ರಶ್ಮಿಕಾ ಮಂದಣ್ಣ ಹೀರೋ ಜೊತೆ ತೆಲುಗು ಸಿನಿಮಾ ಘೋಷಿಸಿದ ಸಪ್ತಮಿ ಗೌಡ
ಸಪ್ತಮಿ ಗೌಡ ಅವರು ತೆಲುಗು ಚಿತ್ರರಂಗಕ್ಕೆ 'ತಮ್ಮುಡು' ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ 'ಕಾಂತಾರ'ದ ಲೀಲಾ ಪಾತ್ರವನ್ನು ನೆನಪಿಸುತ್ತದೆ. ದಿಲ್ ರಾಜು ನಿರ್ಮಿಸುತ್ತಿರುವ ಈ ಚಿತ್ರ ಜುಲೈ 4ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಯಶಸ್ಸು ಸಪ್ತಮಿ ಅವರ ತೆಲುಗು ಚಿತ್ರರಂಗದ ಭವಿಷ್ಯವನ್ನು ನಿರ್ಧರಿಸಲಿದೆ.

ನಟಿ ಸಪ್ತಮಿ ಗೌಡ (Sapthami Gowda) ಅವರು ‘ಕಾಂತಾರ’ ಬಳಿಕ ದೊಡ್ಡ ಮಟ್ಟದ ಹಿಟ್ ಪಡೆದರು. ಆದರೆ, ಆ ಬಳಿಕ ಅವರು ಬಂದ ಆಫರ್ಗಳೆಲ್ಲವನ್ನೂ ಒಪ್ಪಿಲ್ಲ. ಬದಲಿಗೆ ತಾಳ್ಮೆ ತೆಗೆದುಕೊಂಡು ತಮಗೆ ಸರಿ ಹೊಂದುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸಲು ಆರಂಭಿಸಿದರು. ಅವರು ಅಭಿನಯಿಸಿದ್ದು ಕಡಿಮೆ ಸಿನಿಮಾಗಳಾದರೂ ಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಈಗ ಅವರು ತೆಲುಗಿಗೆ ಹಾರಲು ರೆಡಿ ಆಗಿದ್ದಾರೆ. ಈ ಸಿನಿಮಾದ ಪಾತ್ರವರ್ಗ ಪರಿಚಯಿಸೋ ಟೀಸರ್ ಕೂಡ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಹೀರೋ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈ ಮೊದಲು ಟಾಲಿವುಡ್ ಹೀರೋ ನಿತೀನ್ ಜೊತೆ ‘ಭೀಷ್ಮ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಈ ಚಿತ್ರ ಹಿಟ್ ಆಗಿತ್ತು. ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈಗ ನಿತೀನ್ ಅವರು ‘ತಮ್ಮುಡು’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಪ್ತಮಿ ನಾಯಕಿ ಅನ್ನೋದು ವಿಶೇಷ. ಈ ಚಿತ್ರವನ್ನು ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಅಡಿಯಲ್ಲಿ ದಿಲ್ ರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನ ಮಾಡುತ್ತಿದ್ದಾರೆ. ‘ಮೂಡ್ ಆಫ್ ತಮ್ಮುಡು’ ಹೆಸರಿನ ವಿಡಿಯೋ ರಿಲೀಸ್ ಆಗಿದ್ದು, ವಿವಿಧ ಪಾತ್ರಗಳ ಪರಿಚಯ ಆಗಿದೆ.
View this post on Instagram
ಈ ಚಿತ್ರದಲ್ಲಿ ನಿತೀನ್, ಲಯಾ, ಸಪ್ತಮಿ ಗೌಡ, ಶ್ವಾಸಿಕ್ ವಿಜಯ್, ಸೌರಭ್ ಸಚ್ದೇವ್, ವರ್ಷಾ ಬೊಲ್ಲಮ್ಮ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರದ ಗ್ಲಿಂಪ್ಸ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಲಯಾ ಅವರು ನಿತೀನ್ ಸಹೋದರಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ದಿಲ್ ರಾಜು ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಸಪ್ತಮಿ ಗೌಡ ಅವರು ‘ಕಾಂತಾರ’ ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದರು. ಸೀರೆ ಉಟ್ಟು ಗಮನ ಸೆಳೆದಿದ್ದರು. ಈಗ ಅವರಿಗೆ ಸಿಕ್ಕಿರೋ ಪಾತ್ರವು ಮತ್ತೆ ‘ಕಾಂತಾರ’ ಚಿತ್ರದಲ್ಲಿ ಅವರು ಮಾಡಿದ್ದ ಲೀಲಾ ಹೆಸರಿನ ಪಾತ್ರವನ್ನು ನೆನಪಿಸುತ್ತದೆ. ಈ ಚಿತ್ರಕ್ಕೆ ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ ಅನ್ನೋದು ವಿಶೇಷ. ಈ ಸಿನಿಮಾ ಜುಲೈ 4ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಹಿಟ್ ಆದರೆ, ಸಪ್ತಮಿ ಗೌಡ ಅವರಿಗೆ ಟಾಲಿವುಡ್ನಲ್ಲಿ ಹೆಚ್ಚು ಆಫರ್ಗಳು ಬರಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Wed, 14 May 25








