AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವ್ಯಾ-ತ್ರಿವಿಕ್ರಮ್ ನಡುವೆ ಪ್ರೀತಿ-ಪ್ರೇಮ-ಪ್ರಣಯ: ಸುದೀಪ್ ಹಾಗೆ ಅಂದಿದ್ದು ಯಾಕೆ?

Bigg Boss Kannada: ಬಿಗ್​ಬಾಸ್ ಕನ್ನಡದ ಪ್ರತಿ ಸೀಸನ್ ನಲ್ಲೂ ಕನಿಷ್ಟ ಒಂದು ‘ಜೋಡಿ’ ಖಾಯಂ ಆಗಿ ಇರುತ್ತದೆ. ಈ ಸೀಸನ್​ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರ ಎಂಬಂತೆ ಅಂಟಿಕೊಂಟೇ ಇದ್ದಾರೆ. ಇದೀಗ ಈ ಇಬ್ಬರ ನಡುವೆ ಪ್ರೀತಿ-ಪ್ರೇಮ ಶುರುವಾಗಿದೆಯೇ ಎಂಬ ಅನುಮಾನ ವೀಕ್ಷಕರಿಗೆ ಶುರುವಾಗಿದೆ. ಇದಕ್ಕೆ ಕಾರಣ ಅವರು ಪರಸ್ಪರ ಗುಟ್ಟಾಗಿ ಆಡಿರುವ ಮಾತುಗಳು.

ಭವ್ಯಾ-ತ್ರಿವಿಕ್ರಮ್ ನಡುವೆ ಪ್ರೀತಿ-ಪ್ರೇಮ-ಪ್ರಣಯ: ಸುದೀಪ್ ಹಾಗೆ ಅಂದಿದ್ದು ಯಾಕೆ?
Trivikram Bhavya Gowda
ಮಂಜುನಾಥ ಸಿ.
|

Updated on: Jan 12, 2025 | 9:42 AM

Share

ಪ್ರತಿ ಬಿಗ್​ಬಾಸ್ ಸೀಸನ್​ನಲ್ಲೂ ಒಂದು ‘ಜೋಡಿ’ ಖಾಯಂ. ಕೆಲವು ಜೋಡಿಗಳು ಪ್ರೀತಿಸಿ ಹೊರಗೆ ಹೋಗಿ ಮದುವೆ ಆಗಿದ್ದೂ ಇದೆ. ಕೆಲವರು ಮದುವೆ ಆಗುವ ತಯಾರಿಯಲ್ಲಿದ್ದಾರೆ. ಆದರೆ ಪ್ರತಿ ಬಿಗ್​ಬಾಸ್​ ನಲ್ಲೂ ಒಂದೆರಡು ಜೋಡಿಗಳಾದರೂ ಇದ್ದೇ ಇರುವುದು ಪಕ್ಕಾ. ಈ ಸೀಸನ್​ನಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಡುವೆ ಇಂಥಹದ್ದೊಂದು ಕೆಮಿಸ್ಟ್ರಿ ಮೊದಲಿನಿಂದಲೂ ಕಾಣುತ್ತಿದೆ. ಭವ್ಯಾ ಮತ್ತು ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರು ಎಂಬಂತೆ ಅಂಟಿಕೊಂಡೇ ಆಟ ಆಡುತ್ತಿದ್ದಾರೆ. ಈಗ ತಮ್ಮ ಸ್ನೇಹವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಸೂಚನೆಯನ್ನು ಬಿಗ್​ಬಾಸ್​ನಲ್ಲೇ ನೀಡಿದ್ದಾರೆ.

ಶನಿವಾರದ ಎಪಿಸೋಡ್ ಪ್ರಸಾರವಾದಾಗ ಸುದೀಪ್ ಆಗಮಿಸುವ ಮೊದಲು ಹಿಂದಿನ ನಡೆದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಈ ಸಂದರ್ಭದಲ್ಲಿ ಎಲ್ಲರೂ ಮಲಗಿದ ಮೇಲೆ ತ್ರಿವಿಕ್ರಮ್ ಮತ್ತು ಭವ್ಯಾ ಅವರು ಮೂಲೆಯಲ್ಲಿ ಕೂತು ಏನೋ ವಿಷಯ ಮಾತನಾಡುತ್ತಿದ್ದರು. ಮೊದಲಿಗೆ ಅದು ಏನೆಂದು ವೀಕ್ಷಕರಿಗೆ ಗೊತ್ತಾಗಿರಲಿಲ್ಲವಾದರೂ ಅವರ ಮಾತುಕತೆ ಮುಂದುವರೆದಂತೆ ಅರ್ಥವಾಗಿದ್ದು, ಇಬ್ಬರೂ ಪ್ರೀತಿಯ ವಿಷಯ ಚರ್ಚಿಸುತ್ತಾರೆ ಎಂಬುದು.

ತ್ರಿವಿಕ್ರಮ್, ಭವ್ಯಾ ಕುರಿತು, ‘ನೀನು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ’ ಎನ್ನುತ್ತಾರೆ. ಅದಕ್ಕೆ ಭವ್ಯಾ ಖುಷಿಯಿಂದ ಕೊಡುತ್ತೇನೆ, ಸ್ವಲ್ಪ ದಿನ ಕಾಯಿ ಎನ್ನುತ್ತಾರೆ. ‘ನೀನು ಆಡುತ್ತಿರುವ ರೀತಿ, ಮಾತನಾಡುತ್ತಿರುವುದು ನೋಡಿದರೆ ನೆಗೆಟಿವ್ ಉತ್ತರ ನೀಡುತ್ತೀಯ ಅನಿಸುತ್ತಿದೆ’ ಎನ್ನುತ್ತಾರೆ ತ್ರಿವಿಕ್ರಮ್. ಅದಕ್ಕೆ ಭವ್ಯಾ ನಗುತ್ತಾ, ‘ಅಯ್ಯೋ ಹಾಗೇನಿಲ್ಲ. ಸ್ವಲ್ಪ ವೇಟ್ ಮಾಡು’ ಎಂದು ನಗುತ್ತಾ ಹೇಳುತ್ತಾರೆ. ಹಾಗೆ ಮಾತು ಮುಂದುವರೆಸಿ, ‘ಸ್ವಲ್ಪ ದಿನ ಆಗಲಿ, ಹೊರಗೆ ಹೋದ ಮೇಲೆ ಹೇಳುತ್ತೀನಿ’ ಎಂದು ಭವ್ಯಾ ಹೇಳುತ್ತಾರೆ. ತ್ರಿವಿಕ್ರಮ್ ಸಹ ಆಡಿ ಗೆದ್ದು ಆ ಮೇಲೆ ನಿನ್ನ ಬಳಿ ಆ ಬಗ್ಗೆ ಮಾತನಾಡುತ್ತೀನಿ’ ಎನ್ನುತ್ತಾರೆ. ಒಟ್ಟಾರೆ ಇಬ್ಬರೂ ಸಹ ಗುಟ್ಟಿನಲ್ಲಿ ಪ್ರೀತಿಯ ವಿಚಾರವನ್ನೇ ಮಾತನಾಡಿದ್ದಾರೆ ಎಂಬುದು ವೀಕ್ಷಕರಿಗೆ ಅರ್ಥವಾಗಿದೆ.

ಇದನ್ನೂ ಓದಿ:ಮತ್ತೆ ಸುದೀಪ್ ಎದುರು ಕಣ್ಣೀರು ಹಾಕಿದ ಭವ್ಯಾ ಗೌಡ

ಅಸಲಿಗೆ ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರ ಮನೆಯವರೂ ಸಹ ಪರಸ್ಪರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು. ಆ ನಂತರ ವೀಕೆಂಡ್​ನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಇನ್ನು ಮುಂದೆ ತಾವು ಪರಸ್ಪರರ ಗೆಳೆತನ ಮುರಿಯುವುದಾಗಿ ಹೇಳಿದ್ದರು. ಆ ನಂತರವೂ ಸಹ ಒಬ್ಬರ ಬಗ್ಗೆ ಇನ್ನೊಬ್ಬರು ಕೆಲ ಚುಚ್ಚು ಮಾತುಗಳನ್ನು ಆಡಿಕೊಂಡಿದ್ದರು. ಆದರೆ ಈಗ ನೋಡಿದರೆ ಪರೋಕ್ಷವಾಗಿ ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲ ಮಾತನಾಡುತ್ತಿದ್ದಾರೆ.

ತ್ರಿವಿಕ್ರಮ್ ಈ ಬಾರಿ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಭವ್ಯಾ ಈ ವಾರ ಸೇಫ್ ಆಗಿದ್ದಾರಾದರೂ ಫಿನಾಲೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಇನ್ನು ಹನುಮಂತ ತ್ರಿವಿಕ್ರಮ್​ಗೆ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಇನ್ನೆರಡು ವಾರದಲ್ಲಿ ವಿನ್ನರ್ ಯಾರು ಎಂಬುದು ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್