ಹನುಮಂತನ ಆ ಗುಣ ನನ್ನಲ್ಲೂ ಇದೆ: ಸುದೀಪ್ ಹೇಳಿದ ಆ ಗುಣ ಯಾವುದು?

Bigg Bosss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಹನುಮಂತುಗೆ ಫಿನಾಲೆ ಟಿಕೆಟ್ ದೊರೆತಿದೆ. ಕಳೆದ ವಾರ ಅತ್ಯುತ್ತಮ ಆಟವಾಡಿದ ಹನುಮಂತು ನೇರವಾಗಿ ಫಿನಾಲೆಗೆ ಹೋಗಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿ, ಹನುಮಂತು ಆಟವನ್ನು ಬಹುವಾಗಿ ಕೊಂಡಾಡಿದರು. ಹನುಮಂತು ಅವರ ಗುಣ ನನ್ನಲ್ಲೂ ಇದೆ ಎಂದರು. ಯಾವುದು ಆ ಗುಣ?

ಹನುಮಂತನ ಆ ಗುಣ ನನ್ನಲ್ಲೂ ಇದೆ: ಸುದೀಪ್ ಹೇಳಿದ ಆ ಗುಣ ಯಾವುದು?
Bigg Boss Kannada
Follow us
ಮಂಜುನಾಥ ಸಿ.
|

Updated on: Jan 12, 2025 | 7:08 AM

ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನೊಂದು ವಾರವೇ ಬಾಕಿ ಇದೆ. ಈ ವಾರ ಮುಗಿಯಿತೆಂದರೆ ಶುರುವಾಗುವುದು ಫಿನಾಲೆ ವಾರ. ಇದೀಗ ಮನೆಯಲ್ಲಿ ಸ್ಪರ್ಧಿಗಳ ನಡುವೆ ಆಟ ಜೋರಾಗಿದೆ. ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದವರಂತೆ ಆಡುತ್ತಿದ್ದಾರೆ. ಕೆಲವರು ಅಚಾನಕ್ಕಾಗಿ ಅದ್ಭುತವಾಗಿ ಆಡಲು ಪ್ರಾರಂಭಿಸಿದ್ದಾರೆ. ಇದೆಲ್ಲದರ ಮಧ್ಯೆ ಕಳೆದ ವಾರ ಅದ್ಭುತವಾಗಿ ಆಡಿದ ಹನುಮಂತುಗೆ ಫಿನಾಲೆ ಟಿಕೆಟ್ ದೊರೆತಿದೆ. ಶನಿವಾರದ ಎಪಿಸೋಡ್ ನಡೆಸಿಕೊಡಲು ಬಂದಿದ್ದ ಸುದೀಪ್, ಹನುಮಂತು ಅವರ ಆಟವನ್ನು ಬಹುವಾಗಿ ಕೊಂಡಾಡಿದರು. ‘ಕರ್ನಾಟಕವೇ ಮೆಚ್ಚುವಂತೆ ಆಡುತ್ತಿದ್ದೀರಿ’ ಎಂದರು.

ಹನುಮಂತನ ಆಟದ ವೈಖರಿಯನ್ನು ಹೊಗಳಿದ ಸುದೀಪ್, ‘ಮನೆಯಲ್ಲಿರುವ ಬೇರೆ ಸ್ಪರ್ಧಿಗಳು ಮಾತ್ರವೇ ಅಲ್ಲದೆ ಹೊರಗೆ ಕೂತು ಕಾರ್ಯಕ್ರಮ ವೀಕ್ಷಿಸುತ್ತಿರುವವರು ಸಹ ನಿಮ್ಮಿಂದ ಕಲಿಯಬೇಕಿದೆ’ ಎಂದರು. ಇತರೆ ಸ್ಪರ್ಧಿಗಳಿಗೆ ಹನುಮಂತನ ಆಟ ಹೇಗನ್ನಿಸಿತು ಎಂಬುದನ್ನು ಸುದೀಪ್ ಕೇಳಿದರು. ಆ ವೇಳೆ ಒಬ್ಬೊಬ್ಬರು ಒಂದೊಂದು ರೀತಿ ಹನುಮಂತನ ಆಟವನ್ನು ವಿಶ್ಲೇಷಿಸಿದರು. ಆದರೆ ಭವ್ಯಾ ಮಾತನಾಡುವಾಗ ಋಣಾತ್ಮಕವಾಗಿ ಹೊಗಳಿದರು. ಹನುಮಂತ ಎಲ್ಲವನ್ನೂ ಬಚ್ಚಿಟ್ಟುಕೊಳ್ಳುತ್ತಾನೆ ಬಹಳ ‘ಸ್ಮಾರ್ಟ್’ (ಕಿಲಾಡಿ) ಎಂದರು.

ಕೂಡಲೇ ಮಾತನಾಡಿದ ಸುದೀಪ್, ಆ ಗುಣ ನನ್ನಲ್ಲೂ ಇದೆ. ನಾನು ಸಹ ಏನೂ ಮಾತನಾಡುವುದಿಲ್ಲ, ಏನನ್ನೂ ಹೇಳುವುದಿಲ್ಲ. ನನಗೆ ಹೇಳಲು ಇಷ್ಟ ಇಲ್ಲ ಎಂದಲ್ಲ. ಹೇಳಿದರೆ ಅವರಿಗೆ ಅರ್ಥ ಆಗುವುದಿಲ್ಲ. ವಿತಂಡ ವಾದ ನನಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಹನುಮಂತನ ಗುಣ ನನ್ನಲ್ಲೂ ಇದೆ, ಹಾಗಿದ್ದರೆ ನಾನೂ ಸಹ ಸ್ಮಾರ್ಟ್​ ಹಾ? ಎಂದು ಪ್ರಶ್ನೆ ಮಾಡಿದರು. ಮುಂದುವರೆದು ಮಾತನಾಡಿದ ಸುದೀಪ್, ಹನುಮಂತನ ಆಟವನ್ನು ವಿಶ್ಲೇಷಣೆ ಮಾಡುತ್ತಾ, ಆತ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ಮುಂದಿರುವ ಗುರಿ ನೋಡುತ್ತಾನೆ ಅದನ್ನು ಆಡಿ ಗೆಲ್ಲುತ್ತಾನೆ ಬೇರೆ ಏನೇನೋ ಲೆಕ್ಕಾಚಾರ ಹಾಕುವುದಿಲ್ಲ, ಓವರ್ ಥಿಂಕಿಂಗ್ ಮಾಡುವುದಿಲ್ಲ ಇದೇ ಅವನ ಗೆಲುವಿನ ಸೂತ್ರ.

ಇದನ್ನೂ ಓದಿ:ಯಾರು ಏನೇ ಅರಚಾಡಲಿ, ನಾನು ಅಖಾಡಕ್ಕೆ ಇಳಿಯುವುದು ಆಗಲೇ: ಸುದೀಪ್

ಅವನಿಗೆ ಟಾಸ್ಕ್ ಗೆಲ್ಲುವುದು ಬಿಟ್ಟರೆ ಬೇರೆಯದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ‘ಎಲ್ಲರೂ ಕಪ್ ಗೆಲ್ಲೋಕೆ ಆಡುತ್ತಿದ್ದಾರೆ ನಾವು ಟಾಸ್ಕ್ ಗೆಲ್ಲೋಣ’ ಎನ್ನುತ್ತಾರೆ ಹನುಮಂತು. ಅವರಷ್ಟು ಸುಲಭವಾಗಿ ಆಟವನ್ನು ತೆಗೆದುಕೊಂಡಿರುವವರನ್ನು ನಾನು ಬಹಳ ಕಡಿಮೆ ನೋಡಿದ್ದೇನೆ. ಯಾರು ಹೀಗೆ ಸಿಂಪಲ್ ಆಗಿ ಆಟವನ್ನು ತೆಗೆದುಕೊಳ್ಳುತ್ತಾರೋ ಅವರೇ ಅಂತಿಮವಾಗಿ ಗೆಲ್ಲುತ್ತಾರೆ. ವಾರಾಂತ್ಯದ ಎಪಿಸೋಡ್​ಗೆ ಎಲ್ಲರೂ ಚೆನ್ನಾಗಿ ಮೇಕಪ್ ಮಾಡಿಕೊಂಡು ಬರುತ್ತಾರೆ, ಈ ವ್ಯಕ್ತಿ ಒಂದು ಶರ್ಟ್, ಪಂಚೆ ತೊಟ್ಟು ಬರುತ್ತಾರೆ ಯಾವುದರ ಬಗ್ಗೆಯೂ ಅತಿಯಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲ ವಾರ ಟಾಸ್ಕ್ ಆಡಲಾಗದೆ ತಲೆಸುತ್ತಿ ಬಿದ್ದು ಹೋಗಿದ್ದರು, ಈಗ ಕರ್ನಾಟಕವೇ ಮೆಚ್ಚುವಂತೆ ಆಡುತ್ತಿದ್ದಾರೆ’ ಎಂದರು ಸುದೀಪ್.

ಹನುಮಂತು ಮಾತನಾಡಿ, ‘ನಾನೇನು ಗೆಲ್ಲಲೇ ಬೇಕು ಎಂದು ಆಡುವುದಿಲ್ಲ ರೀ, ನನಗೆ ಹೇಗೆ ಬರುತ್ತದೆಯೋ ಹಾಗೆ ಆಡುತ್ತೀನಿ. ಗೆಲ್ಲಲೇ ಬೇಕು ಎಂದು ನಾನು ಆಡಿಯೇ ಇಲ್ಲ. ಟಾಸ್ಕ್ ಗೆಲ್ಲಬೇಕು ಅದಕ್ಕೆ ಏನು ಮಾಡಬೇಕು ಇಷ್ಟೆ ನಾನು ಯೋಚಿಸುವುದು’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್