ಮಾಧುರಿ ದೀಕ್ಷಿತ್ನ ಮದುವೆ ಆದ ಡಾಕ್ಟರ್ಗೆ ಎದುರಾದ ಸಮಸ್ಯೆ ಒಂದೆರಡಲ್ಲ
ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೇನೆ ಅವರು ತಮ್ಮ ಜೀವನದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ಸ್ಟಾರ್ ಅನ್ನು ಮದುವೆಯಾಗುವುದರಲ್ಲಿನ ಕಷ್ಟಗಳನ್ನು ಅವರು ವಿವರಿಸಿದ್ದಾರೆ. ತಮ್ಮ ವೈಯಕ್ತಿಕ ಗುರುತಿನ ಹೋರಾಟ ಮತ್ತು ಸಾರ್ವಜನಿಕ ಜೀವನದ ಒತ್ತಡಗಳನ್ನು ಅವರು ಎತ್ತಿ ತೋರಿಸಿದ್ದಾರೆ.

ಒಂದು ಕಾಲದಲ್ಲಿ ಬೇಡಿಕೆಯ ನಟಿಯಾಗಿದ್ದವರು ಮಾಧುರಿ ದೀಕ್ಷಿತ್ (Madhuri Dixit). ಅವರನ್ನು ವಿವಾಹ ಆಗಬೇಕು ಎಂದು ಕನಸು ಕಂಡವರು ಅದೆಷ್ಟೋ ಮಂದಿ. ಆದರೆ, ಯಾರಿಗೂ ಇದು ಸಾಧ್ಯ ಆಗಲೇ ಇಲ್ಲ. ಅನೇಕರು ಅವರು ಚಿತ್ರರಂಗದವರನ್ನೇ ವಿವಾಹ ಆಗುತ್ತಾರೆ ಎಂದು ಭಾವಿಸಿದ್ದರು. ಆದರೆ, ವೃತ್ತಿಯಲ್ಲಿ ವೈದ್ಯನಾಗಿರೋ ಶ್ರೀರಾಮ್ ನೆನೆ ಅವರನ್ನು ಮದುವೆ ಆದರು. ಮಾಧುರಿ ದೀಕ್ಷಿತ್ ಅವರ ನಡೆ ಅನೇಕರಿಗೆ ಅಚ್ಚರಿ ಮೂಡಿಸಿತು. ಸೆಲೆಬ್ರಿಟಿ ವಿವಾಹ ಆದ ಬಳಿಕ ಎಷ್ಟು ಕಷ್ಟ ಎಂಬುದನ್ನು ಶ್ರೀರಾಮ್ ಅವರು ಹೇಳಿದ್ದಾರೆ.
ಸಲ್ಮಾನ್ ಖಾನ್ ಕೂಡ ಮಾಧುರಿ ಅವರನ್ನು ವಿವಾಹ ಆಗಲು ಬಯಸಿದ್ದರು. ಇದಕ್ಕೆ ಮಾಧುರಿ ದೀಕ್ಷಿತ್ ತಂದೆ ಒಪ್ಪಿಗೆ ಕೊಡಲಿಲ್ಲ. 1999ರಲ್ಲಿ ಮಾಧುರಿ ಹಾಗೂ ಶ್ರೀರಾಮ್ ಅವರ ವಿವಾಹ ನಡೆಯಿತು. ವಿವಾಹ ಆದ ಬಳಿಕ 10 ವರ್ಷಗಳ ಕಾಲ ಅಮೆರಿಕದಲ್ಲೇ ಇದ್ದರು. ಆ ಬಳಿಕ ಈ ದಂಪತಿ ಭಾರತಕ್ಕೆ ಬಂದರು. ಆ ಬಳಿಕ ಮಾಧುರಿ ಅವರು ಚಿತ್ರರಂಗದಲ್ಲಿ ಮತ್ತೆ ಮುಂದುವರಿದರೆ, ನೆನೆ ಅವರು ಹೆಲ್ತ್ ಇನ್ಫ್ಲುಯೆನ್ಸರ್ ಆಗಿದ್ದಾರೆ. ಅವರು ಆರೋಗ್ಯದ ಬಗ್ಗೆ ಟಿಪ್ಸ್ ನೀಡುತ್ತಾರೆ.
ಮಾಧುರಿ ಅವರನ್ನು ವಿವಾಹ ಆಗಿದ್ದು ಎಷ್ಟು ದೊಡ್ಡ ಚಾಲೆಂಜ್ ಆಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ‘ಮಾಧುರಿ ಅವರಂಥ ಸೆಲೆಬ್ರಿಟಿಯನ್ನು ಮದುವೆ ಆಗೋದು ನಿಜಕ್ಕೂ ಚಾಲೆಂಜಿಂಗ್. ನಾನು ಮೂಲೆಗುಂಪಾದೆ ಎಂದು ಅನಿಸಿದ್ದು ನಿಜ. ನಾನು ವೈಯಕ್ತಿಕವಾಗಿ ಗುರುತಿಸಿಕೊಳ್ಳಬೇಕು ಎಂದು ಯಾವಾಗಲೂ ಅನಿಸುತ್ತದೆ’ ಎಂದಿದ್ದಾರೆ ಅವರು.
‘ಕಿಂಗ್ ಆಥರ್ ಕೋರ್ಟ್ನಲ್ಲಿ ನಾನು ಯಾನ್ಕೀ. ನಾನು ಪ್ರವಾಸಿಗನ ತರ. ನನ್ನ ಪತ್ನಿ ಸಾಕಷ್ಟು ಜನಪ್ರಿಯ ನಟಿ. ನಾನು ಅವರ ಜೊತೆ ಇದ್ದೇನೆ. ನೀವು ವೈಯಕ್ತಿಕವಾಗಿ ಎಷ್ಟು ಸ್ಟ್ರಾಂಗ್ ಎಂಬುದನ್ನು ಎಂದಿಗೂ ಕಡೆಗಣಿಸಬಾರದು’ ಎಂದು ಅವರು ಹೇಳಿಕೊಂಡಿದ್ದಾರೆ.
ವಿಡಿಯೋ ನೋಡಿ: ‘ಸೆನ್ಸೇಷನ್ ಟ್ರೆಂಡ್’ ಫಾಲೋ ಮಾಡಿದ ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್ ಅವರು ಇತ್ತೀಚೆಗೆ ನಟನೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ‘ಭೂಲ್ ಬುಲಯ್ಯ 3’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅವರು ಈಗ ಕುಟುಂಬದ ಬಗ್ಗೆ ಹೆಚ್ಚು ಗಮನ ಹರಿಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







