‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: 100 ದಿನ ಕಳೆದರೂ ಚೈತ್ರಾ ಹಳೇ ರಾಗ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: 100 ದಿನ ಕಳೆದರೂ ಚೈತ್ರಾ ಹಳೇ ರಾಗ

ಮದನ್​ ಕುಮಾರ್​
|

Updated on: Jan 08, 2025 | 5:11 PM

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಮಾಡಿಕೊಂಡ ಕಿರಿಕ್​ಗಳು ಒಂದೆರಡಲ್ಲ. ಹಾಗಾಗಿ ಅವರಿಗೆ ಅನೇಕರ ವಿರೋಧ ಇದೆ. ಪ್ರತಿ ಬಾರಿ ನಾಮಿನೇಟ್ ಆಗಿ ಬಚಾವ್​ ಆದಾಗಲೂ ಅವರು ಅಸಲಿ ಆಟ ಆರಂಭಿಸುವುದಾಗಿ ಹೇಳುತ್ತಿದ್ದರು. ಆದರೆ ನಿಜವಾದ ಆಟ ಆರಂಭ ಆಗಲೇ ಇಲ್ಲ. 100 ದಿನ ಕಳೆದರೂ ಕೂಡ ಚೈತ್ರಾ ಅವರು ಅದನ್ನೇ ಹೇಳುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾಗೆ ಫಿನಾಲೆ ಟಿಕೆಟ್​ ಸಿಗಬಾರದು ಎಂದು ಇನ್ನುಳಿದ ಸದಸ್ಯರು ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ‘ತಪ್ಪು ಸರಿಮಾಡಿಕೊಳ್ಳುವ ಗುಣ ಚೈತ್ರಾ ಅವರಲ್ಲಿ ಇಲ್ಲ’ ಎಂದು ಧನರಾಜ್ ಹೇಳಿದ್ದಾರೆ. ‘ಚೈತ್ರಾ ಕಡೆಯಿಂದ ಪದೇ ಪದೇ ತಪ್ಪು ಆಗುತ್ತಿದೆ’ ಎಂದು ಗೌತಮಿ ಹೇಳಿದ್ದಾರೆ. ಆಗ ಚೈತ್ರಾ ಕಣ್ಣಿರು ಹಾಕಿದ್ದಾರೆ. ‘100 ದಿನವೂ ಈ ಮನೆಯಲ್ಲಿ ನಡೆದಿರುವುದು ಇದೇ. ಆಡೋಕೆ ಕೊಡುತ್ತಿರಲಿಲ್ಲ. ಟಾರ್ಗೆಟ್ ಮಾಡಿ ಆಟದಿಂದ ಹೊರಗೆ ಇಡುತ್ತಿದ್ದರು. ಆಡೋಕೆ ಈಗಿನ್ನೂ ಬರುತ್ತಿದ್ದೆ. ಅಲ್ಲಿಗೆ ಅಡ್ಡಗಾಲು ಹಾಕಿದರು’ ಎಂದು ಚೈತ್ರಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.