ಅರಗಿಸಿಕೊಳ್ಳಲಾಗದ ಸತ್ಯ ಹೇಳಿದ ರಜತ್; ಶಾಕ್​ಗೆ ಒಳಗಾದ ಭವ್ಯಾ ಮಾಡಿದ್ದೇನು?

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ಶೈಲಿಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಜತ್ ಅವರು ಭವ್ಯಾ ಅವರೊಂದಿಗೆ ಮಾತನಾಡಿ, ಅವರ ಆಕ್ರಮಣಕಾರಿ ನಡವಳಿಕೆ ಮತ್ತು ಮೋಸದ ಆಟದ ಬಗ್ಗೆ ಎಚ್ಚರಿಸಿದ್ದಾರೆ. ರಜತ್ ಅವರ ಸಲಹೆಯು ಭವ್ಯಾ ಅವರನ್ನು ತಮ್ಮ ತಪ್ಪುಗಳನ್ನು ಅರಿತುಕೊಳ್ಳಲು ಮತ್ತು ಆಟದಲ್ಲಿ ಬದಲಾವಣೆ ತರಲು ಪ್ರೇರೇಪಿಸಿದೆ.

ಅರಗಿಸಿಕೊಳ್ಳಲಾಗದ ಸತ್ಯ ಹೇಳಿದ ರಜತ್; ಶಾಕ್​ಗೆ ಒಳಗಾದ ಭವ್ಯಾ ಮಾಡಿದ್ದೇನು?
ರಜತ್-ಭವ್ಯಾ
Follow us
ರಾಜೇಶ್ ದುಗ್ಗುಮನೆ
|

Updated on: Jan 13, 2025 | 6:55 AM

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ಸಾಕಷ್ಟು ಹಿನ್ನಡೆ ಅನುಭವಿಸಿದ್ದಾರೆ. ಈ ಮೊದಲು ಅವರು ಮೋಸ ಮಾಡಿ ಗೆದ್ದು ಎಲ್ಲರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಸುದೀಪ್ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಹನುಮಂತ ಅವರಿಗೆ ಹೊಡೆದು ಜೈಲು ಸೇರಿದ್ದಾರೆ. ಇದರಿಂದ ಅವರಿಗೆ ಸಾಕಷ್ಟು ಚಿಂತೆ ಶುರುವಾಗಿದೆ. ಆಟದಲ್ಲಿ ಎಲ್ಲಿ ಎಡವುತ್ತಿದ್ದೇನೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಆ ಸಂದರ್ಭದಲ್ಲಿ ಬಂದ ರಜತ್ ಅವರು ಭವ್ಯಾಗೆ ಕಿವಿ ಮಾತನ್ನು ಹೇಳಿದ್ದಾರೆ.

ರಜತ್ ಏನೇ ವಿಚಾರ ಇದ್ದರೂ ನೇರವಾಗಿ ಹೇಳುತ್ತಾರೆ. ಭವ್ಯಾ ವಿಚಾರದಲ್ಲಿಯೂ ಹಾಗೆಯೇ ಮಾಡಿದ್ದಾರೆ. ‘ನಾನು ನಿನ್ನ ತಪ್ಪನ್ನು ಹೇಳಲಾ? ತಡೆದುಕೊಳ್ಳುತ್ತೀಯಾ? ನಿನ್ನಲ್ಲಿ ಆಟ ಆಡೋ ಛಲ ಇದೆ. ಅದರ ಜೊತೆಗೆ ಮೋಸ ಮಾಡಿಯಾದರೂ ಸರಿ ಗೆಲ್ಲಬೇಕು ಎಂದಿದೆ. ಇದು ಒಂದು ಸಲ ಅಲ್ಲ, ಹಲವು ಬಾರಿ ನೋಡಿದ್ದೇನೆ. ಹೀಟ್ ಆಫ್ ಮೂಮೆಂಟ್​ಗೆ ಹಾಗಾಯಿತು ಎಂದು ಹೇಳುತ್ತೀಯಾ. ಆದರೆ, ಹಾಗಲ್ಲ. ಇದು ನಿನ್ನ ಆಯ್ಕೆ. ಇದೇ ಸತ್ಯ’ ಎಂದರು ರಜತ್.

‘ನೀನು ಬದಲಾಗಬೇಕು. ಆಟದ ರಭಸದಲ್ಲಿ ಒಂದು ಬಾರಿ ಆದರೆ ಸರಿ ಎನ್ನಬಹುದು. ಆದರೆ, ಹಲವು ಬಾರಿ ಹೀಗೆ ಮಾಡಿದ್ದೀಯಾ. ತ್ರಿವಿಕ್ರಂ ಜೊತೆ ಮಾತನಾಡುವಾಗ ಹೇಗೆ ಮಾತನಾಡುತ್ತೀಯಾ ಹಾಗೂ ಉಳಿದವರ ಜೊತೆ ಹೇಗೆ ಮಾತನಾಡುತ್ತೀಯಾ ಅನ್ನೋದು ನನಗೆ ಗೊತ್ತು’ ಎಂದರು ರಜತ್. ಆಗ ಭವ್ಯಾ ಕಣ್ಣೀರು ಹಾಕಲು ಆರಂಭಿಸಿದರು. ಉಳಿದವರ ಜೊತೆ ರಫ್ ಆ್ಯಂಡ್ ಟಫ್ ಆಗಿ ನಡೆದುಕೊಳ್ಳುವ ಭವ್ಯಾ ಅವರು ತ್ರಿವಿಕ್ರಂ ಜೊತೆ ಡಲ್ ಆಗಿರುತ್ತಾರೆ.

ಇದನ್ನೂ ಓದಿ: ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ; ಮುಖವಾಡ ಕಳಚಿದ ಮೇಲೆ ಬಂತು ನಿಜವಾದ ಮಾತು

‘3 ವಾರದಿಂದ ನಾನು ನಾನಾಗಿಲ್ಲ. ಏನು ಮಿಸ್ಟೇಕ್ ಮಾಡ್ತಾ ಇದೀನಿ ಅನ್ನೋದು ಗೊತ್ತಾಗುತ್ತಿಲ್ಲ’ ಎಂದು ಮರುಗಿದರು ಭವ್ಯಾ.. ‘ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತಾ ಹೋಗಬೇಕು. ಬಿಗ್ ಬಾಸ್ ಅಷ್ಟೇ ಜೀವನ ಅಲ್ಲ. ಅದರ ಹೊರಗೂ ಜೀವನ ಇದೆ. ನಿನಗೆ ಎಲ್ಲಿಯೂ ಹೆಚ್ಚು ಸಮಯ ಸಿಗಲ್ಲ’ ಎಂದರು ರಜತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.