AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ ಉದ್ಘಾಟನೆಗೆ ಹಾಜರಿ ಹಾಕಲಿದೆ ಇಡೀ ಬಾಲಿವುಡ್; ಇಲ್ಲಿದೆ ಅತಿಥಿಗಳ ಲಿಸ್ಟ್

ಮಾರ್ಚ್ 22ರಂದು ಕೋಲ್ಕತ್ತಾದ ಇಡೆನ್ ಗಾರ್ಡನ್‌ನಲ್ಲಿ IPL 2025ರ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ ಮುಂತಾದ ಬಾಲಿವುಡ್ ಸ್ಟಾರ್ಸ್ ಮತ್ತು ಅಮೇರಿಕನ್ ಪಾಪ್ ಬ್ಯಾಂಡ್ OneRepublic ಭಾಗವಹಿಸಲಿದ್ದಾರೆ. ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು RCB ನಡುವೆ ನಡೆಯಲಿದೆ.

ಐಪಿಎಲ್ ಉದ್ಘಾಟನೆಗೆ ಹಾಜರಿ ಹಾಕಲಿದೆ ಇಡೀ ಬಾಲಿವುಡ್; ಇಲ್ಲಿದೆ ಅತಿಥಿಗಳ ಲಿಸ್ಟ್
ಐಪಿಎಲ್ ಉದ್ಘಾಟನೆಗೆ ಹಾಜರಿ ಹಾಕಲಿದೆ ಇಡೀ ಬಾಲಿವುಡ್; ಇಲ್ಲಿದೆ ಅತಿಥಿಗಳ ಲಿಸ್ಟ್
ರಾಜೇಶ್ ದುಗ್ಗುಮನೆ
|

Updated on:Mar 19, 2025 | 8:18 AM

Share

ಕೋಲ್ಕತ್ತ ಇಡನ್ ಗಾರ್ಡನ್​ನಲ್ಲಿ ಮಾರ್ಚ್​ 22ರಂದು ಐಪಿಎಲ್​ 2025ರ ಉದ್ಘಾಟನಾ ಸಮಾರಂಭ ನಡೆಯಲಿದೆ. ಅದ್ದೂರಿಯಾಗಿ ಈ ಬಾರಿಯ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆದಿದೆ. ಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭ ಹಲವು ಸ್ಟಾರ್​ಗಳ ಸಮಾಗಮಕ್ಕೆ ಸಾಕ್ಷಿ ಆಗಲಿದೆ. ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಶ್ರದ್ಧಾ ಕಪೂರ್, ಸಂಜಯ್ ದತ್ (Sanjay Dutt) ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ವೇದಿಕೆ ಮೇಲೆ ಅಮೆರಿಕದ ಪಾಪ್ ಬ್ಯಾಂಡ್ ಒನ್​ ರಿಪಬ್ಲಿಕ್ ಪರ್ಫಾರ್ಮೆನ್ಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಐಪಿಎಲ್ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್​ಸಿಬಿ ಮುಖಾಮುಖಿ ಆಗಲಿವೆ. ಕೋಲ್ಕತ್ತ ತಂಡದ ಮಾಲೀಕ ಶಾರುಖ್ ಖಾನ್ ಅವರು ಇದರಲ್ಲಿ ಭಾಗಿ ಆಗೋದು ಖಚಿತವಾಗಿದೆ. ಸಲ್ಮಾನ್ ಖಾನ್ ಅವರು ತಮ್ಮ ನಟನೆಯ ‘ಸಿಕಂದರ್’ ಚಿತ್ರವನ್ನು ಪ್ರಚಾರ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಐಪಿಎಲ್ ವೇದಿಕೆಯ ರಂಗು ಮತ್ತಷ್ಟು ಹೆಚ್ಚಲಿದೆ.

ಇನ್ನು, ಅರಿಜಿತ್ ಸಿಂಗ್, ಶ್ರೇಯಾ ಘೋಶಾಲ್, ಕರಣ್ ಔಜ್ಲಾ, ದಿಶಾ ಪಟಾಣಿ, ಶ್ರದ್ಧಾ ಕಪೂರ್, ವರುಣ್ ಧವನ್ ಪರ್ಫಾರ್ಮೆನ್ಸ್ ಮಾಡೋ ಸಾಧ್ಯತೆ ಇದೆ. ‘ಟೆಲ್​ ಮಿ’ ಸಾಂಗ್​ಗಾಗಿ ಕರಣ್ ಔಜ್ಲಾ ಹಾಗೂ ದಿಶಾಪಟಾಣಿ ಅವರು ಒನ್​ ರಿಪಬ್ಲಿಕ್ ಬ್ಯಾಂಡ್ ಜೊತೆ ಕೊಲ್ಯಾಬರೇಟ್ ಆಗಿದ್ದರು. ಅವರು ಪರ್ಫಾರ್ಮ್ ಮಾಡಲಿದ್ದಾರೆ.

ಇದನ್ನೂ ಓದಿ
Image
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
Image
ರಾಮ್ ಚರಣ್ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಎಸ್ ಧೋನಿ?
Image
‘ಅವನಿರಬೇಕಿತ್ತು’ ಹೊಸಬರ ಪ್ರಯತ್ನ, ಹೊಸ ಹಾಡು ಬಿಡುಗಡೆ
Image
ಶಿವಣ್ಣನ ಮನೆಗೆ ಯಶ್-ರಾಧಿಕಾ ಪಂಡಿತ್ ಭೇಟಿ, ಇಲ್ಲಿವೆ ನೋಡಿ ಚಿತ್ರ

ಇಷ್ಟಕ್ಕೆ ನಿಂತಿಲ್ಲ. ಕತ್ರಿನಾ ಕೈಫ್, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್, ಜಾನ್ವಿ ಕಪೂರ್, ಕರೀನಾ ಕಪೂರ್, ಪೂಜಾ ಹೆಗ್ಡೆ, ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್ ಸೇರಿದಂತೆ ಬಾಲಿವುಡ್​ನ ಅನೇಖ ಸ್ಟಾರ್​ಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಒಟ್ಟೂ 23 ಕಡೆಗಳಲ್ಲಿ 74 ಮ್ಯಾಚ್​ಗಳು ನಡೆಯಲಿದ್ದು, ಮೇ 25ರಂದು ಫಿನಾಲೆ ನಡೆಯಲಿದೆ.

ಇದನ್ನೂ ಓದಿ: ಸಿನಿಮಾ ತಡವಾದರೂ ಚಾರ್ಮ್​ ಕಳೆದುಕೊಳ್ಳದ ಶಾರುಖ್ ಖಾನ್

ಆರ್​ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಲಖನೋ ಸೂಪರ್ ಜಯಂಟ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈ ಬಾರಿಯ ಐಪಿಎಲ್​ನಲ್ಲಿ ಇರುವ ತಂಡಗಳಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Wed, 19 March 25

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?