Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ವಿಜಯೇಂದ್ರ ಸ್ಪಷ್ಟೀಕರಣ ನೀಡುವಾಗ ಸಿಎಂ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ರೊಚ್ಚಿಗೆದ್ದ ಕೃಷ್ಣ ಭೈರೇಗೌಡ

Karnataka Assembly Session: ವಿಜಯೇಂದ್ರ ಸ್ಪಷ್ಟೀಕರಣ ನೀಡುವಾಗ ಸಿಎಂ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ರೊಚ್ಚಿಗೆದ್ದ ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 16, 2024 | 12:56 PM

Karnataka Assembly Session: ವಿಜಯೇಂದ್ರ ಅವರು ಮುಖ್ಯಮಂತ್ರಿಯವರ ಪ್ರಸ್ತಾಪ ಮಾಡಿದಾಗ ರೊಚ್ಚಿಗೆದ್ದ ಕೃಷ್ಣ ಭೈರೇಗೌಡ ಅವರು, ವಿಷಯಾಂತರ ಮಾಡುವ ಪ್ರಯತ್ನವನ್ನು ವಿಜಯೇಂದ್ರ ಮಾಡುತ್ತಿದ್ದಾರೆ, ವಿಷಯ ಅವರ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಿದ್ದು, ಮುಖ್ಯಮಂತ್ರಿಯವರನ್ನು ಎಳೆತರುವ ಅವಶ್ಯಕತೆಯಿಲ್ಲ ಎನ್ನುತ್ತಾರೆ. ಅವರಿಬ್ಬರ ನಡುವೆ ವಾಗ್ವಾದ ಜೋರು ಹಿಡಿದಾಗ ಸ್ಪೀಕರ್ ಯುಟಿ ಖಾದರ್ ಸಮಾಧಾನಪಡಿಸುವ ವ್ಯರ್ಥಪ್ರಯತ್ನ ಮಾಡುತ್ತಾರೆ.

ಬೆಳಗಾವಿ: ವಿಧಾನಸಭಾ ಅಧಿವೇಶನದಲ್ಲಿ ಇಂದು ಬಿವೈ ವಿಜಯೇಂದ್ರ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ನಡುವೆ ತೀವ್ರ ಸ್ವರೂಪದ ವಾಗ್ವಾದ ನಡೆಯಿತು. ತನ್ನ ಮೇಲಿನ ₹ 150 ಕೋಟಿ ಆಮಿಷ ಆರೋಪಕ್ಕೆ ಸಂಂಧಿಸಿದಂತೆ ಸ್ಪಷ್ಟೀಕರಣ ನೀಡಲು ಎದ್ದುನಿಂತ ವಿಜಯೇಂದ್ರ, ಮುಖ್ಯಮಂತ್ರಿಯವರು ರವಿವಾರದಂದು ತನ್ನ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ, ಹಾಗಂತ ತನಗೆ ಅವರ ಮೇಲೆ ಆಕ್ರೋಷವಿಲ್ಲ, ಬದಲಿಗೆ ಅನುಕಂಪ ಹುಟ್ಟುತ್ತಿದೆ, ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಮುಖ್ಯಮಂತ್ರಿಯವರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಬೇರೆಯವರು ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಧಾನಸಭೆಯಲ್ಲಿ ವಿಜಯೇಂದ್ರ ಆಗ್ರಹ