೋರಿಸುತ್ತಿದ್ದರು. ಈ ವರ್ತನೆ ಅವರ ಸ್ಟಾರ್ ಡಮ್‌ಗೆ ಕಾರಣವಾಯಿತು. ಅವರ ಚಿತ್ರರಂಗದ ಪ್ರಯಾಣ ಮತ್ತು ಯಶಸ್ಸಿನ ಕುರಿತು ಈ ಲೇಖನ ವಿವರಿಸುತ್ತದೆ. ಅವರು ಈಗ ಲೋಕೇಶ್ ಕನಗರಾಜ್ ಅವರ 'ಕೂಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಜನಿಕಾಂತ್ ಅವರು ತಮಿಳು ಚಿತ್ರರಂಗದ ಸೂಪರ್ ಸ್ಟಾರ್. ಅವರು ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ರಜನಿಕಾಂತ್ (Rajinikanth) ಅವರು ಬಂದರೆ ಅಭಿಮಾನಿಗಳು ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಮುತ್ತಿಕೊಳ್ಳುತ್ತಾರೆ. ಸೆಲ್ಫಿಗೆ ಮುಗಿ ಬೀಳುತ್ತಾರೆ. ಇನ್ನು ರಜನಿಕಾಂತ್ ಅವರು ಸಿನಿಮಾಗಳಲ್ಲಿ ಮಾಡೋ ಸ್ಟೈಲ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ರಜನಿಕಾಂತ್ ಅವರು ಈ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ಮಹಿಳೆಯರ ಎದುರು ಹೀರೋಯಿಸಂ ತೋರಿಸುತ್ತಿದ್ದರು!
2018ರಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಜನಿಕಾಂತ್ ಮಾತನಾಡಿದ್ದರು. ಈ ವೇಳೆ ರಜನಿಕಾಂತ್ ಅವರು ತಮ್ಮ ಸ್ಟೈಲ್ ಬಂದಿದ್ದು ಹೇಗೆ ಎಂಬ ವಿಚಾರದ ಬಗ್ಗೆ ಮಾತನಾಡಿದ್ದರು. ಬೆಂಗಳೂರನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗಿನಿಂದಲೇ ಈ ಸ್ಟೈಲ್ಗಳು ಬಂದಿದ್ದವು ಎಂದು ರಜನಿಕಾಂತ್ ಅವರು ಹೇಳಿದ್ದರು. ಇದನ್ನು ಕೇಳಿ ಅನೇಕರು ಅಚ್ಚರಿಗೊಂಡಿದ್ದರು.
‘ನಾನು ಸ್ಟೈಲಿಶ್ ಪರ್ಸ್. ಬಸ್ ಟಿಕೆಟ್ ಕೊಡಲು ಉಳಿದವರಿಗೆ 30 ನಿಮಿಷ ಬೇಕಾಗುತ್ತಿತ್ತು. ಆದರೆ, ನಾನು 10 ನಿಮಿಷದಲ್ಲಿ ಆ ಕೆಲಸ ಮಾಡುತ್ತಿದ್ದೆ’ ಎಂದು ರಜನಿಕಾಂತ್ ಹೇಳಿದ್ದರು. ಆಗಲೇ ರಜನಿಕಾಂತ್ ಅವರು ಸಖತ್ ಫಾಸ್ಟ್ ಇದ್ದರು. ಪ್ಯಾಷನೇಟ್ ಆಗಿ ಕೆಲಸ ಮಾಡುತ್ತಿದ್ದರು.
‘ಆಗಿನ ಕಾಲದಲ್ಲಿ ಮಹಿಳೆಯರು ಮುಂದಿನ ಸಾಲಿನಲ್ಲಿ ಕೂತರೆ, ಪುರುಷರು ಹಿಂದೆ ಕೂರುತ್ತಾರೆ. ಇದು ಕರ್ನಾಟಕದಲ್ಲಿರೋ ಪದ್ಧತಿ. ಸಾಮಾನ್ಯವಾಗಿ ಕಂಡಕ್ಟರ್ ಟಿಕೆಟ್ ಕೊಟ್ಟು ಹಿಂದೆ ಉಳಿದುಕೊಳ್ಳುತ್ತಾರೆ. ಆದರೆ ನಾನು ಮುಂದೆಯೇ ಇರುತ್ತಿದ್ದೆ. ಆಗ ನನಗೆ ಸಾಕಷ್ಟು ಕೂದಲು ಇತ್ತು. ನಾನು ಕೂದಲನ್ನು ಕೈಯಲ್ಲಿ ಹಿಂದೆ ಹಾಕಿಕೊಳ್ಳುತ್ತಾ ಟಿಕೆಟ್ ಟಿಕೆಟ್ ಎನ್ನುತ್ತಿದ್ದೆ. ಈ ಮೂಲಕ ಯುವತಿಯರನ್ನು ಇಂಪ್ರೆಸ್ ಮಾಡುತ್ತಿದ್ದೆ’ ಎಂದಿದ್ದಾರೆ ಅವರು.
1975ರಲ್ಲಿ ರಜನಿಕಾಂತ್ ಚಿತ್ರರಂಗಕ್ಕೆ ಬಂದರು. ರಜನಿಕಾಂತ್ ಅವರ ಸ್ಟೈಲಿಶ್ ಲುಕ್, ಅವರ ಮ್ಯಾನರಿಸಂ ಎಲ್ಲರಿಗೂ ಇಷ್ಟ ಆಯಿತು. ಅವರ ಬದುಕು ಸಂಪೂರ್ಣವಾಗಿ ಬದಲಾಗಿ ಹೋಯಿತು. ಕೇವಲ ಸಂಬಳಕ್ಕಾಗಿ ದುಡಿಯುತ್ತಿದ್ದ ಅವರು ಈಗ ಪ್ರತಿ ಚಿತ್ರಕ್ಕೆ ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಜೈಲರ್ 2’ ಟೀಸರ್ ನೋಡಿದ್ರಾ? ಮತ್ತೆ ಆ್ಯಕ್ಷನ್ ಅವತಾರ
ರಜನಿಕಾಂತ್ ಅವರು ‘ಕೂಲಿ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಟ್ಲಿ ನಿರ್ದೇಶನದ ಹಾಗೂ ಸಲ್ಮಾನ್ ಖಾನ್ ನಟನೆಯ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಇದನ್ನು ಅವರು ನಿರಾಕರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:41 am, Wed, 5 March 25