ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ
ಹನುಮಂತನಿಗೆ ಭವ್ಯಾ ಗೌಡ ಹೊಡೆದಿದ್ದರು. ಆದರೂ ಕೂಡ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಿರಲಿಲ್ಲ. ಬಿಗ್ ಬಾಸ್ ಸುಮ್ಮನೆ ಬಿಟ್ಟರೂ ಕೂಡ ಕಿಚ್ಚ ಸುದೀಪ್ ಅವರು ಸುಮ್ಮನೆ ಇರಲಿಲ್ಲ. ಭವ್ಯಾ ಮಾಡಿದ ತಪ್ಪನ್ನು ಸುದೀಪ್ ಖಂಡಿಸಿದರು. ಇನ್ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಅವರು ಭವ್ಯಾಗೆ ಶಿಕ್ಷೆ ನೀಡಿದರು.
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸಲೇ ಬೇಕು. ಆದರೆ ಕೆಲವೊಮ್ಮೆ ಸ್ಪರ್ಧಿಗಳು ನಿಯಮ ಮುರಿಯುತ್ತಾರೆ. ಅಂಥವರಿಗೆ ಬಿಗ್ ಬಾಸ್ ಶಿಕ್ಷೆ ನೀಡುತ್ತಾರೆ. ಹಾಗಿದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಬಿಗ್ ಬಾಸ್ ಕೂಡ ಎಡವಿದ ಉದಾಹರಣೆ ಇದೆ. ಬಿಗ್ ಬಾಸ್ ತಪ್ಪು ಮಾಡಿದರೂ ಕಿಚ್ಚ ಸುದೀಪ್ ಅದನ್ನು ಸಹಿಸುವುದಿಲ್ಲ. ಅದಕ್ಕೆ ಸಾಕ್ಷಿ ಈ ವಾರದ ಘಟನೆ. ಹನುಮಂತನ ಮೇಲೆ ಭವ್ಯಾ ಗೌಡ ಕೈ ಮಾಡಿದ್ದರು. ಆದರೂ ಕೂಡ ಅವರಿಗೆ ಶಿಕ್ಷೆ ನೀಡಿರಲಿಲ್ಲ. ಆದರೆ ಸುದೀಪ್ ಅವರು ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನ ಮೂಲ ನಿಯಮದ ಪ್ರಕಾರ, ಯಾರೂ ಕೂಡ ಇನ್ನೊಬ್ಬರ ಮೇಲೆ ಕೈ ಮಾಡುವಂತಿಲ್ಲ. ಈ ಮೊದಲು ಕೂಡ ಕೈ ಮಾಡಿದ ಸ್ಪರ್ಧಿಗಳನ್ನು ಮುಲಾಜಿಲ್ಲದೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಆದರೆ ಈ ವಾರ ಭವ್ಯಾ ಗೌಡ ಅವರು ಹನುಮಂತನಿಗೆ ಅಕ್ಷರಶಃ ಹೊಡೆದರು! ಆದರೂ ಸಹ ಭವ್ಯಾಗೆ ಶಿಕ್ಷೆ ಆಗಲಿಲ್ಲ. ಭವ್ಯಾ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಒಂದು ಕಾರಣ ಕೂಡ ಇತ್ತು.
ಭವ್ಯಾ ಅವರು ಹನುಮಂತನಿಗೆ ಹೊಡೆದಿದ್ದು ಟಾಸ್ಕ್ ನಡೆಯುವ ಮಧ್ಯೆದಲ್ಲಿ. ಹಾಗಾಗಿ ಅದನ್ನು ಟಾಸ್ಕ್ನ ಒಂದು ಭಾಗ ಎಂಬಂತೆ ಬಿಗ್ ಬಾಸ್ ಪರಿಗಣಿಸಿರಬಹಿದು. ಇಲ್ಲದೇ ಇದ್ದಿದ್ದರೆ ಭವ್ಯಾ ಅವರನ್ನು ದೊಡ್ಮನೆಯಿಂದ ಆ ಕೂಡಲೇ ಹೊರಗೆ ಕಳಿಸಿಬೇಕಿತ್ತು. ಏನೇ ಆದರೂ ಭವ್ಯಾ ಕೈ ಮಾಡಿದ್ದು ಸುದೀಪ್ ಅವರಿಗೆ ಸರಿ ಎನಿಸಲಿಲ್ಲ. ಆದ್ದರಿಂದ ಈ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಶಿಕ್ಷೆ ನೀಡಿದರು.
ಇದನ್ನೂ ಓದಿ: ಹನುಮಂತನ ಕೈಯಲ್ಲೇ ಇದೆಯಾ ‘ಬಿಗ್ ಬಾಸ್ ಕನ್ನಡ 11’ ಟ್ರೋಫಿ?
ಸುದೀಪ್ ಅವರು ಭವ್ಯಾಗೆ ಜೈಲು ಶಿಕ್ಷೆ ನೀಡಿದರು. ಕಳಪೆ ಬಟ್ಟೆ ಧರಿಸಿ ಅವರು ಜೈಲಿಗೆ ಹೋದರು. 24 ಗಂಟೆಗಳ ಕಾಲ ಅವರು ಜೈಲಿನಲ್ಲೇ ಕಳೆಯಬೇಕಾಯಿತು. ‘ನನಗೆ ವಿಷಾದ ಇಲ್ಲ. ಯಾಕೆಂದರೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ’ ಎಂದು ಭವ್ಯಾ ಗೌಡ ಹೇಳಿದರು. ವಿಶೇಷ ಏನೆಂದರೆ, ಭಾನುವಾರದ (ಜನವರಿ 12) ಸಂಚಿಕೆಯಲ್ಲಿ ಭವ್ಯಾ ಗೌಡ ಅವರು ಕಳಪೆ ಬಟ್ಟೆ ಧರಿಸಿಯೇ ಭಾಗವಹಿಸಿದರು. ಈ ರೀತಿ ಆಗಿದ್ದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ‘ಇನ್ಮುಂದೆ ಟಾಸ್ಕ್ ಸಂದರ್ಭದಲ್ಲಿ ಕೂಡ ಯಾರಾದರೂ ಕೈ ಮಾಡಿದರೆ ಅವರನ್ನು ಮನೆಯಿಂದ ಹೊರಗೆ ಕಳಿಸಲೇಬೇಕು’ ಎಂದು ಸುದೀಪ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.