ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂ.; ಸಾಧ್ಯವಾಗಿದ್ದು ಹೇಗೆ?
Ram Charan's Birthday: ರಾಮ್‌ಚರಣ್ ಅವರಿಗೆ ಇಂದು 38ನೇ ಜನ್ಮದಿನ. ಅವರು ಅಪಾರ ಸಂಪತ್ತು ಹೊಂದಿದ್ದಾರೆ. ವ್ಯಾಪಾರದಲ್ಲೂ ಯಶಸ್ಸು ಕಂಡಿದ್ದಾರೆ. ಹೈದರಾಬಾದ್ ಪೋಲೋ ರೈಡಿಂಗ್ ಕ್ಲಬ್, ಪ್ರೊಡಕ್ಷನ್ ಹೌಸ್, ಹೂಡಿಕೆಗಳು ಮುಂತಾದವು ಅವರ ವ್ಯಾಪಾರ ಸಾಮ್ರಾಜ್ಯದ ಒಂದು ಭಾಗ. ಅವರ ಸಿನಿಮಾ ವೃತ್ತಿಜೀವನ ಮತ್ತು ವ್ಯವಹಾರ ಯಶಸ್ಸಿನ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ರಾಮ್ ಚರಣ್ (Ram Charan) ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಾ ಇವೆ. ಸೋಶಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಫೋಟೋಗಳನ್ನು ಹಾಕಿ ಶುಭ ಕೋರಲಾಗುತ್ತಿದೆ. ರಾಮ್ ಚರಣ್ ಅವರ ನಟನೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆದ್ದಿದ್ದು ಕಡಿಮೆ. ಆದಾಗ್ಯೂ ಅವರ ಆಸ್ತಿ 1,370 ಕೋಟಿ ರೂಪಾಯಿ ಅಷ್ಟಿದೆ. ಇದಕ್ಕೆ ಕಾರಣಾಗಿದ್ದು ಉದ್ಯಮ. ಹೌದು, ರಾಮ್ ಚರಣ್ ಕೇವಲ ಹೀರೋ ಮಾತ್ರವಲ್ಲ, ಅವರು ಯಶಸ್ವಿ ಉದ್ಯಮಿ ಕೂಡ ಹೌದು. ಆ ಬಗ್ಗೆ ತಿಳಿದುಕೊಳ್ಳೋಣ.
ರಾಮಚರಣ್ ಅವರು ‘ಚಿರುತಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮ ರಿಲೀಸ್ ಆಗಿದ್ದು 2007ರಲ್ಲಿ. 18 ವರ್ಷಗಳಲ್ಲಿ ರಾಮ್ ಚರಣ್ ಮಾಡಿದ್ದು ಕೇವಲ 15 ಸಿನಿಮಾ ಮಾತ್ರ. ಈಗ ಅವರ ನಟನೆಯ 16ನೇ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.
ರಾಮ್ ಚರಣ್ 16 ಸಿನಿಮಾಗಳ ಪೈಕಿ ಭರ್ಜರಿ ಯಶಸ್ಸು ಕಂಡಿದ್ದು ಬೆರಳೆಣಿಕೆ ಸಿನಿಮಾಗಳು. ‘ಮಗಧೀರ’, ‘ರಂಗಸ್ಥಳಂ’, ‘ಆರ್ಆರ್ಆರ್’ ಚಿತ್ರಗಳು ಸೂಪರ್ ಡೂಪರ್ ಹಿಟ್ ಆದರೆ, ‘ಬ್ರೂಸ್ಲಿ’ ಸಾಧಾರಣ ಗೆಲುವು ಕಂಡಿತು. ಉಳಿದ ಸಿನಿಮಾಗಳು ಅಂದುಕೊಂಡಂತೆ ಯಶಸ್ಸು ಕಂಡಿಲ್ಲ. ರಾಮ್ ಚರಣ್ ಅವರು ಉದ್ಯಮದಿಂದ ಹೆಚ್ಚು ಹಣ ಮಾಡುತ್ತಾ ಇದ್ದಾರೆ. ಚಿರಂಜೀವಿ ಅವರ ಮಗ ಎನ್ನುವ ಕಾರಣಕ್ಕೆ ರಾಮ್ ಚರಣ್ ಅವರಿಗೆ ಸಿನಿಮಾ ರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿದೆ.
ರಾಮ್ ಚರಣ್ ಅವರು 2011ರಲ್ಲಿ ಹೈದರಾಬಾದ್ ಪೋಲೋ ರೈಡಿಂಗ್ ಕ್ಲಬ್ ಹೊಂದಿದ್ದಾರೆ. ಅವರು ತಮ್ಮದೇ ಆದ ಪೋಲೋ ಟೀಂ ಕೂಡ ಹೊಂದಿದ್ದಾರೆ. ಇದಕ್ಕೆ ಹೈದರಾಬಾದ್ ಪೋಲೋ ರೈಡಿಂಗ್ ಕ್ಲಬ್ ಎಂದು ಹೆಸರು ಇಟ್ಟಿದ್ದಾರೆ. ರಾಮ್ ಚರಣ್ ಅವರು ಪ್ರೊಡಕ್ಷನ್ ಕಂಪನಿ ಹೊಂದಿದ್ದು, ‘ಖಿಲಾಡಿ ನಂಬರ್ 150’ (2017), ‘ಸೈರಾ ನರಸಿಂಹ ರೆಡ್ಡಿ’ (2019), ‘ಆಚಾರ್ಯ’ (2022) ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಮೆಗಾ ಪಿಕ್ಚರ್ಸ್ ‘ಯುವಿ ಕ್ರಿಯೇಷನ್ಸ್’ ಜೊತೆ 2023ರಲ್ಲಿ ಅವರು ಕೈ ಜೋಡಿಸಿದರು.
ಇದನ್ನೂ ಓದಿ: ರಾಮ್ ಚರಣ್ ಜೊತೆ ಮತ್ತೊಂದು ಸಿನಿಮಾ ಬೇಡಿಕೆಗೆ ಸಮಂತಾ ಹೇಳಿದ್ದೇನು?
ರಾಮ್ ಚರಣ್ ಅವರು ಏರ್ಲೈನ್ಸ್ ಹೊಂದಿದ್ದರು. ಇದಕ್ಕೆ ಟ್ರ್ಯೂಜೆಟ್ ಎನ್ನುವ ಹೆಸರನ್ನು ಇಡಲಾಗಿತ್ತು. ಆದರೆ, ಇತ್ತೀಚೆಗೆ ಇದು ಆಪರೇಷನ್ ನಿಲ್ಲಿಸಿದೆ. ರಾಮ್ ಚರಣ್ ಅವರು ಅಪೊಲೋ ಆಸ್ಪತ್ರೆಯಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನು ಅವರ ಪತ್ನಿ ಉಪಾಸನಾ ತಾತ ಪ್ರತಾಪ್ ಚಂದ್ರ ರೆಡ್ಡಿ ಆರಂಭಿಸಿದ್ದರು. ಇದರ ಜೊತೆ ಸಿನಿಮಾಗಳಿಗೆ ರಾಮ್ ಚರಣ್ ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Thu, 27 March 25