‘ಪುಷ್ಪ 2’ಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ 20 ನಿಮಿಷಗಳ ಫೂಟೇಜ್
Pushpa 2: ಪುಷ್ಪ 2 ಸಿನಿಮಾ 3 ಗಂಟೆ 20 ನಿಮಿಷಗಳ ಅವಧಿಯೊಂದಿಗೆ ಯಶಸ್ವಿಯಾಗಿ ಬಿಡುಗಡೆಯಾಗಿದೆ. ಆದರೆ, ಚಿತ್ರತಂಡವು 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ ಜನವರಿ 11ರಿಂದ "ರಿಲೋಡ್" ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಈ ಹೆಚ್ಚುವರಿ ದೃಶ್ಯಗಳು ಜಪಾನ್ ದೃಶ್ಯದ ಸ್ಪಷ್ಟೀಕರಣ ಮತ್ತು ಅಲ್ಲು ಅರ್ಜುನ್ ಅವರ ಹೆಚ್ಚುವರಿ ಮಾಸ್ ದೃಶ್ಯಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಚಿತ್ರದ ಒಟ್ಟು ಅವಧಿ 3 ಗಂಟೆ 40 ನಿಮಿಷಗಳಾಗಲಿದೆ.
‘ಪುಷ್ಪ 2’ ಸಿನಿಮಾದ ಅವಧಿ ಬಗ್ಗೆ ಅನೇಕರು ತಕರಾರರು ತೆಗೆದಿದ್ದು ಇದೆ. ಈ ಚಿತ್ರದ ಅವಧಿ ಸದ್ಯ ಮೂರು ಗಂಟೆ ಇಪ್ಪತ್ತು ನಿಮಿಷ ಇದೆ. ಎರಡರಿಂದ ಎರಡೂವರೆಗೆ ಗಂಟೆಯಲ್ಲಿ ಸಿನಿಮಾಗಳು ಮೂಡಿ ಬರುತ್ತಿರುವ ಈ ಸಂದರ್ಭದಲ್ಲಿ ಅಷ್ಟು ದೀರ್ಘ ಅವಧಿಯ ಚಿತ್ರಗಳನ್ನು ಯಾರು ನೋಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಆದಾಗ್ಯೂ ಸಿನಿಮಾ ಹಿಟ್ ಆಯಿತು. ಈ ಬೆನ್ನಲ್ಲೇ ಚಿತ್ರತಂಡ 20 ನಿಮಿಷವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡುತ್ತಿದೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
‘ಪುಷ್ಪ 2: ದಿ ರೂಲ್’ ಚಿತ್ರ ರೀಲೋಡ್ ವರ್ಷನ್ನ ರಿಲೀಸ್ ಮಾಡುತ್ತಿದೆ. ಅಂದರೆ ಹೆಚ್ಚುವರಿಯಾಗಿ ಸಿನಿಮಾಗೆ 20 ನಿಮಿಷಗಳು ಸೇರ್ಪಡೆ ಆಗಲಿದ್ದು, ಚಿತ್ರದ ಅವಧಿ 3 ಗಂಟೆ 40 ನಿಮಿಷ ಆಗಲಿದೆ. ಜನವರಿ 11ರಿಂದ ಹೊಸ ವರ್ಷನ್ ಪ್ರಸಾರ ಕಾಣಲಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿ ಹೊರಹಾಕಿದ್ದಾರೆ.
ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾದಲ್ಲಿ ವೈಲ್ಡ್ಫೈಯರ್ ಶಬ್ದ ಹೆಚ್ಚು ಬಳಕೆ ಆಗಿತ್ತು. ಈಗ ಈ ಕಾಡ್ಗಿಚ್ಚಿಗೆ ಮತ್ತಷ್ಟು ಪೆಟ್ರೋಲ್ ಸುರಿಯುವ ಕೆಲಸ ನಿರ್ಮಾಣ ಸಂಸ್ಥೆ ಇಂದ ಆಗಿದೆ. ಕೆಲವು ದೃಶ್ಯಗಳನ್ನು ತಂಡದವರು ಕಟ್ ಮಾಡಿದ್ದರು. ಸಿನಿಮಾದ ಅವಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇದನ್ನು ಮಾಡಿದ್ದರು. ಈಗ ಸಿನಿಮಾ ಹಿಟ್ ಆಗಿರುವುದರಿಂದ ಚಿತ್ರಕ್ಕೆ ಮತ್ತಷ್ಟು ದೃಶ್ಯಗಳ ಸೇರ್ಪಡೆ ಆಗುತ್ತಿದೆ. ಸಿನಿಮಾನ ಇಷ್ಟಪಟ್ಟವರು ಮತ್ತೆ ಹೋಗಿ ನೋಡಬಹುದಾಗಿದೆ.
ಇದನ್ನೂ ಓದಿ:ಏಳು ವರ್ಷಗಳ ಹಳೆಯ ದಾಖಲೆ ಮುರಿದ ‘ಪುಷ್ಪ 2’
‘ಪುಷ್ಪ 2’ ಚಿತ್ರ 1831 ಕೋಟಿ ರೂಪಾಯಿ ಗಳಿಸಿದೆ. ಕೇವಲ 32 ದಿನಗಳಲ್ಲಿ ಈ ಸಾಧನೆ ಮಾಡಿದೆ. ಈ ಮೂಲಕ ‘ಬಾಹುಬಲಿ 2’ ದಾಖಲೆಯನ್ನು ಮುರಿದಿದೆ. ಈಗ ಹೊಸ ವರ್ಷನ್ ಸೇರ್ಪಡೆ ಆಗುತ್ತಿರುವುದರಿಂದ ಮತ್ತಷ್ಟು ಗಳಿಕೆ ಆಗುವ ನಿರೀಕ್ಷೆ ಇದೆ. ‘ದಂಗಲ್’ ಸಿನಿಮಾ 2,059 ಕೋಟಿ ರೂಪಾಯಿ ಗಳಿಸಿ ಮೊದಲ ಸ್ಥಾನದಲ್ಲಿ ಇದೆ. ಆ ಚಿತ್ರದ ದಾಖಲೆಯನ್ನು ‘ಪುಷ್ಪ 2’ ಸಿನಿಮಾ ಮುರಿಯೋ ಸಾಧ್ಯತೆ ಇದೆ.
ಏನೆಲ್ಲ ನಿರೀಕ್ಷಿಸಬಹುದು?
‘ಪುಷ್ಪ 2’ ಚಿತ್ರದಲ್ಲಿ ಜಪಾನ್ ದೃಶ್ಯ ಆರಂಭದಲ್ಲೇ ಬರುತ್ತದೆ. ಅದಕ್ಕೆ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ. ಈಗ ಹೆಚ್ಚುವರಿಯಾಗಿ ಸೇರ್ಪಡೆ ಆಗುವ ದೃಶ್ಯದಲ್ಲಿ ಆ ಬಗ್ಗೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲು ಅರ್ಜುನ್ ಅವರ ಮಾಸ್ ದೃಶ್ಯಗಳು ಮತ್ತಷ್ಟು ಇರಲಿದೆ ಎನ್ನಲಾಗಿದೆ.
ಡಿಸೆಂಬರ್ 5ರಂದು ‘ಪುಷ್ಪ 2’ ಚಿತ್ರ ರಿಲೀಸ್ ಆಯಿತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಮೂರನೇ ಭಾಗ ಕೂಡ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ