ಕೋಟಿ ಕೋಟಿ ಹಣ ಇದ್ದರೂ ಸ್ಕೂಟರ್‌ನಲ್ಲಿ ಓಡಾಡ್ತಾರೆ ಅರಿಜಿತ್ ಸಿಂಗ್
ಕೋಟ್ಯಾಧಿಪತಿ ಗಾಯಕ ಅರಿಜಿತ್ ಸಿಂಗ್ ಅವರ ಸರಳ ಜೀವನ ಶೈಲಿ ಅನೇಕರಿಗೆ ಇಷ್ಟ ಆಗುತ್ತದೆ. ದುಬಾರಿ ಕಾರುಗಳನ್ನು ಹೊಂದಿದ್ದರೂ, ಅವರು ಕೆಲವೊಮ್ಮೆ ಸ್ಕೂಟರ್ ಬಳಸುತ್ತಾರೆ. ಇದು ಅವರ ಸರಳತೆಯನ್ನು ಪ್ರತಿಬಿಂಬಿಸುತ್ತದೆ. ರಸ್ತೆ ಬದಿಯಲ್ಲಿ ಸ್ಕೂಟರ್‌ನಲ್ಲಿ ಕಾಣಿಸಿಕೊಂಡ ಅವರ ವಿಡಿಯೋ ವೈರಲ್ ಆಗಿದೆ.
ಸೆಲೆಬ್ರಿಟಿಗಳ ಜೀವನ ಶೈಲಿ ಸಖತ್ ಭಿನ್ನ. ಅವರ ಬಳಿ ಸಾಕಷ್ಟು ಹಣ ಇರುತ್ತದೆ. ಈ ಕಾರಣಕ್ಕೆ ಅವರು ದುಬಾರಿ ಕಾರಿನಲ್ಲಿ ಪ್ರಯಾಣ ಮಾಡುತ್ತಾರೆ. ಉಳಿದುಕೊಳ್ಳೋದು ಐಷಾರಾಮಿ ಮನೆಯಲ್ಲಿ. ಇದು ಸ್ಟೇಟಸ್ನ ಸಿಂಬೋಲ್ ಎಂಬ ನಂಬಿಕೆಯೂ ಅವರದ್ದು. ಈ ಕಾರಣದಿಂದಲೇ ದುಬಾರಿ ಕಾರಿನಲ್ಲಿ ಓಡಾಡುತ್ತಾರೆ. ಒಬ್ಬೊಬ್ಬ ಸೆಲಬ್ರಿಟಿ ಬಳಿ ಕೋಟಿ ರೂಪಾಯಿ ಕಾರು ಇರುತ್ತದೆ. ಆದರೆ, ಗಾಯಕ ಅರಿಜಿತ್ ಸಿಂಗ್ ಅವರು ಇದಕ್ಕೆ ಭಿನ್ನ. ಅವರು ಕೋಟಿ ರೂಪಾಯಿ ಕೊಟ್ಟು ಕಾರು ಖರೀದಿ ಮಾಡಿದ್ದಾರೆ ನಿಜ. ಆದರೆ, ಅವರು ಓಡಾಡೋಕೆ ಸ್ಕೂಟರ್ ಬಳಕೆ ಮಾಡುತ್ತಾರೆ.
ಅರಿಜಿತ್ ಸಿಂಗ್ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರು ಸದಾ ಸುತ್ತಾಟ ನಡೆಸುತ್ತಾ ಇರುತ್ತಾರೆ. ಈ ವೇಳೆ ಅವರು ಸ್ಕೂಟರ್ ಬಳಕೆ ಮಾಡುತ್ತಾರೆ. ಮನೆಯ ಸುತ್ತ ಮುತ್ತ ಓಡಾಟ ಮಾಡಲು ಅವರು ಸ್ಕೂಟರ್ನೇ ಬಳಕೆ ಮಾಡಲು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಅವರು ಅನೇಕ ಬಾರಿ ಸ್ಕೂಟರ್‌ನಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. ಅವರ ಹಲವು ವಿಡಿಯೋಗಳು ವೈರಲ್ ಆಗಿವೆ.
ಅರಿಜಿತ್ ಸಿಂಗ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅರಿಜಿತ್ ಅವರು ರಸ್ತೆ ಬದಿಯಲ್ಲಿ ಸ್ಕೂಟರ್‌ನಲ್ಲಿ ನಿಂತಿರೋ ವಿಡಿಯೋ ಇದೆ. ಈ ವಿಡಿಯೋ ಸದ್ಯ ಸೆನ್ಸೇಷನ್ ಸೃಷ್ಟಿ ಮಾಡುತ್ತಿದೆ. ಅವರನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಅವರನ್ನು ಟ್ರೋಲ್ ಮಾಡುವ ಪ್ರಯತ್ನ ಮಾಡಿದ್ದಾರೆ. ಅವರು ಹೆಲ್ಮೆಟ್ ಏಕೇ ಧರಿಸಿಲ್ಲ ಎಂದು ಪ್ರಶ್ನೆ ಮಾಡುತ್ತಾ ಇದ್ದಾರೆ.
View this post on Instagram
ಅರಿಜಿತ್ ಸಿಂಗ್ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಅವರು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು ಸಾಕಷ್ಟು ಕಾನ್ಸರ್ಟ್ಗಳನ್ನು ಮಾಡುತ್ತಾರೆ. ಆದರೆ, ದುಡ್ಡಿಗಾಗಿ ಅವರು ಎಂದಿಗೂ ವಿವಾಹಗಳಲ್ಲಿ ಹಾಡನ್ನು ಹಾಡಿಲ್ಲ ಅನ್ನೋದು ವಿಶೇಷ.
ಇದನ್ನೂ ಓದಿ: ಕ್ಯಾಪ್ಟನ್ ಭವ್ಯಾ ಗೌಡ ನಿರ್ಧಾರಗಳಿಗೆ ಹೊತ್ತಿ ಉರಿದ ಮನೆ; ಆಪ್ತೆ ಮೇಲೆ ತ್ರಿವಿಕ್ರಂಗೆ ಮೂಡಿದೆ ಹೊಟ್ಟೆಕಿಚ್ಚು?
ಅರಿಜಿತ್ ಸಿಂಗ್ ಅವರ ನೆಟ್ವರ್ತ್ 414 ಕೋಟಿ ರೂಪಾಯಿ ಇದೆ. ಅವರು ಪ್ರತಿ ಹಾಡಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಕಾನ್ಸರ್ಟ್ಗಳನ್ನು ಕೂಡ ನಡೆಸುತ್ತಾರೆ. ಆದಾಗ್ಯೂ ಅವರು ಇಷ್ಟು ಸಿಂಪಲ್ ಜೀವನ ನಡೆಸುತ್ತಿರುವ ಕಾರಣಕ್ಕೆ ಅನೇಕರಿಗೆ ಇಷ್ಟ ಆಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.