ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
Bigg Boss Kannada: ಬಿಗ್ಬಾಸ್ ಕನ್ನಡದ ಭಾನುವಾರದ ಎಪಿಸೋಡ್ ಬಂದಿದೆ. ಭಾನುವಾರದ ಎಪಿಸೋಡ್ ಸಾಮಾನ್ಯವಾಗಿ ತಮಾಷೆಯಿಂದ, ಹಾಸ್ಯದಿಂದ ಕೂಡಿರುತ್ತದೆ. ಆದರೆ ಸುದೀಪ್, ಮನೆ ಮಂದಿಗೆ ಶಾಕ್ ನೀಡಿದ್ದಾರೆ. ಶಾಕ್ ಎಂದರೆ ಮಾತಿನ ಶಾಕ್ ಅಥವಾ ನಕಲಿ ಶಾಕ್ ಅಲ್ಲ ಬದಲಿಗೆ ನಿಜವಾದ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಸುದೀಪ್ರ ಈ ಶಾಕ್ ಟ್ರೀಟ್ಮೆಂಟ್ನಿಂದ ಮನೆಯವರೆಲ್ಲ ಒದ್ದಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಭಾನುವಾರದ ಶಾಕ್ ಎದುರಾಗಲಿದೆ. ಇಂದು (ಜನವರಿ 12) ಒಬ್ಬರು ಅಥವಾ ಇಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಆದರೆ ಆ ಎಲಿಮಿನೇಷನ್ ಶಾಕ್ ನೀಡುವ ಮುಂಚೆ ಕಿಚ್ಚ ಸುದೀಪ್ ಬೇರೆ ರೀತಿಯ ಶಾಕ್ ಅನ್ನು ಮನೆ ಮಂದಿಗೆ ನೀಡಿದ್ದಾರೆ. ಅಂದಹಾಗೆ ಕಿಚ್ಚ ಸುದೀಪ್ ನೀಡಿರುವುದು ನಕಲಿ ಶಾಕ್ ಅಲ್ಲ ಬದಲಿಗೆ ನಿಜವಾದ ಕರೆಂಟ್ ಶಾಕ್. ಸುದೀಪ್, ಎಲ್ಲ ಸ್ಪರ್ಧಿಗಳನ್ನು ಕುರ್ಚಿಯೊಂದರ ಮೇಲೆ ಕೂರಿಸಿ ಅವರ ಕೈಗೆ ವೈಯರ್ನ ಬ್ಯಾಂಡ್ ಕಟ್ಟಿಸಿದ್ದಾರೆ. ಆ ನಂತರ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರ ತಪ್ಪು ಉತ್ತರ ನೀಡುತ್ತಾರೋ ಅವರಿಗೆ ಕರೆಂಟ್ ಶಾಕ್ ಹೊಡೆಯುತ್ತದೆ. ಶಾಕ್ ಹೊಡೆಸಿಕೊಂಡ ಸ್ಪರ್ಧಿಗಳು ಒದ್ದಾಡಿಬಿಟ್ಟಿದ್ದಾರೆ. ಹನುಮಂತನಂತೂ ಓಡಿ ಹೋಗಿ ಬಚ್ಚಿಟ್ಟಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 12, 2025 10:24 AM
Latest Videos