ಮಗನ ಸೋಲು ಕುಮಾರಸ್ವಾಮಿಯನ್ನು ಫ್ರಸ್ಟ್ರೇಷನ್​ಗೆ ನೂಕಿದೆ, ಹಾಗಾಗೇ ಸುಳ್ಳು ಆರೋಪಗಳು: ಕೃಷ್ಣ ಭೈರೇಗೌಡ, ಸಚಿವ

ಮಗನ ಸೋಲು ಕುಮಾರಸ್ವಾಮಿಯನ್ನು ಫ್ರಸ್ಟ್ರೇಷನ್​ಗೆ ನೂಕಿದೆ, ಹಾಗಾಗೇ ಸುಳ್ಳು ಆರೋಪಗಳು: ಕೃಷ್ಣ ಭೈರೇಗೌಡ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 08, 2025 | 8:38 PM

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಅಸೆಂಬ್ಲಿ ಚುನಾವಣೆಯಲ್ಲಿ ಕೈ ಬಿಟ್ಟಿದ್ದು ಕೇಂದ್ರ ಸಚಿವನಿಗೆ ಸಹಜವಾಗೇ ಕೋಪ ತರಿಸಿದೆ, ಆದರೆ ತಮ್ಮ ಕೋಪ ಮತ್ತು ಫ್ರಸ್ಟ್ರೇಷನ್ ಬಿಜೆಪಿ ಮೇಲೆ ತೀರಿಸಿಕೊಳ್ಳಲಾಗಲ್ಲ, ಹಾಗಾಗೇ ಅವರು ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಭೈರೇಗೌಡ ಹೇಳಿದರು.

ಚಿಕ್ಕಬಳ್ಳಾಪುರ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಪುನಃ ಶುರುವಾಗಿದೆ. ಇವತ್ತು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಭೈರೇಗೌಡ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಗನ ಸೋಲಿನ ನಂತರ ಕುಮಾರಸ್ವಾಮಿ ಫ್ರಸ್ಟೇಟ್ ಆಗಿದ್ದಾರೆ, ಅವರಿಗೆ ಬಿಜೆಪಿಯರಿಂದಲೇ ಮೋಸವಾಗಿದೆ, ಯಾಕೆಂದರೆ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧಿಸಿ ಕುಮಾರಸ್ವಾಮಿ ಗಳಿಸದ ವೋಟುಗಳಿಗಿಂತ 12 ಸಾವಿರ ಮತಗಳನ್ನು ಅವರ ಮಗ ಕಮ್ಮಿ ಪಡೆದಿದ್ದಾರೆ. ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿಯಿಂದ ಮೋಸವಾಗಿರೋದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Assembly Session: ವಿಜಯೇಂದ್ರ ಸ್ಪಷ್ಟೀಕರಣ ನೀಡುವಾಗ ಸಿಎಂ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ರೊಚ್ಚಿಗೆದ್ದ ಕೃಷ್ಣ ಭೈರೇಗೌಡ

Published on: Jan 08, 2025 06:46 PM