AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ವೃತ್ತಿಜೀವನಕ್ಕೆ ‘ಪುಷ್ಪ 2’ ಸಿನಿಮಾ ಅತಿ ದೊಡ್ಡ ಸಕ್ಸಸ್ ನೀಡಿದೆ. ಬಿಡುಗಡೆ ಆಗಿ ತಿಂಗಳು ಕಳೆದಿದ್ದರೂ ಈ ಸಿನಿಮಾದ ಹವಾ ನಿಂತಿಲ್ಲ. ವಿವಾದಗಳ ನಡುವೆಯೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಹೊಸ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಈ ಚಿತ್ರತಂಡ ಇನ್ನೊಂದು ನ್ಯೂಸ್ ಹಂಚಿಕೊಂಡಿದೆ.

2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ
ಅಲ್ಲು ಅರ್ಜುನ್
ಮದನ್​ ಕುಮಾರ್​
|

Updated on:Jan 12, 2025 | 10:09 PM

Share

ಸುಕುಮಾರ್​ ನಿರ್ದೇಶನ ಮಾಡಿದ ‘ಪುಷ್ಪ 2’ ಸಿನಿಮಾ ಈಗಾಗಲೇ ವಿಶ್ವಾದ್ಯಂತ 1830 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಹಲವು ಸಿನಿಮಾಗಳ ದಾಖಲೆಯನ್ನು ‘ಪುಷ್ಪ 2’ ಅಳಿಸಿ ಹಾಕಿದೆ. ಈಗ ಈ ಚಿತ್ರ 2000 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ಈ ಮೈಲುಗಲ್ಲು ತಲುಪಿದರೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಹಿರಿಹಿರಿ ಹಿಗ್ಗಲಿದ್ದಾರೆ. 2000 ಕೋಟಿ ರೂ. ಟಾರ್ಗೆಟ್​ ರೀಚ್​ ಆಗುವುದು ತುಸು ಕಷ್ಟ. ಆದರೂ ಕೂಡ ಚಿತ್ರತಂಡದಿಂದ ಹೊಸ ಪ್ರಯತ್ನ ಮಾಡಲಾಗುತ್ತಿದೆ.

ಜನವರಿ 11ರಂದು ನಿರ್ದೇಶಕ ಸುಕುಮಾರ್​ ಅವರ ಹುಟ್ಟುಹಬ್ಬ. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ. ‘ಪುಷ್ಪ 2’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡ ಕಾರಣ ಈ ವರ್ಷದ ಬರ್ತ್​ಡೇ ಸುಕುಮಾರ್ ಪಾಲಿಗೆ ತುಂಬ ಸ್ಪೆಷಲ್. ಅವರ ಜನ್ಮದಿನದ ಪ್ರಯುಕ್ತ ‘ಪುಷ್ಪ 2’ ತಂಡದಿಂದ ಹೊಸದೊಂದು ಪ್ರೋಮೋ ರಿಲೀಸ್ ಮಾಡಲಿದೆ. ಈ ಮೊದಲು ಚಿತ್ರದಲ್ಲಿ ನೋಡಿರದ ದೃಶ್ಯ ಈ ಪ್ರೋಮೋದಲ್ಲಿದೆ.

ಈಗಾಗಲೇ ‘ಪುಷ್ಪ 2’ ಸಿನಿಮಾದ ಅವಧಿ 3 ಗಂಟೆ 20 ನಿಮಿಷ ಇದೆ. ಅದಕ್ಕೆ ಇನ್ನೂ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.11ರಿಂದಲೇ ಈ ರೀಲೋಡೆಡ್ ವರ್ಷನ್​ ಪ್ರದರ್ಶನ ಆರಂಭ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಜನವರಿ 17ರಿಂದ ಹೆಚ್ಚುವರಿ 20 ನಿಮಿಷಗಳ ಫೂಟೇಜ್​ ಇರುವ ‘ಪುಷ್ಪ 2’ ಸಿನಿಮಾ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ: ‘ಪುಷ್ಪ 2’ ಗೆದ್ದರೂ ಸಂಭ್ರಮವಿಲ್ಲ; ಇದು ಅಲ್ಲು ಅರ್ಜುನ್ ಪರಿಸ್ಥಿತಿ

ರೀಲೋಡೆಡ್ ವರ್ಷನ್​ ನೋಡಲು ಪ್ರೇಕ್ಷಕರು ಮತ್ತೆ ಚಿತ್ರಮಂದಿರಕ್ಕೆ ಬಂದರೆ ಸಿನಿಮಾದ ಕಲೆಕ್ಷನ್ ಹೆಚ್ಚಾಗಲಿದೆ. ಅದರಿಂದ 2000 ಕೋಟಿ ರೂಪಾಯಿ ತಲುಪಬಹುದು ಎಂಬ ನಿರೀಕ್ಷೆ ಕೂಡ ಕೆಲವರಿಗೆ ಇದೆ. ಒಂದು ವೇಳೆ ಅಭಿಮಾನಿಯ ನಿಧನ ಸಂಭವಿಸಿದೇ ಇದ್ದಿದ್ದರೆ ಅಲ್ಲು ಅರ್ಜುನ್ ಅವರು ಹೆಚ್ಚಿನ ಪ್ರಚಾರದಲ್ಲಿ ಭಾಗಿ ಆಗಿರುತ್ತಿದ್ದರು. ಆಗ ಖಂಡಿತವಾಗಿಯೂ ಕಲೆಕ್ಷನ್​ ಹೆಚ್ಚಾಗುತ್ತಿತ್ತು. ಆದರೆ ಬಂಧನ, ಜಾಮೀನು, ಬಿಡುಗಡೆ ಎಂಬಿತ್ಯಾದಿ ವಿವಾದಗಳಿಂದಾಗಿ ಅವರು ಮೌನವಾಗಿ ಉಳಿಯುವಂತೆ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:12 pm, Sun, 12 January 25

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು