ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Siddaramaiah: ಸಿಎಂ ಸಿದ್ದರಾಮಯ್ಯ ದಶಕಗಳಿಂದಲೂ ರಾಜಕೀಯದಲ್ಲಿದ್ದಾರೆ. ಹಲವು ಬೇರೆ ಬೇರೆ ರಂಗದ ಸೆಲೆಬ್ರಿಟಿಗಳು, ಮುಖಂಡರು ಸಿದ್ದರಾಮಯ್ಯ ಅವರಿಗೆ ಬಹಳ ಆಪ್ತರು. ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು, ಕನ್ನಡ ಚಿತ್ರರಂಗದ ನಟಿಯೊಬ್ಬರು ತಮ್ಮನ್ನು ‘ಹೀರೋ’ ಎಂದು ಕರೆಯುತ್ತಿದ್ದ ವಿಷಯ ಹಂಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರಂತೆ ಹಿರಿಯ ನಟಿ ಜಯಂತಿ. ಈ ವಿಷಯವನ್ನು ಸ್ವತಃ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ. ನಿನ್ನೆ (ಜನವರಿ 07) ಗಾಂಧಿ ಭವನದಲ್ಲಿ ನಡೆದ ಜಯಂತಿ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಜಯಂತಿ ಅವರೊಟ್ಟಿಗಿನ ತಮ್ಮ ಸ್ನೇಹದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದರು. ಇಬ್ಬರೂ ಒಂದೇ ಪಕ್ಷದಲ್ಲಿದ್ದಾಗ ಹಲವು ಭಾರಿ ನಮ್ಮ ಮುಖಾಮುಖಿ ಆಗುತ್ತಿತ್ತೆಂದು ಸಿದ್ದರಾಮಯ್ಯ ಹೇಳಿದರು. ಈ ಕಾರ್ಯಕ್ರಮದಲ್ಲಿ ನಟ ಶ್ರೀನಾಥ್, ರಮೇಶ್ ಅರವಿಂದ್, ಪ್ರೇಮ, ಕವಿತಾ ಲಂಕೇಶ್, ನಿರ್ಮಾಪಕ ರಾಕಲೈನ್ ವೆಂಕಟೇಶ್, ಸಮೀವುಲ್ಲಾ, ಜಯಂತಿ ಅವರ ಪುತ್ರ ಕೃಷ್ಣಕುಮಾರ ಸಹ ಭಾಗಿ ಆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 08, 2025 03:19 PM
Latest Videos