ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
ಅರಿಜಿತ್ ಸಿಂಗ್, ಭಾರತೀಯ ಸಂಗೀತ ಜಗತ್ತಿನ ಪ್ರಸಿದ್ಧ ಗಾಯಕ. ಅವರನ್ನು ಮದುವೆ ಮತ್ತು ಇತರ ಖಾಸಗಿ ಕಾರ್ಯಕ್ರಮಗಳಿಗೆ ಕರೆಯುವುದು ದುಬಾರಿ. ಅವರ ಸರಳತೆ ಮತ್ತು ಸಂಗೀತ ಪ್ರತಿಭೆಯನ್ನು ಈ ಲೇಖನ ವಿವರಿಸುತ್ತದೆ. ಅವರು ಕನ್ನಡದಲ್ಲಿ ಕೆಲವೇ ಹಾಡುಗಳನ್ನು ಹಾಡಿದ್ದಾರೆ ಎಂಬುದನ್ನು ಕೂಡ ಇಲ್ಲಿ ಉಲ್ಲೇಖಿಸಲಾಗಿದೆ.

ಶ್ರೀಮಂತರು, ರಾಜಕಾರಣಿಗಳು, ಸೆಲೆಬ್ರಿಟಿಗಳು ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಇಷ್ಟಪಡುತ್ತಾರೆ. ಈ ರೀತಿ ಮದುವೆಗಳಲ್ಲಿ ಖ್ಯಾತ ಸೆಲೆಬ್ರಿಟಿಗಳನ್ನು, ಗಾಯಕರನ್ನು ಕರೆಸಿ ಹಾಡಿಸೋ ಹಾಗೂ ಡ್ಯಾನ್ಸ್ ಮಾಡಿಸೋ ಟ್ರೆಂಡ್ ಚಾಲ್ತಿಯಲ್ಲಿರೋದು ಗೊತ್ತೇ ಇದೆ. ಈ ರೀತಿ ಅವರನ್ನು ಕರೆದಾಗ ಅವರು ದೊಡ್ಡ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಅರಿಜಿತ್ ಸಿಂಗ್ (Arijit Singh) ಅವರು ಕೂಡ ವಿವಾಹ ಸಮಾರಂಭಕ್ಕೆ ಹೋಗಿ ಹಾಡುತ್ತಾರೆ. ಆದರೆ, ಅರಿಜಿತ್ ಸಿಂಗ್ ಅವರನ್ನು ಕರೆಸಿ ಹಾಡಿಸೋದು ಜನಸಾಮಾನ್ಯರನ್ನು ಬಿಟ್ಟು ದೊಡ್ಡ ಉದ್ಯಮಿಗಳಿಗೂ ಕೂಡ ಹೊರೆಯೇ ಸರಿ.
ಅರಿಜಿತ್ ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ದೊಡ್ಡ ಹೆಸರು ಮಾಡಿದ್ದಾರೆ. ಅರಿಜಿತ್ ಸಿಂಗ್ ಅವರು ಅನೇಕ ಕಡೆಗಳಲ್ಲಿ ಕಾನ್ಸರ್ಟ್ ನೀಡುತ್ತಾರೆ. ತಮ್ಮದೇ ಬ್ಯಾಂಡ್ ಹೊಂದಿರೋ ಅರಿಜಿತ್, ಅವರನ್ನು ಕರೆದುಕೊಂಡು ಹೋಗಿ ಡ್ಯಾನ್ಸ್ ಮಾಡಿಸುತ್ತಾರೆ. ಅವರನ್ನು ಭೇಟಿ ಮಾಡಬೇಕು ಎಂಬುದು ಅನೇಕರ ಆಸೆ. ಅವರು ಬಾಲಿವುಡ್ಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರು. ಅರಿಜಿತ್ ಸಿಂಗ್ ಅವರು ವಿವಾಹ ಫಂಕ್ಷನ್ ಅಥವಾ ಇನ್ನಿತರ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಲು 5 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.
ಅರಿಜಿತ್ ಸಿಂಗ್ ಅವರು ಬೆಳಕಿಗೆ ಬಂದಿದ್ದು ರಿಯಾಲಿಟಿ ಶೋಗಳ ಮೂಲಕ ಆ ಬಳಿಕ ಅವರಿಗೆ ಸಿನಿಮಾ ಹಾಡುಗಳನ್ನು ಹಾಡೋ ಆಫರ್ಗಳು ಬಂದವು. ಮೊದಲು ಒಂದು ರೀತಿಯ ಧ್ವನಿ ಹೊಂದಿದ್ದ ಅವರು, ನಂತರ ಅದನ್ನು ಹಾಡಿಗಾಗಿ ಬದಲಾಯಿಸಿಕೊಂಡರು. ‘ಆಯಾತ್’, ‘ಸೋಚ್ ನಾ ಸಕೆ’, ‘ಲಾಲ್ ಇಷ್ಕ್’, ‘ಚನ್ನ ಮೆರೆಯಾ..’, ‘ಫಿರ್ ಲೇ ಆಯಾ ದಿಲ್’, ‘ತುಮ್ ಹಿ ಹೋ’ ಸೇರಿ ಅನೇಕ ಹಿಂದಿ ಹಾಡುಗಳನ್ನು ಹಾಡಿದ್ದರು.
ಅರಿಜಿತ್ ಸಿಂಗ್ ಅವರು ಕನ್ನಡದಲ್ಲಿ ಹಾಡಿದ್ದು ಕಡಿಮೆ. ಅವರ ಕಂಠದಲ್ಲಿ ಕೇವ 2 ಕನ್ನಡ ಹಾಡುಗಳು ಬಂದಿವೆ. 2014ರಲ್ಲಿ ರಿಲೀಸ್ ಆದ ಪುನೀತ್ ನಟನೆಯ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಡನ್ನು ಅವರು ಹಾಡಿದ್ದರು. ‘ಬ್ರಹ್ಮಾಸ್ತ್ರ’ ಸಿನಿಮಾದ ಕನ್ನಡ ವರ್ಷನ್ ‘ದೇವ ದೇವ..’ ಹಾಡನ್ನು ಹಾಡಿದ್ದರು.
ಇದನ್ನೂ ಓದಿ: ಕೋಟಿ ಕೋಟಿ ಹಣ ಇದ್ದರೂ ಸ್ಕೂಟರ್ನಲ್ಲಿ ಓಡಾಡ್ತಾರೆ ಅರಿಜಿತ್ ಸಿಂಗ್
ಅರಿಜಿತ್ ಸಿಂಗ್ ತುಂಬಾನೇ ಸಿಂಪಲ್ ವ್ಯಕ್ತಿ. ಅವರು ಅನೇಕ ಬಾರಿ ತಮ್ಮ ಸ್ಕೂಟರ್ನಲ್ಲಿ ಪ್ರಯಾಣ ಬೆಳೆಸಿದ ಉದಾಹರಣೆ ಇದೆ. ಸಾರ್ವಜನಿಕವಾಗಿ ಅವರು ಈ ರೀತಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದ ಸಾಕಷ್ಟು ಉದಾಹರಣೆ ಇದೆ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







