Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರದಲ್ಲಿ ಹೊಸ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಶಿವಕುಮಾರ್ ಮೇಲೆ ಜೋಕ್ ಕಟ್ ಮಾಡಿದ ಸಿದ್ದರಾಮಯ್ಯ

ನಗರದಲ್ಲಿ ಹೊಸ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಶಿವಕುಮಾರ್ ಮೇಲೆ ಜೋಕ್ ಕಟ್ ಮಾಡಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 08, 2025 | 1:38 PM

ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ನಗರದಲ್ಲಿ ಒಟ್ಟು ನಾಲ್ಕು ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿಯವರಿಗೆ ನಗರ ಪೊಲೀಸ್ ಕಮೀಶನರ್ ಬಿ ದಯಾನಂದ್ ಹಳೆಯ ಕಟ್ಟಡ ಮತ್ತು ಹೊಸ ಕಟ್ಟಡಗಳ ಬಗ್ಗೆ ಫೋಟೋಗಳನ್ನು ತೋರಿಸಿ ವಿವರಣೆ ನೀಡಿದರು. ಹೊಸ ಕಟ್ಟಡದ ಬಗ್ಗೆ ಸ್ಥಳೀಯ ಶಾಸಕ ಮತ್ತು ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಹೆಚ್ಚು ಉತ್ಸುಕರಾಗಿರುವುದನ್ನು ನೋಡಬಹುದು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಸಂಪುಟದ ಕೆಲ ಸಹೋದ್ಯೋಗಿ ಮತ್ತು ನಗರದ ಟಾಪ್ ಪೊಲೀಸ್ ಅಧಿಕಾರಿಗಳೊಂದಿಗೆ ಚಾಮರಾಜಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದರು. ನೂತನ ಕಟ್ಟಡದ ರಿಬ್ಬನ್ ಕಟ್ ಮಾಡಿದ ಮೇಲೆ ಅವರು, ತಮ್ಮ ಎಡಭಾಗದಲ್ಲಿದ್ದ ಶಿವಕುಮಾರ್ ಬಲಗಾಲನ್ನು ಮುಂದಿಟ್ಟು ಒಳಗಡೆ ಪ್ರವೇಶಿಸಬೇಕೇ ಎಂದು ಗೃಹಸಚಿವ ಜಿ ಪರಮೇಶ್ವರ್ ಅವರನ್ನು ಕೇಳಿದಾಗ ಡಿಸಿಎಂ ಸೇರಿದಂತೆ ಎಲ್ಲರೂ ಗೊಳ್ಳನೆ ನಕ್ಕರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಚ್​ಎಂಪಿವಿ ವೈರಸ್: ಆರೋಗ್ಯ ಇಲಾಖೆ ಜತೆ ಸಿಎಂ ಸಿದ್ದರಾಮಯ್ಯ ಸಭೆ, ಜನರಿಗೆ ಅಭಯ